• Home  
  • ಉಡುಪಿ‌ ; ಅಸ್ಟ್ರೋ ಮೋಹನ್‌ರವರಿಗೆ ಇಟೆಲಿಯ ಜೆವೆಲ್ಸ್ ಸರ್ಕಿಟ್ 2025 ಛಾಯಾಚಿತ್ರ ಸ್ಪರ್ಧೆಯಲ್ಲಿ ಚಿನ್ನದ ಪದಕ(Udupi; Astro Mohan wins gold medal in Italy’s Jewels Circuit 2025 photography competition)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ಉಡುಪಿ‌ ; ಅಸ್ಟ್ರೋ ಮೋಹನ್‌ರವರಿಗೆ ಇಟೆಲಿಯ ಜೆವೆಲ್ಸ್ ಸರ್ಕಿಟ್ 2025 ಛಾಯಾಚಿತ್ರ ಸ್ಪರ್ಧೆಯಲ್ಲಿ ಚಿನ್ನದ ಪದಕ(Udupi; Astro Mohan wins gold medal in Italy’s Jewels Circuit 2025 photography competition)

Share: ಉಡುಪಿ‌ ; ಅಸ್ಟ್ರೋ ಮೋಹನ್‌ರವರಿಗೆ ಇಟೆಲಿಯ ಜೆವೆಲ್ಸ್ ಸರ್ಕಿಟ್ 2025 ಛಾಯಾಚಿತ್ರ ಸ್ಪರ್ಧೆಯಲ್ಲಿ ಚಿನ್ನದ ಪದಕ (Udupi) ಉಡುಪಿ: ಉದಯವಾಣಿ ಪತ್ರಿಕೆಯ ಹಿರಿಯ ಛಾಯಾಗ್ರಾಹಕ,  ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಅಸ್ಟ್ರೋ ಮೋಹನ್ ಅವರು ಇಟೆಲಿಯಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಎರಡು ಪ್ರಮುಖ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಭಾವನಾತ್ಮಕ ಛಾಯಾಚಿತ್ರ “ಶ್ವಾಸಕ್ಕಾಗಿ ಹೋರಾಟ” (Fight for Breath)ಗೆ ಕೆಳಗಿನ ಗೌರವಗಳು ಲಭಿಸಿವೆ:   GRAN PRIX ZAFFIRI – ಚಿನ್ನದ ಪದಕ, GRAN PRIX RUBINI […]

(Udupi) ಉಡುಪಿ: ಉದಯವಾಣಿ ಪತ್ರಿಕೆಯ ಹಿರಿಯ ಛಾಯಾಗ್ರಾಹಕ,  ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಅಸ್ಟ್ರೋ ಮೋಹನ್ ಅವರು ಇಟೆಲಿಯಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಎರಡು ಪ್ರಮುಖ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಅವರ ಭಾವನಾತ್ಮಕ ಛಾಯಾಚಿತ್ರ “ಶ್ವಾಸಕ್ಕಾಗಿ ಹೋರಾಟ” (Fight for Breath)ಗೆ ಕೆಳಗಿನ ಗೌರವಗಳು ಲಭಿಸಿವೆ:

  GRAN PRIX ZAFFIRI – ಚಿನ್ನದ ಪದಕ, GRAN PRIX RUBINI –  ಅತ್ಯುತ್ತಮ ಕೃತಿ – ಪತ್ರಿಕೋದ್ಯಮ ಛಾಯಾಚಿತ್ರ ಥೀಮ್ (ಬಣ್ಣ/ಕಪ್ಪುಬಿಳುಪಿನಲ್ಲಿ)

ಮಾನವ ಜೀವನದ ನಿಜಸ್ಥಿತಿ, ಹೋರಾಟ ಮತ್ತು ನಿಶ್ಶಬ್ದ ಪ್ರಾರ್ಥನೆಯ ಕ್ಷಣವನ್ನು ಸೆರೆಹಿಡಿದಿರುವ ಈ ಛಾಯಾಚಿತ್ರವು ಅದರ ಭಾವನಾತ್ಮಕ ಪತ್ರಿಕೋದ್ಯಮೀಯ ಮೌಲ್ಯ ಮತ್ತು ತಾಂತ್ರಿಕ ಶ್ರೇಷ್ಠತೆಗೆ ಅಂತರ್‌ ರಾಷ್ಟ್ರೀಯ ತೀರ್ಪುಗಾರರಿಂದ ಪ್ರಶಂಸೆಗೆ ಪಾತ್ರವಾಯಿತು.

“ಈ ಚಿತ್ರವು ನೋವಿನ ಒಂದು ಕ್ಷಣದಲ್ಲಿ ಹುಟ್ಟಿದ ಸತ್ಯದ ಪ್ರತೀಕವಾಗಿದೆ. ಇದನ್ನು ಪ್ರಪಂಚದ ದೃಷ್ಠಿಗೆ ತರುವ ಅವಕಾಶ ನನ್ನೆದುರು ಬಂದಿದೆ ಎಂಬುದೇ ನನ್ನ ಹೆಮ್ಮೆಯ ವಿಷಯವಾಗಿದೆ. ಈ ಗೌರವವು ನನ್ನದ್ದಾಗಿರದೇ, ಇದು ಪ್ರತಿಯೊಂದು ಮೌನ ಹೋರಾಟದ ಕಣ್ಮರೆಯಾದ ಸತ್ಯಕ್ಕೆ ಸಲ್ಲುವ ಗೌರವ,” ಎಂದು ಅಸ್ಟ್ರೋ ಮೋಹನ್ ಹೇಳಿದ್ದಾರೆ.

ಅಸ್ಟ್ರೋ ಮೋಹನ್ರವರು ಈಗಾಗಲೇ 800ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿಗಳನ್ನು ಗಳಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಕ್ಯಾನಾನ್ ಇಂಡಿಯಾದ Canon EOS Maestro, ಹಾಗೂ ಹಲವಾರು ಅಂತಾರಾಷ್ಟ್ರೀಯ ಛಾಯಾಗ್ರಾಹಕ ಸಂಸ್ಥೆಗಳ ಗೌರವಾನ್ವಿತ ಸದಸ್ಯರಾಗಿದ್ದು, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸದಸ್ಯರೂ ಆಗಿದ್ದಾರೆ.

 ಭಾರತದಾದ್ಯಂತ ವಿವಿಧ ಕಾಲೇಜುಗಳಲ್ಲಿ ಛಾಯಾಗ್ರಹಣ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಅವರು ಮುಂದಿನ ತಲೆಮಾರಿಗೆ ಪ್ರೇರಣೆಯ ಚಿಲುಮೆಯಾಗಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.