• Home  
  • ಬೆಳಪು ವ್ಯವಸಾಯ ಸಹಕಾರಿ ಸಂಘ : ರೂ. 500 ಕೋಟಿ ವಾರ್ಷಿಕ ವ್ಯವಹಾರ (Belapu Agricultural Cooperative Society: Annual turnover of Rs. 500 crore)
- ವ್ಯವಹಾರ

ಬೆಳಪು ವ್ಯವಸಾಯ ಸಹಕಾರಿ ಸಂಘ : ರೂ. 500 ಕೋಟಿ ವಾರ್ಷಿಕ ವ್ಯವಹಾರ (Belapu Agricultural Cooperative Society: Annual turnover of Rs. 500 crore)

Share: ಬೆಳಪು ವ್ಯವಸಾಯ ಸಹಕಾರಿ ಸಂಘ : ರೂ. ೫೦೦ ಕೋಟಿ ವಾರ್ಷಿಕ ವ್ಯವಹಾರ   ಸದಸ್ಯರಿಗೆ 13% ಡಿವಿಡೆಂಡ್ ಘೋಷಿಸಿದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು. (Paniyuru) ಪಣಿಯೂರು: ಬೆಳಪು ವ್ಯವಸಾಯ ಸಹಕಾರಿ ಸಂಘವು 2024-25 ನೇ ಸಾಲಿನಲ್ಲಿ ಗಣನೀಯ ಅಭಿವೃದ್ಧಿ ಸಾಧಿಸಿದ್ದು, ವಾರ್ಷಿಕ ವ್ಯವಹಾರ ರೂ. 500 ಕೋಟಿ ದಾಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಿನ ಪ್ರಗತಿಯನ್ನು ದಾಖಲಿಸಿ ಗ್ರಾಮೀಣ ಪ್ರದೇಶದಲ್ಲಿ ಉನ್ನತವಾದ ಸಾಧನೆಯನ್ನು ಮಾಡಿರುತ್ತದೆ. ಯಶಸ್ವೀ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ […]

(Paniyuru) ಪಣಿಯೂರು: ಬೆಳಪು ವ್ಯವಸಾಯ ಸಹಕಾರಿ ಸಂಘವು 2024-25 ನೇ ಸಾಲಿನಲ್ಲಿ ಗಣನೀಯ ಅಭಿವೃದ್ಧಿ ಸಾಧಿಸಿದ್ದು, ವಾರ್ಷಿಕ ವ್ಯವಹಾರ ರೂ. 500 ಕೋಟಿ ದಾಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಿನ ಪ್ರಗತಿಯನ್ನು ದಾಖಲಿಸಿ ಗ್ರಾಮೀಣ ಪ್ರದೇಶದಲ್ಲಿ ಉನ್ನತವಾದ ಸಾಧನೆಯನ್ನು ಮಾಡಿರುತ್ತದೆ. ಯಶಸ್ವೀ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಸಂಘವು ಗ್ರಾಹಕರ ವಿಶ್ವಾಸ ಮತ್ತು ಬೆಂಬಲದಿಂದ ಮುಂದಿನ ವರ್ಷ ಒಂದು ಸಾವಿರ ಕೋಟಿ ವಾರ್ಷಿಕ ವ್ಯವಹಾರವನ್ನು ನಡೆಸುವ ಗುರಿಯನ್ನು ಹೊಂದಿದೆ ಎಂದು ಬೆಳಪು ಸಹಕಾರಿ ಸಂಘದ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪುರವರು ಶನಿವಾರ ಸಂಘದ ಪಣಿಯೂರು ಕೇಂದ್ರ ಕಛೇರಿ ಸಭಾಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ತಿಳಿಸಿದ್ದಾರೆ.

ಪ್ರಸಕ್ತ ವರ್ಷ 7.17 ಕೋಟಿ ಸಾರ್ವಕಾಲಿಕ ಲಾಭ ಗಳಿಸಿದ್ದು ವಾರ್ಷಿಕ ನಿವ್ವಳ ಲಾಭ ರೂ. 78ಲಕ್ಷವಾಗಿರುತ್ತದೆ. ಸದಸ್ಯರಿಗೆ 13% ಡಿವಿಡೆಂಡ್ ನೀಡಲಾಗುವುದೆಂದು ಎಂದರು.

   ಸುಮಾರು 280 ಕ್ಕೂ ಮಿಕ್ಕಿ ನವೋದಯ ಸ್ವಸಹಾಯ ಸಂಘಗಳನ್ನು ರಚಿಸಿ ಅದರ ಸದಸ್ಯರ ಬೇಡಿಕೆಗೆ ಅನುಗುಣವಾಗಿ ಸಾಲ ಸೌಲಭ್ಯ ಹಾಗೂ ಇತರ ಸೇವೆಗಳನ್ನು ನೀಡಲಾಗುತ್ತಿದೆ.  

ಮುಂದಿನ ವರ್ಷ ನಮ್ಮ ಸಿಬ್ಬಂದಿಗಳ ಕಾರ್ಯದಕ್ಷತೆಯಿಂದ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಕಾರ್ಯ ಯೋಜನೆ ರೂಪಿಸಿದ್ದು, ಇದಕ್ಕೆ ಎಲ್ಲಾ ಸದಸ್ಯರ ಹಾಗೂ ಗ್ರಾಹಕರ ಸಹಕಾರ ಅತ್ಯಗತ್ಯ ಎಂದು ಸಂಘದ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ಇದೇ ಸಂದರ್ಭ ಸೇವಾ ನಿವೃತ್ತಿಗೊಂಡ ನವೀನ್‌  ಅವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.

  ಸಭೆಯಲ್ಲಿ ಸಂಘದ ಉಪಾಧ್ಯಕ್ಷ ದ್ಯುಮಣಿ ಆರ್ ಭಟ್ ಉಚ್ಚಿಲ, ನಿರ್ದೇಶಕರುಗಳಾದ ಪಾಂಡು ಶೆಟ್ಟಿ,  ಆಲಿಯಬ್ಬ ಉಚ್ಚಿಲ, ಸೈಮನ್ ಡಿಸೋಜ, ಪಾಂಡು ಎಂ ಶೇರಿಗಾರ, ಗೋಪಾಲ ಪೂಜಾರಿ, ಸಾಧು ಶೆಟ್ಟಿ ಕುಂಜೂರು,  ಅನಿತಾ ಆನಂದ, ಮೀನ ಪೂಜಾರ್ತಿ, ವಿಮಲ ಅಂಚನ್,  ಸುಂದರಿ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಬಾಲಗೋಪಾಲ್ ಬಲ್ಲಾಳ್ ಕೆ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸುಲೋಚನ ಹಾಗೂ ಎಲ್ಲಾ ಶಾಖೆಯ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಹಾಗೂ ಸಂಘದ ಸರ್ವ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸುಲೋಚನ ವರದಿ ವಾಚಿಸಿದರು.

ಸಿಬ್ಬಂದಿಗಳಾದ ಸ್ವಾತಿ, ಸುಜಾತಾ ಪ್ರಾರ್ಥಿಸಿದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.