ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್ ವಾರ್ಷಿಕ ಮಹಾಸಭೆ, ಸನ್ಮಾನ
ಅಧ್ಯಕ್ಷ ಎಮ್ ಕೆ ದಿನೇಶ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ
(Udupi) ಉಡುಪಿ : ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್ ವಾರ್ಷಿಕ ಮಹಾಸಭೆ, ಸನ್ಮಾನ ಕಾರ್ಯಕ್ರಮ ಉದ್ಯಾವರ ನಿತ್ಯಾನಂದ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಎಮ್ ಕೆ ದಿನೇಶ್ ಮೂಡಬಿದ್ರಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು.
ಸಂಘದ ಗೌರವಾಧ್ಯಕ್ಷ ದಾಮೋದರ ಪೈ ಕುಂದಾಪುರರವರು ಮಹಾಸಭೆಯ ಪ್ರಾಮುಖ್ಯತೆಯ ಹಾಗೂ ಸಂಘಟನೆಯ ಬಗ್ಗೆ ವಿವರಿಸಿದರು.
ಶ್ರೀಮತಿ ಸುಜಾತಾ ಹರೀಶ್ ಹೆಬ್ರಿ, ಶ್ರೀಮತಿ ಶುಭ ದಾಮೋದರ ಪೈ ಕುಂದಾಪುರ, ಶ್ರೀಮತಿ ವೀಣಾ ಸಂತೋಷ್ ಮೂಡಬಿದ್ರಿ, ಶ್ರೀಮತಿ ಅನಿತಾ ಗಿರೀಶ್ ಮಲ್ಪೆ ಇವರನ್ನು ಸನ್ಮಾನಿಸಲಾಯಿತು.
ಡಿಸೈನರ್ ಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಜಯ್ ಕುಂದಾಪುರ, ರಾಕೇಶ್ ಸುವರ್ಣ ಬೊಳ್ಜೆ, ಶಶಿಕಾಂತ ಶೆಟ್ಟಿ ಕಡೆಕಾರ್ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹೊಸ ಸದಸ್ಯರನ್ನು ಸಂಘಕ್ಕೆ ಸೇರ್ಪಡೆಗೊಳಿಸಲಾಯಿತು.
ಅನಾರೋಗ್ಯಕ್ಕೊಳಪಟ್ಟ ರಾಘವೇಂದ್ರ ಉಡುಪಿಯವರಿಗೆ 25000 ರೂ. ಧನ ಸಹಾಯ ನೀಡಲಾಯಿತು.
ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಕುಂದರ್ ಕೋಟೇಶ್ವರ, ಉಡುಪಿ ಜಿಲ್ಲಾ ಸೈನೇಜ್ ಅಸೋಸಿಯೇಶನ್ ಉಡುಪಿ ಇದರ ಅಧ್ಯಕ್ಷ ರಾಜೇಶ್ ಕುಮಾರ್ ಅಂಬಾಡಿ ಉಪಸ್ಥಿತರಿದ್ದರು.
2025-27 ನೇ ಸಾಲಿನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಮೂಡಬಿದ್ರಿ ನೇತ್ರತ್ವದಲ್ಲಿ 15 ಸದಸ್ಯರ ತಂಡವನ್ನು ರಚಿಸಲಾಯಿತು.
ಸಂಘದ ಕಾರ್ಯದರ್ಶಿ ಗಿರೀಶ್ ಮಲ್ಪೆಯವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಯ ಗಿರೀಶ್ ಮೈಂದನ್ ಮಲ್ಪೆ ವರದಿ ವಾಚಿಸಿದರು. ಸಂಘಟನಾ ಕಾರ್ಯದರ್ಶಿ ಸುನೀಲ್ ಕುಮಾರ್ ಬ್ರಹ್ಮಾವರರವರು ಲೆಕ್ಕಪತ್ರ ಮಂಡಿಸಿದರು.
ಪ್ರಸನ್ನ ಅಜೆಕಾರ್ ಕಾರ್ಯಕ್ರಮ ನಿರೂಪಿಸಿದರು. ಗಿರೀಶ್ ವಂದಿಸಿದರು.

