ತೆಳ್ಳಾರು ಮಸೀದಿ ವತಿಯಿಂದ ಮಹಮ್ಮದ್ ಪೈಗಂಬರ್‌ರವರ 1500ನೇ ಜನ್ಮ ದಿನಾಚರಣೆ
ಧಾರ್ಮಿಕ ಕಾರ್ಯಕ್ರಮ, ಮಕ್ಕಳಿಗೆ ಧಾರ್ಮಿಕ ಕಂಠಪಾಠ, ದಫ್ ಸ್ಪರ್ಧೆ
(Karkal) ಕಾರ್ಕಳ : ಸುನ್ನಿ ಜಾಮಿಯ ಮಸೀದಿ ಹಾಗೂ ಮದ್ರಸ ಫೈಝನೇ ಮುಸ್ತಫಾ ತೆಳ್ಳಾರು ಇದರ ಆಶ್ರಯದಲ್ಲಿ ಸಕಲ ವಿಶ್ವದ ಮನಕುಲಕ್ಕೆ ಶಾಂತಿ, ದಯೆ ಹಾಗೂ ಸತ್ಯದ ಮಾರ್ಗವನ್ನು ಪರಿಚಯಿಸಿದ ಲೋಕ ನಾಯಕರಾದ ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ 1500ನೇ ವರ್ಷದ ಜನ್ಮ ದಿನಾಚರಣೆಯ ಪ್ರಯುಕ್ತ ಸುನ್ನಿ ಜಾಮಿಯ ಮಸೀದಿ ಹಾಗೂ ಮದ್ರಸ ಫೈಝನೇ ಮುಸ್ತಫತೆ ತೆಳ್ಳಾರು ಇದರ ಆಶ್ರಯದಲ್ಲಿ ವಿವಿಧ ಕಾರ್ಯಕ್ರಮಗಳು ನೆರವೇರಿತು.
ಮಸೀದಿಯ ಅಧ್ಯಕ್ಷರಾದ ಮೊಹಮ್ಮದ್ ಜಾವಿದ್ ರವರು ನೇತೃತ್ವ ವಹಿಸಿದ್ದರು.
ಮದ್ರಸ ಮಕ್ಕಳ ಧಾರ್ಮಿಕ ಕಂಠಪಾಠ ಸ್ಪರ್ಧೆ, ಧಫ್ ಜರುಗಿತು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಮಸೀದಿಯ ಧರ್ಮ ಗುರುಗಳಾದ ಆದಿಲ್ ರಝ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಭಾಷಣಗಾರರಾದ ಹಾಜ್ರತ್ ಅಲ್ಲಮ ಮೌಲನ ಹಫೀಝ್ ಇಸ್ತಿಯಕ್ ಅಹಮದ್ ಖಾಜಿಎ ಕಾರವಾರರವರು ಪ್ರವಚನ ನೀಡಿದರು.
ಹಜ್ರತ್ ಅಲ್ಲಮ ಮೌಲನ ಡಾ. ಮೊಹಮ್ಮದ್ ಫಾಸಿಲ್ ರಜ್ವಿ ಕಾವಲಕಟ್ಟೆ ದುವ ನೆರವೇರಿಸಿದರು.
ಮಿಲಾದ್ ಕಮಿಟಿಯ ಅಧ್ಯಕ್ಷರಾದ ಶೇಕ್ ರಜ್ಜಬ್ ಅತಿಥಿಗಳನ್ನು ಸ್ವಾಗತಿಸಿದರು. ಮೌಲಾನ ತೌಪಿಕ್ ಅಹಮದ್ ವಂದಿಸಿದರು.

