• Home  
  • ಯುವ ಕಾಂಗ್ರೆಸ್ ಸಮಿತಿ ಆಯೋಜನೆಯಲ್ಲಿ ಶಿರ್ವ ನ್ಯಾರ್ಮ ಸೇತುವೆ ಬಳಿ ಪ್ರತಿಭಟನೆ, ರಸ್ತೆ ತಡೆ (Protest, road blockade near Shirva Nyarma Bridge organized by Youth Congress Committee)
- protest - ರಾಜಕೀಯ

ಯುವ ಕಾಂಗ್ರೆಸ್ ಸಮಿತಿ ಆಯೋಜನೆಯಲ್ಲಿ ಶಿರ್ವ ನ್ಯಾರ್ಮ ಸೇತುವೆ ಬಳಿ ಪ್ರತಿಭಟನೆ, ರಸ್ತೆ ತಡೆ (Protest, road blockade near Shirva Nyarma Bridge organized by Youth Congress Committee)

Share: ಯುವ ಕಾಂಗ್ರೆಸ್ ಸಮಿತಿ ಆಯೋಜನೆಯಲ್ಲಿ ಶಿರ್ವ ನ್ಯಾರ್ಮ ಸೇತುವೆ ಬಳಿ ಪ್ರತಿಭಟನೆ, ರಸ್ತೆ ತಡೆ ಪ್ರತಿಭಟನೆಯಲ್ಲಿ 300 ಕ್ಕೂ ಅಧಿಕ ಸಾರ್ವಜನಿಕರು, ಕಾಂಗ್ರೆಸ್‌ ಕಾರ್ಯಕರ್ತರ ಉಪಸ್ಥಿತಿ (Shirva) ಶಿರ್ವ: ಶಿರ್ವ ಯುವ ಕಾಂಗ್ರೆಸ್ ಸಮಿತಿ ಆಯೋಜನೆಯಲ್ಲಿ ಪಂಜಿಮಾರು – ಶಿರ್ವ – ಪಿಲಾರುಕಾನದ ರಸ್ತೆ ದುರಸ್ತಿಗಾಗಿ ಪ್ರತಿಭಟನೆ ಮತ್ತು ರಸ್ತೆ ತಡೆ ಗುರುವಾರ ಬೆಳಿಗ್ಗೆ ನಡೆಯಿತು.    ಶಿರ್ವ ನ್ಯಾರ್ಮ ಸೇತುವೆ ಬಳಿ 300 ಕ್ಕೂ ಅಧಿಕ ಸಾರ್ವಜನಿಕರು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಸ್ಥಳೀಯ ಶಾಸಕರ […]

(Shirva) ಶಿರ್ವ: ಶಿರ್ವ ಯುವ ಕಾಂಗ್ರೆಸ್ ಸಮಿತಿ ಆಯೋಜನೆಯಲ್ಲಿ ಪಂಜಿಮಾರು – ಶಿರ್ವ – ಪಿಲಾರುಕಾನದ ರಸ್ತೆ ದುರಸ್ತಿಗಾಗಿ ಪ್ರತಿಭಟನೆ ಮತ್ತು ರಸ್ತೆ ತಡೆ ಗುರುವಾರ ಬೆಳಿಗ್ಗೆ ನಡೆಯಿತು.

   ಶಿರ್ವ ನ್ಯಾರ್ಮ ಸೇತುವೆ ಬಳಿ 300 ಕ್ಕೂ ಅಧಿಕ ಸಾರ್ವಜನಿಕರು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಸ್ಥಳೀಯ ಶಾಸಕರ ವಿರುದ್ಧ ಕಿಡಿ ಆಕ್ರೋಶಿತರಾಗಿ ಪ್ರತಿಭಟನೆ ನಡೆಸಿದರು.

  ತಮ್ಮ ಕಾರ್ಯಕರ್ತರ ಮನೆಗಳಿಗೆ ರಸ್ತೆ ಮಾಡುವುದನ್ನು ಬಿಟ್ಟು, ಸಾರ್ವಜನಿಕರಿಗೆ ರಸ್ತೆಯನ್ನು ಮಾಡಿಕೊಡಿ ಎಂದು ಮಾಜಿ ತಾಲೂಕು ಪಂಚಾಯತ್ ಸದಸ್ಯ ಮೈಕಲ್ ರಮೇಶ್ ಡಿಸೋಜ ಸ್ಥಳೀಯ ಶಾಸಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

  ಇವತ್ತಿನ ಪ್ರತಿಭಟನೆಯ ಫಲವಾಗಿ ಬೆಳಿಗ್ಗೆ ಪಂಜಿಮಾರಿನಲ್ಲಿ ಹೊಂಡಗಳಿಗೆ ವೆಟ್ ಮಿಕ್ಸ್ ಹಾಕುವ ಕೆಲಸ ಕಾರ್ಯ ಮಾಡುತ್ತಿದ್ದಾರೆ. ಆದರೆ ನಮಗೆ ಅದು ಬೇಡ ನಮಗೆ ರಸ್ತೆ ದುರಸ್ತಿ ಮಾಡಿಕೊಡಬೇಕಾಗಿ ಆಗ್ರಹಿಸಿದರು.

