• Home  
  • ಉಡುಪಿ ಶ್ರೀ ಕೃಷ್ಣಮಠದಲ್ಲಿ ಡಾ. ಗಣೇಶ್ ಗಂಗೊಳ್ಳಿ ತಂಡದಿಂದ ಜಾನಪದ, ದಾಸವಾಣಿ (Folklore, Dasavani by Dr. Ganesh Gangolli’s team at Udupi Sri Krishna Math)
- ಮನೋರಂಜನೆ

ಉಡುಪಿ ಶ್ರೀ ಕೃಷ್ಣಮಠದಲ್ಲಿ ಡಾ. ಗಣೇಶ್ ಗಂಗೊಳ್ಳಿ ತಂಡದಿಂದ ಜಾನಪದ, ದಾಸವಾಣಿ (Folklore, Dasavani by Dr. Ganesh Gangolli’s team at Udupi Sri Krishna Math)

Share: ಉಡುಪಿ ಶ್ರೀ ಕೃಷ್ಣಮಠದಲ್ಲಿ ಡಾ. ಗಣೇಶ್ ಗಂಗೊಳ್ಳಿ ತಂಡದಿಂದ ಜಾನಪದ, ದಾಸವಾಣಿ ಪರ್ಯಾಯ ಶ್ರೀಪಾದರಿಂದ ಎಲ್ಲಾ ಕಲಾವಿದರಿಗೂ ಆಶೀರ್ವಾದ, ಅಭಿನಂದನೆ (Udupi) ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ ಇವರ ಶ್ರೀ ಕೃಷ್ಣ  ಅಷ್ಟಮಿಯ ವಿಶೇಷ 48 ದಿನದ ಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ   ಪ್ರಸಿದ್ಧ ಗಾಯಕ ಕರ್ನಾಟಕ ಸರಕಾರದ ಜಾನಪದ ಆಕಾಡೆಮಿ ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಡಾ. ಗಣೇಶ್ ಗಂಗೊಳ್ಳಿ ಇವರ ಬಳಗದವರಿಂದ ಜಾನಪದ ಮತ್ತು ದಾಸವಾಣಿ ಸಂಗೀತ ಕಾರ್ಯಕ್ರಮ […]

(Udupi) ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ ಇವರ ಶ್ರೀ ಕೃಷ್ಣ  ಅಷ್ಟಮಿಯ ವಿಶೇಷ 48 ದಿನದ ಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ   ಪ್ರಸಿದ್ಧ ಗಾಯಕ ಕರ್ನಾಟಕ ಸರಕಾರದ ಜಾನಪದ ಆಕಾಡೆಮಿ ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಡಾ. ಗಣೇಶ್ ಗಂಗೊಳ್ಳಿ ಇವರ ಬಳಗದವರಿಂದ ಜಾನಪದ ಮತ್ತು ದಾಸವಾಣಿ ಸಂಗೀತ ಕಾರ್ಯಕ್ರಮ ಜರುಗಿತು.

 ಪಕ್ಕ ವಾದ್ಯದಲ್ಲಿ ಚಂದನ ವಾಹಿನಿ ಬೆಂಗಳೂರು ಇದರ   ಗಾನ ಗರಡಿ ಕಲಾವಿದರು ಶ್ರಮಿಸಿದ್ದರು.

ಕೀಬೋರ್ಡ್ – ಕಿರಣ್ ಬೆಂಗಳೂರು, ಕೊಳಲು-ಗಣೇಶ್ ಕೆ. ಎಸ್ ಬೆಂಗಳೂರು, ತಬಲ- ರಾಜೇಶ್ ಭಾಗವತ್ ಮುಲ್ಕಿ, ಪ್ಯಾಡ್- ಸಕಾರಾಮ್ ಹಾವಂಜೆ  ಭಾಗವಹಿಸಿದ್ದರು.

ಸಹ ಗಾಯಕರಾಗಿ ಶ್ರೀ ಮಧು ಸಾಗರ, ಶ್ರೀಮತಿ ವಿಜಯಲಕ್ಷ್ಮಿ ಹಾವಂಜೆ ಇವರು ಭಾಗವಹಿಸಿದ್ದರು.

ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶ್ರೀ ಮಠದ ವತಿಯಿಂದ ಎಲ್ಲಾ ಕಲಾವಿದರನ್ನು  ಪ್ರಸಾದ ನೀಡಿ ಆಶೀರ್ವದಿಸಿದರು.

ಶ್ರೀಮಠದ  ರಮೇಶ್ ಭಟ್ ಸ್ವಾಗತಿಸಿ, ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.