• Home  
  • ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ “ಮುಷ್ಠಿ ಅಕ್ಕಿ ಕಾಣಿಕೆ ಸೇವೆಗೆ ಚಾಲನೆ” (“Mushti Akki Kanike Seve” Initiation starts at Sri Mahalakshmi Temple Uchila)
- ಧಾರ್ಮಿಕ

ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ “ಮುಷ್ಠಿ ಅಕ್ಕಿ ಕಾಣಿಕೆ ಸೇವೆಗೆ ಚಾಲನೆ” (“Mushti Akki Kanike Seve” Initiation starts at Sri Mahalakshmi Temple Uchila)

Share: ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ “ಮುಷ್ಠಿ ಅಕ್ಕಿ ಕಾಣಿಕೆ ಸೇವೆಗೆ ಚಾಲನೆ“ ದೇವಳದ ರುವಾರಿ ನಾಡೋಜ ಡಾ. ಜಿ. ಶಂಕರ್ ರವರಿಂದ ಚಾಲನೆ   (Uchila) ಉಚ್ಚಿಲ : ಉಚ್ಚಿಲ ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ನಿತ್ಯ ಅನ್ನದಾನ ಸೇವೆಯು ನಿರಂತರವಾಗಿ ನಡೆಯಬೇಕೆನ್ನುವ ಸದುದ್ದೇಶದಿಂದ, ಆ ಸೇವೆಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸುವ “ಮುಷ್ಠಿ ಅಕ್ಕಿ ಕಾಣಿಕೆ ಸೇವೆ”ಗೆ ಶುಕ್ರವಾರ ತುಲಾ ಸಂಕ್ರಮಣದ ಶುಭ ದಿನದಂದು   ಉಚ್ಚಿಲ ಮೊಗವೀರ ಮಹಾಜನ […]

(Uchila) ಉಚ್ಚಿಲ : ಉಚ್ಚಿಲ ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ನಿತ್ಯ ಅನ್ನದಾನ ಸೇವೆಯು ನಿರಂತರವಾಗಿ ನಡೆಯಬೇಕೆನ್ನುವ ಸದುದ್ದೇಶದಿಂದ, ಆ ಸೇವೆಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸುವ “ಮುಷ್ಠಿ ಅಕ್ಕಿ ಕಾಣಿಕೆ ಸೇವೆ”ಗೆ ಶುಕ್ರವಾರ ತುಲಾ ಸಂಕ್ರಮಣದ ಶುಭ ದಿನದಂದು   ಉಚ್ಚಿಲ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ, ದೇವಳದ ರುವಾರಿ ನಾಡೋಜ ಡಾ. ಜಿ. ಶಂಕರ್ ರವರು ಚಾಲನೆ ನೀಡಿದರು.

   ಈ ಕಾರ್ಯಕ್ರಮದಲ್ಲಿ ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿಯ ಅಧ್ಯಕ್ಷ ವಿನಯ್ ಕರ್ಕೇರ, ಗಣ್ಯರಾದ ರತ್ನಾಕರ್ ಸಾಲ್ಯಾನ್, ಗುಂಡು ಬಿ. ಅಮೀನ್, ದಿನೇಶ್ ಎರ್ಮಾಳು, ಶ್ರೀಪತಿ ಭಟ್, ನಾರಾಯಣ ಸಿ. ಕರ್ಕೇರ, ಶಿವಕುಮಾರ್ ಮೆಂಡನ್, ಭರತ್ ಎರ್ಮಾಳ್, ವಿನೋದ್ ಕೋಟ್ಯಾನ್, ಜ್ಞಾನೇಶ್ವರ್ ಕೋಟ್ಯಾನ್, ದೇವಳದ ಪ್ರಧಾನ ಪ್ರಬಂಧಕ ಸತೀಶ್‌ ಅಮೀನ್‌ ಪಡುಕರೆ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.