• Home  
  • ಪಡುಬಿದ್ರಿ : ರಾಗ್ ರಾಂಗ್ ಕಲ್ಚರಲ್, ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನವೀನಚಂದ್ರ ಜೆ ಶೆಟ್ಟಿಯವರಿಗೆ ಸನ್ಮಾನ (Padubidri: Rag Rang Cultural and Sports Club felicitates Naveen Chandra J Shetty)
- ಸಂಘ, ಸಂಸ್ಥೆಗಳು

ಪಡುಬಿದ್ರಿ : ರಾಗ್ ರಾಂಗ್ ಕಲ್ಚರಲ್, ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನವೀನಚಂದ್ರ ಜೆ ಶೆಟ್ಟಿಯವರಿಗೆ ಸನ್ಮಾನ (Padubidri: Rag Rang Cultural and Sports Club felicitates Naveen Chandra J Shetty)

Share: (Padubidri) ಪಡುಬಿದ್ರಿ : ರಾಗ್ ರಾಂಗ್ ಕಲ್ಚರಲ್, ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನವೀನಚಂದ್ರ ಜೆ ಶೆಟ್ಟಿಯವರಿಗೆ ಸನ್ಮಾನ ಪಡುಬಿದ್ರಿ: ರಾಗ್ ರಾಂಗ್ ಕಲ್ಚರಲ್, ಸ್ಪೋರ್ಟ್ಸ್ ಕ್ಲಬ್ ವತಿಯಿಂದ, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ 20 ನೇ ವರ್ಷದ “ಸ್ಟಾರ್ ನೈಟ್” ಸಾಂಸ್ಕೃತಿಕ ಕಾರ್ಯಕ್ರಮವು ವಿಶ್ವಾಸ್ ವಿ. ಅಮೀನ್ ಸಾರಥ್ಯದಲ್ಲಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ನಮ್ಮ ಊರ ಜಾತ್ರೆಯಲ್ಲಿ […]

ಪಡುಬಿದ್ರಿ: ರಾಗ್ ರಾಂಗ್ ಕಲ್ಚರಲ್, ಸ್ಪೋರ್ಟ್ಸ್ ಕ್ಲಬ್ ವತಿಯಿಂದ, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ 20 ನೇ ವರ್ಷದ “ಸ್ಟಾರ್ ನೈಟ್” ಸಾಂಸ್ಕೃತಿಕ ಕಾರ್ಯಕ್ರಮವು ವಿಶ್ವಾಸ್ ವಿ. ಅಮೀನ್ ಸಾರಥ್ಯದಲ್ಲಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಉದ್ಘಾಟಿಸಿದರು.

ಈ ಸಂದರ್ಭ ಅವರು ಮಾತನಾಡಿ, ನಮ್ಮ ಊರ ಜಾತ್ರೆಯಲ್ಲಿ ವಿಭಿನ್ನವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಭಗವಂತನಿಗೆ ಸಮರ್ಪಿಸುವ ಒಳ್ಳೆಯ ಕಾರ್ಯವನ್ನು ಸಂಸ್ಥೆ ನಡೆಸುತ್ತಾ ಬಂದಿರುವುದು ಶ್ಲಾಘನೀಯ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ತಾಲೂಕು ಪಂಚಾಯತ್‌ ಸದಸ್ಯ ನವೀನಚಂದ್ರ ಜೆ ಶೆಟ್ಟಿ ಮಾತನಾಡಿ, ನಿರಂತರವಾಗಿ 20 ವರ್ಷಗಳಿಂದ ವಿಭಿನ್ನ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸಿರುವುದು ಹೆಮ್ಮೆಯ ವಿಷಯ. ಯುವ ಜನತೆ ನಮ್ಮ ದೇಶದ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಬೆಳೆಸುವಲ್ಲಿ ತೊಡಗಿಸಿ ಕೊಳ್ಳಬೇಕೆಂದರು.

   ಈ ಸಂದರ್ಭದಲ್ಲಿ ಸಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ  ಮಾಜಿ .ತಾ. ಪಂ. ಸದಸ್ಯರಾದ ನವೀನಚಂದ್ರ ಜೆ ಶೆಟ್ಟಿ ಹಾಗೂ ಉದ್ಯಮಿ ಬೋಳ ಪ್ರಶಾಂತ್ ಕಾಮತ್ ರವನ್ನು ಸನ್ಮಾನಿಸಲಾಯಿತು.  

 ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್  ಆರ್‌ ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಂದ್ರ ಶೆಟ್ಟಿ , ಕಾಂಚನ್ ಹುಂಡೈ ಸಂಸ್ಥೆಯ ಅಡಳಿತ ನಿರ್ದೇಶಕ   ಪ್ರಸಾದ್ ಕಾಂಚನ್, ಅದಾನಿ ಫೌಂಡೇಶನ್ ಅಧ್ಯಕ್ಷ  ಕಿಶೋರ್ ಅಳ್ವ,  ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ, ಹರಿಪ್ರಸಾದ್ ರೈ, ಮಿಥನ್ ಹೆಗ್ಡೆ, ದಮಯಂತಿ ಅಮೀನ್, ಶಿವಕುಮಾರ್ ಕರ್ಜೆ, ಸುಕುಮಾರ್ ಶೆಟ್ಟಿ, ದೀಪಕ್ ಎರ್ಮಾಳ್, ರೂಪೇಶ್  ಕಲ್ಮಾಡಿ, ಗಣೇಶ್ ಅಚಾರ್ಯ ಉಚ್ಚಿಲ, ನವೀನ್ ಎನ್.ಶೆಟ್ಟಿ, ಅಶೋಕ್ ಸಾಲ್ಯಾನ್, ರಚನ್ ಸಾಲ್ಯಾನ್, ಸಂತೋಷ್ ಪಡುಬಿದ್ರಿ, ಚಲನಚಿತ್ರ ನಟಿ ವನ್ಸಿಟಾ ಡಯಾಸ್, ಗಿಚ್ಚಗಿಲಿ ಗಿಲಿ ರಿಯಾಲಿಟಿ ಖ್ಯಾತಿಯ ದಿಕ್ಷಾ ಬ್ರಹ್ಮಾವರ,  ರೂಪದರ್ಶಿ ಸಿಂಚನಾ ಪ್ರಕಾಶ್, ಬಹುಭಾಷಾ ಚಲನಚಿತ್ರ ನಟಿ ಚಿರಾಶ್ರೀ ಅಂಚನ್ ,    ಉಪಸ್ಥಿತರಿದ್ದರು.

    ಡ್ರೀಮ್ಸ್ ಗರ್ಲ್ಸ್  ನೃತ್ಯ ತಂಡದವರಿಂದ ನೃತ್ಯ ವೈಭವ  ಹಾಗೂ ಶಶಿ ಮ್ಯೂಸಿಕಲ್ ಪಡುಬಿದ್ರಿ ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮವು ನಡೆಯಿತು.   ಸಂಸ್ಥೆಯ ಅಧ್ಯಕ್ಷ  ವಿಶ್ವಾಸ್ ಅಮೀನ್ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ನಿರೂಪಿಸಿ, ವಂದಿಸಿದರು

Leave a comment

Your email address will not be published. Required fields are marked *

eMedia Kannada  @2025. All Rights Reserved.