ಮಾಜಿ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯ ವಿಲ್ಸನ್ ರೊಡ್ರಿಗಸ್ ರವರು ಮಾತನಾಡಿ, ಸ್ಥಳೀಯ ಶಾಸಕರು ಅನುದಾನವನ್ನು ತರಿಸಿ ಕೆಲಸ ಕಾರ್ಯಗಳನ್ನು ಮಾಡಬೇಕು ಅನುದಾನ ಸಿಗದಿದ್ದಲ್ಲಿ, ವಿಧಾನಸಭೆಯಲ್ಲಿ ಧರಣಿ ಕುಳಿತು ಅನುದಾನ ತರಿಸಿ ರಸ್ತೆಯನ್ನು ಮಾಡಿಕೊಡಬೇಕಾಗಿ ಆಗ್ರಹಿಸಿದರು.

 ಪ್ರತಿಭಟನೆಯು ತೀವ್ರ ಗತಿಗೆ ತಿರುಗಿದ್ದು ಪ್ರತಿಭಟನಕಾರರು ರಸ್ತೆ ತಡೆದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿ, ಸ್ಥಳಕ್ಕೆ ಪಿಡಬ್ಲ್ಯುಡಿ ಇಂಜಿನಿಯರ್ ಆಗಮಿಸಿದರೆ ಮಾತ್ರ ನಾವು ವಾಹನಗಳಿಗೆ ಅನುವು ಮಾಡಿ ಕೊಡುತ್ತೇವೆ ಎಂದರು.

 ಶಿರ್ವ ಪೋಲೀಸ್ ಠಾಣಾಧಿಕಾರಿ ಮಂಜುನಾಥ್ ಮರ್ಬದ್ ರವರು ಪಿಡಬ್ಲ್ಯುಡಿ ಅಧಿಕಾರಿಗೆ ದೂರವಾಣಿ ಕರೆ ಮಾಡಿ, ಅವರು ಪ್ರತಿಬಟನಾ ಸ್ಥಳಕ್ಕೆ ಬರುವಂತೆ ತಾಕೀತು ಮಾಡಿದರು.   

  ಸ್ಥಳಕ್ಕೆ ಆಗಮಿಸಿದ ಪಿಡಬ್ಲ್ಯುಡಿ ಅಧಿಕಾರಿ ಮಂಜುನಾಥ್ ರವರು ಪ್ರತಿಭಟನಕಾರರ ಮನವಿ  ಸ್ವೀಕರಿಸಿ, ಇಲಾಖೆಯಿಂದ 8 ಕೋಟಿ ರೂಪಾಯಿಯಲ್ಲಿ ಕಾಮಗಾರಿಯನ್ನು ಉಡುಪಿ ಜಿಲ್ಲಾದ್ಯಂತ ಮಾಡಿರುತ್ತೇವೆ. ಮುಖ್ಯವಾಗಿ ರಸ್ತೆಯ ಇಕ್ಕೆಲಗಳಲ್ಲಿ ಇರುವ ನೀರಿನ ಚರಂಡಿಯನ್ನು ದುರಸ್ತಿ ಮಾಡಿ ಮುಖ್ಯರಸ್ತೆಯ ಹೊಂಡಗಳನ್ನು ಒಂದು ವಾರದೊಳಗೆ ತೇಪೆಹಾಕಿ ಮುಚ್ಚಲಾಗುವುದು. ನಂತರ ಸರಕಾರದ ಅನುದಾನದಿಂದ ಅಕ್ಟೋಬರ್ ನಲ್ಲಿ ಡಾಮಾರು ಹಾಕಿ ರಸ್ತೆಯನ್ನು ದುರಸ್ತಿಪಡಿಸಲಾಗುವುದು ಎಂದು ತಿಳಿಸಿದರು.

   ಅದಕ್ಕೆ ಒಪ್ಪದ ಪ್ರತಿಭಟನಕಾರರು ಇವತ್ತೇ ಅಥವಾ ನಾಳೆಯೇ ರಸ್ತೆಯನ್ನು ದುರಸ್ತಿಪಡಿಸಬೇಕೆಂದು ಪಟ್ಟು ಹಿಡಿದರು. ಪೊಲೀಸರ ಮದ್ಯ ಪ್ರವೇಶದಿಂದ ಪ್ರತಿಭಟನೆಯನ್ನು ಸಮಾಪ್ತಿ ಗೊಳಿಸಲಾಯಿತು.

  ಕಾಪು ಯುವ ಕಾಂಗ್ರೆಸ್‌ ಅಧ್ಯಕ್ಷ ನಿಯಾಜ್‌ ಅಹಮ್ಮದ್‌,  ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ   ಶರ್ಪುದ್ದೀನ್ ಶೇಖ್, ಹಸನಬ್ಬ ಶೇಖ್, ರತನ್ ಶೆಟ್ಟಿ, ರಮೇಶ್ ಬಂಗೇರ, ವಿಲ್ಸನ್ ರೊಡ್ರಿಗಸ್, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಗೀತಾ ವಾಗ್ಲೆ, ಶ್ರೀಮತಿ ಗ್ರೇಸಿ ಕಾರ್ಡೊಜಾ, ಗ್ಲಾಡಿಸ್ ಅಲ್ವೇಡಾ, ಜುಬೇರ್ ಅಲಿ, ಹಸನ್ ಇಬ್ರಾಹಿಂ, ಜೈನುದ್ದೀನ್, ಆಶಾ ಅಂಚನ್, ಶಿರ್ವ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ‌ ಕೀರ್ತನ್ ಪೂಜಾರಿ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕೋಟ್ಯಾನ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ಲತೀಫ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಹಾದ್, ಅರುಣ್ ಪೂಜಾರಿ, ಅಜಯ್ ಪೂಜಾರಿ ಉಪಸ್ಥಿತರಿದ್ದರು.

ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಮೆಲ್ವಿನ್ ಡಿಸೋಜ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.