ಎ. 10 – 16 : ಉಚ್ಚಿಲಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ಮನ್ಮಹಾ ರಥೋತ್ಸವ
(Uchila) ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವರ್ಷಾವಧಿ ಶ್ರೀ ಮನ್ಮಹಾರಥೋತ್ಸವ ಏ.10 ರಿಂದ 16ರ ವರೆಗೆ ನಡೆಯಲಿದೆ.
ಏ.10ರಂದು ಬೆಳಗ್ಗೆ 6 ಗಂಟೆಯಿಂದ ಪ್ರಾತಃಕಾಲ ಪೂಜೆಗಳು, ತೋರಣ ಮುಹೂರ್ತ, ಸಂಜೆ 4 ಗಂಟೆಗೆ ಹೊರೆ ಕಾಣಿಕೆ ಮೆರವಣಿಗೆ, ರಾತ್ರಿ 6 ಗಂಟೆಯಿಂದ ಮುಹೂರ್ತ ಬಲಿ, ಸಪ್ತಶುದ್ದಿ, ಪ್ರಾಸಾದ ಹೋಮಾದಿಗಳು ನಡೆಯಲಿವೆ.
ಏ.11ರಂದು ಬೆಳಗ್ಗೆ 5ರಿಂದ ಕಲಶಾ ಅಂಕುರಾರೋಪಣ, ಏ.12 ಬೆಳಗ್ಗೆ 5 ಗಂಟೆಯಿಂದ ಕಲಶಾಭಿಷೇಕ, ಸಾಮೂಹಿಕ ಪ್ರಾರ್ಥನೆ, 6.45ರಿಂದ ಧ್ವಜಾರೋಹಣ, ನವಕ ಪ್ರಧಾನ ಕಲಶಾಭಿಷೇಕ, ಸಂಜೆ ಮುಹೂರ್ತ ಬಲಿ ನೆರವೇರಲಿದೆ.
ಏ.14ರಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಮಹಾಲಕ್ಷ್ಮೀ ರಥಾರೋಹಣ, ಮಧ್ಯಾಹ್ನ 12.30ರಿಂದ ಮಹಾ ಅನ್ನ ಸಂತರ್ಪಣೆ, ರಾತ್ರಿ 8 ಗಂಟೆಗೆ ಶ್ರೀಮನ್ಮಹಾ ರಥೋತ್ಸವ ನಡೆಯಲಿದೆ.
ಸಂಜೆ 7 ರಿಂದ ರಜತಪಾಲಕಿ ಉತ್ಸವ, ವಿಮಾನೋತ್ಸವ, ಓಲಗ ಮಂಟಪ ಪೂಜೆ, ರಾತ್ರಿ 11.30 ಮಹಾರಂಗಪೂಜೆ, ಆಯನೋತ್ಸವ, ಏ.13ರಂದು 9.30ರಿಂದ ನಾಗಾಲಯದಲ್ಲಿ ನವಕ ಪ್ರಧಾನ ಮಧ್ಯಾಹ್ನ 12.30ರಿಂದ ಶ್ರೀ ಮಹಾಲಕ್ಷ್ಮೀ ಸನ್ನಿಧಿಯಲ್ಲಿ ಪ್ರಧಾನ ಯಾಗ, ರಾತ್ರಿ 11 ಗಂಟೆಯಿಂದ ಕೆರೆಕಟ್ಟೆ ಪೂಜೆ, ಭುಜಂಗ ಬಲಿ ಸೇವೆಗಳು ನಡೆಯಲಿವೆ. ಹೋಮ, ಕಲಶಾಭಿಷೇಕ, ಆಶ್ವೇಷಾ ಬಲಿ,
ಏ.14ರ ಬೆಳಗ್ಗೆ 5 ಗಂಟೆಯಿಂದ ರಥಾಧಿವಾಸ ಹೋಮ, ರಥ ಸಂಪ್ರೋಕ್ಷಣೆ, ಪಲ್ಲಪೂಜೆ, ಸಾಮೂಹಿಕ ಪ್ರಾರ್ಥನೆ, ರಥಾರೋಹಣ ಬಲಿ, ರಥಾರೋಹಣ ನೃತ್ಯ ದರ್ಶನ, ಮಧ್ಯಾಹ್ನ 12 ಗಂಟೆಗೆ ಮಹಾ ರಥಾರೋಹಣ, ಮಧ್ಯಾಹ್ನ 1ರಿಂದ 4 ವರೆಗೆ ಮಹಾ ಅನ್ನಸಂತರ್ಪಣೆ, ಸಂಜೆ 5.30ಕ್ಕೆ ಶ್ರೀ ಭದ್ರಕಾಳಿ ಅಮ್ಮನವರ ದರ್ಶನ, ರಾತ್ರಿ ತಿರಿಂದ ಶ್ರೀಮನ್ಮಹಾರ ಥೋತ್ಸವ, ಉತ್ಸವ ಬಲಿ, ಚೆಂಡೆ ಬಲಿ, ನಾಗಸ್ವರ ಬಲಿ, ರಾತ್ರಿ 9.30ರಿಂದ ರಜತ ಪಾಲಕಿ ಉತ್ಸವ ಬಲಿ, ಶ್ರೀ ಮಹಾಲಕ್ಷ್ಮೀ ಓಲಗ, ಅಷ್ಟಾವಧಾನ ಸೇವೆ, ಶಯ ನೋತ್ಸವ, ಕವಾಟಪೂರಣ ನಡೆಯಲಿದೆ.
ಏ.15ರಂದು ಬೆಳಗ್ಗೆ ಕವಾಟೋದ್ಘಾಟನೆ, ಚೂರ್ಣೋತ್ಸವ, ತುಲಾಭಾರಾದಿ ಸೇವೆಗಳು, ರಾತ್ರಿ 7.30ರಿಂದ ಓಕುಳಿ, ಕೆರೆ ದೀಪೋತ್ಸವ, ಅವಕೃತ ಸ್ನಾನ, ಅಕೇಳಿ, ಧ್ವಜಾವರೋಹಣ, ಏ.16ರಂದು ಬೆಳಗ್ಗೆ 6.30ರಿಂದ ಮಹಾಸಂಪ್ರೋಕ್ಷಣೆ, ಮಹಾ ಹೋಮ, ರಾತ್ರಿ ಭದ್ರಕಾಳಿ ಕುರುಜಿ ತರ್ಪಣ ಸಹಿತ ಧಾರ್ಮಿಕ ವಿಧಿಗಳು ನಡೆಯಲಿವೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

