• Home  
  • ದೈವ, ದೇವರ ಅನುಗ್ರಹದಿಂದ ಸತ್ಯದ ಸಾಕ್ಷಾತ್ಕಾರ : ಡಾ. ಹೆಗ್ಗಡೆ (Realization of truth by the grace of God: Dr. Heggade)
- ಧಾರ್ಮಿಕ

ದೈವ, ದೇವರ ಅನುಗ್ರಹದಿಂದ ಸತ್ಯದ ಸಾಕ್ಷಾತ್ಕಾರ : ಡಾ. ಹೆಗ್ಗಡೆ (Realization of truth by the grace of God: Dr. Heggade)

Share: ದೈವ, ದೇವರ ಅನುಗ್ರಹದಿಂದ ಸತ್ಯದ ಸಾಕ್ಷಾತ್ಕಾರ : ಡಾ. ಹೆಗ್ಗಡೆ ಧರ್ಮಸ್ಥಳದಲ್ಲಿ ಧಾರ್ಮಿಕ ಕ್ಷೇತ್ರಗಳ ಮುಖಂಡರ ಧರ್ಮ ಜಾಗೃತಿ ಸಮಾವೇಶ    (Dharmasthala) ಧರ್ಮಸ್ಥಳ:  “ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ, ಧರ್ಮದೇವತೆಗಳ ಅಭಯ ಮತ್ತು ಅಣ್ಣಪ್ಪ ಸ್ವಾಮಿ ರಕ್ಷಣೆಯಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತಿವೆ. ಸತ್ಯದ ಸಾಕ್ಷಾತ್ಕಾರವಾಗುತ್ತಿದೆ. ಜತೆಗೆ ಶಾಂತಿ ನೆಮ್ಮದಿಯೂ ದೊರಕಿದೆ. ಅಲ್ಲದೆ ಧರ್ಮಸ್ಥಳದ ಭಕ್ತರು ಹಾಗೂ ಅಭಿಮಾನಿಗಳ ಪ್ರೀತಿ ವಿಶ್ವಾಸ ಮತ್ತು ಗೌರವದಿಂದ ನಮಗೆ ಎಲ್ಲಾ ಸರ್ವ ಕಾರ್ಯಗಳನ್ನು ಮುಂದುವರಿಸಲು ನವ ಚೈತನ್ಯ ಉತ್ಸಾಹ […]

 (Dharmasthala) ಧರ್ಮಸ್ಥಳ:  “ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ, ಧರ್ಮದೇವತೆಗಳ ಅಭಯ ಮತ್ತು ಅಣ್ಣಪ್ಪ ಸ್ವಾಮಿ ರಕ್ಷಣೆಯಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತಿವೆ. ಸತ್ಯದ ಸಾಕ್ಷಾತ್ಕಾರವಾಗುತ್ತಿದೆ. ಜತೆಗೆ ಶಾಂತಿ ನೆಮ್ಮದಿಯೂ ದೊರಕಿದೆ. ಅಲ್ಲದೆ ಧರ್ಮಸ್ಥಳದ ಭಕ್ತರು ಹಾಗೂ ಅಭಿಮಾನಿಗಳ ಪ್ರೀತಿ ವಿಶ್ವಾಸ ಮತ್ತು ಗೌರವದಿಂದ ನಮಗೆ ಎಲ್ಲಾ ಸರ್ವ ಕಾರ್ಯಗಳನ್ನು ಮುಂದುವರಿಸಲು ನವ ಚೈತನ್ಯ ಉತ್ಸಾಹ ಮೂಡಿಬಂದಿದೆ” ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

 ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಶುಕ್ರವಾರ ಸಂಜೆ ನಡೆದ ಧಾರ್ಮಿಕ ಕ್ಷೇತ್ರಗಳ ಮುಖಂಡರ ‘ಧರ್ಮ ಜಾಗೃತಿ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

  ನಾನು ಧರ್ಮಾಧಿಕಾರಿಯಾಗಿ ‘ಹೆಗ್ಗಡೆ’ ಪೀಠವನ್ನು ಬಯಸಿದವನಲ್ಲ. ಆದರೆ ಅನಿರೀಕ್ಷಿತವಾಗಿ ತೀರ್ಥರೂಪರ ನಿಧನದಿಂದ ನಾನು ಪಟ್ಟ ಸ್ವೀಕರಿಸಬೇಕಾಯಿತು. ಇಲ್ಲಿ ನಾನು ‘ನೆಪ’ ಮಾತ್ರ ಎಲ್ಲಾ ಕಾರ್ಯಗಳು ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ ದೊಂದಿಗೆ ಧರ್ಮದೇವತೆಗಳ ಆಶ್ರಯದಂತೆ ಹಾಗೂ ಅಣ್ಣಪ್ಪ ಸ್ವಾಮಿಯ ರಕ್ಷಣೆಯಿಂದ ಸುಗಮವಾಗಿ ನಡೆಯುತ್ತವೆ ಎಂದರು.

  ವಿದ್ವಾಂಸ ದಾಮೋದರ ಶರ್ಮಾ, ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್, ಕಟೀಲು ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ, ವಿದ್ವಾನ್ ನಾಗೇಂದ್ರ ಭಾರದ್ವಜ ಬೆಳ್ತಂಗಡಿಯ ವಕೀಲ ಬಿಕೆ ಧನಂಜಯ ರಾವ್ ಮುಂತಾದವರು ಮಾತನಾಡಿದರು.

  ಹೇಮಾವತಿ ವಿ. ಹೆಗ್ಗಡೆ, ಶ್ರದ್ಧಾ ಅಮಿತ್, ಡಿ. ಹರ್ಷೇಂದ್ರ ಕುಮಾರ್, ಸೋನಿಯಾ ವರ್ಮ, ವಿಧಾನ ಪರಿಷತ್ ಸದಸ್ಯ ಕೆ ಪ್ರತಾಪ್ ಸಿಂಹ ನಾಯಕ್, ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ,  ಮಾಣಿಲ ಮಠದ ಶ್ರೀ ಮೋಹನದಾಸ್ ಸ್ವಾಮೀಜಿ, ಶಿವಪ್ರಸಾದ್ ಅಜಿಲ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಪ್ರೊ. ಸುವೀರ್ ಕುಮಾರ್ ಸಭೆಯಲ್ಲಿ ತೆಗೆದುಕೊಂಡ ಠರಾವನ್ನು ಮಂಡಿಸಿದರು.

 ಠರಾವಿನ ಪ್ರತಿಯನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ಅವರಿಗೆ ಕಳುಹಿಸಲು ನಿರ್ಧರಿಸಲಾಯಿತು.

ಉಡುಪಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಎಲ್ಲಾ ಧಾರ್ಮಿಕ ಕ್ಷೇತ್ರಗಳು ದೇವಸ್ಥಾನಗಳು ಮತ್ತು  ಶ್ರದ್ಧಾ ಕೇಂದ್ರಗಳ ಮುಖಂಡರು ಹಾಗೂ ಧಾರ್ಮಿಕ ಪರಿಷತ್ತಿನ ಸದಸ್ಯರು ಭಾಗವಹಿಸಿದ್ದರು.

  ಸಮಾವೇಶದಲ್ಲಿ ಮಂಡಿಸಿದ ಠರಾವುಗಳು

 ಸಾಮಾಜಿಕ ಜಾಲತಾಣಗಳು ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಆಗುತ್ತಿರುವ ಸುಳ್ಳು ಸುದ್ದಿಯ ಪ್ರಸಾರವನ್ನು ತಡೆಗಟ್ಟಿ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು.

 ಶ್ರದ್ಧಾ ಕೇಂದ್ರಗಳು ಹಾಗೂ ಧಾರ್ಮಿಕ ನಂಬಿಕೆಗಳ ವಿರುದ್ಧ ಹೇಳಿಕೆ ನೀಡಿ ಶಾಂತಿಭಂಗ ಮಾಡುತ್ತಿರುವ ಸಂಘ ಸಂಸ್ಥೆಗಳ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು.

 ಮುಂದೆ ಇಂತಹ ವ್ಯವಸ್ಥಿತ ಷಡ್ಯಂತ್ರಗಳು ನಡೆದರೆ ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ಸಂಘಟಿತ ಹೋರಾಟ ನಡೆಸಲಾಗುವುದು.

 ಇಂತಹ ಸಂಚುಗಳು ಆಗಾಗ ನಡೆಯುತ್ತಿರುವುದರಿಂದ ಧರ್ಮ ಸಂರಕ್ಷಣಾ ಸಮಿತಿಯನ್ನು ಬಲಪಡಿಸಿ ವರ್ಷಕ್ಕೆ ಒಂದು ಬಾರಿ ಇಂತಹ ಸಮಾವೇಶವನ್ನು ಅಲ್ಲಲ್ಲಿ ಆಯೋಜಿಸಬೇಕು.

 ಎಲ್ಲರೂ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರೊಂದಿಗೆ ದೃಢ ಸಂಕಲ್ಪದಿಂದ ನಿಂತು ಧರ್ಮ ರಕ್ಷಣೆಯನ್ನು ಮಾಡಲು ಕಟ ಬದ್ಧರಾಗಿರುತ್ತೇವೆ ಎಂದು ನಿರ್ಧರಿಸಲಾಯಿತು.

ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಮ್. ಮೋಹನ್ ಅಳ್ವ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಎಸ್ ಡಿಎಂ ಕಾಲೇಜಿನ ಉಪನ್ಯಾಸಕ ಡಾ. ಶ್ರೀಧರ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.