• Home  
  • ಬಾರ್ಕೂರು ಪ್ರಥಮ ದರ್ಜೆ ಕಾಲೇಜು, ನೂತನ ಸಭಾಂಗಣಕ್ಕೆ ಶಿಕ್ಷಣ ಸಚಿವರಿಂದ ಶಿಲಾನ್ಯಾಸ (Education Minister lays foundation stone for Barkur First Grade College, new auditorium)
- ಶಾಲಾ ಕಾಲೇಜು

ಬಾರ್ಕೂರು ಪ್ರಥಮ ದರ್ಜೆ ಕಾಲೇಜು, ನೂತನ ಸಭಾಂಗಣಕ್ಕೆ ಶಿಕ್ಷಣ ಸಚಿವರಿಂದ ಶಿಲಾನ್ಯಾಸ (Education Minister lays foundation stone for Barkur First Grade College, new auditorium)

Share: ಬಾರ್ಕೂರು ಪ್ರಥಮ ದರ್ಜೆ ಕಾಲೇಜು, ನೂತನ ಸಭಾಂಗಣಕ್ಕೆ ಶಿಕ್ಷಣ ಸಚಿವರಿಂದ ಶಿಲಾನ್ಯಾಸ ಸುಮಾರು ಒಂದು ಕೋಟಿ ವೆಚ್ಚದ ನೂತನ ಸಭಾಂಗಣಕ್ಕೆ ಶಿಲಾನ್ಯಾಸ (Barkuru) ಬಾರ್ಕೂರು: ರಾಜ್ಯದ ಸರಕಾರಿ ಕಾಲೇಜುಗಳಲ್ಲಿ ಕಟ್ಟಡ ನಿರ್ಮಾಣದ ಬಗ್ಗೆ ವಿನ್ಯಾಸವನ್ನು ಭವಿಷ್ಯದ ದೂರ ದೃಷ್ಠಿತ್ವ ಇಟ್ಟುಕೊಂಡು ರಚಿಸಬೇಕು ಮತ್ತು ವೈಜ್ಞಾನಿಕವಾಗಿ ಅನುದಾನ ಹಂಚಿಕೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ ಹೇಳಿದರು.      ಅವರು ಶನಿವಾರ ಬ್ರಹ್ಮಾವರ ತಾಲೂಕಿನ ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ […]

(Barkuru) ಬಾರ್ಕೂರು: ರಾಜ್ಯದ ಸರಕಾರಿ ಕಾಲೇಜುಗಳಲ್ಲಿ ಕಟ್ಟಡ ನಿರ್ಮಾಣದ ಬಗ್ಗೆ ವಿನ್ಯಾಸವನ್ನು ಭವಿಷ್ಯದ ದೂರ ದೃಷ್ಠಿತ್ವ ಇಟ್ಟುಕೊಂಡು ರಚಿಸಬೇಕು ಮತ್ತು ವೈಜ್ಞಾನಿಕವಾಗಿ ಅನುದಾನ ಹಂಚಿಕೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ ಹೇಳಿದರು.

     ಅವರು ಶನಿವಾರ ಬ್ರಹ್ಮಾವರ ತಾಲೂಕಿನ ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಒಂದು ಕೋಟಿಗೂ ಮಿಕ್ಕಿ ವೆಚ್ಚದ ನೂತನ ಸಭಾಂಗಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

 ಈಗಾಗಲೇ ೨ಸಾವಿರ ಉಪನ್ಯಾಸಕರ ನೇಮಕಾತಿ ಆಗಿದ್ದು, ಉಪನ್ಯಾಸಕರ ನೇಮಕಾತಿಯನ್ನು ಹೆಚ್ಚು ಬೇಡಿಕೆ ಇರುವ ಕೋರ್ಸಗಳಿಗೆ ಆದ್ಯತೆ ನೀಡಲಾಗುವುದು.   ಅನುದಾನ ಹಂಚಿಕೆಯನ್ನು ಮೂಲಭೂತ ಸೌಕರ್ಯಗಳೊಂದಿಗೆ ನೀಡುವ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದರು.

   ಉದ್ಯೋಗ ಲಭ್ಯತೆ ಆಧಾರದಲ್ಲಿ ಹೊಸ ಹೊಸ ಕೋರ್ಸ್‌ ಗಳನ್ನು ನೀಡಲಾಲಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.

   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ,

ಸರಕಾರಿ ಕಾಲೇಜುಗಳಿಗೆ ಅಗತ್ಯತೆಯ ಮೂಲಭೂತ ಸೌಕರ್ಯ, ಉಪನ್ಯಾಸಕರನ್ನು ಮತ್ತು ಹಿಂದುಳಿದ ಬರ್ಗಗಳ ವಸತಿ ನಿಲಯ ನೀಡಿದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತದೆ ಎಂದು ಹೇಳಿದರು.

     ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಬಾರ್ಕೂರು ಗ್ರಾಮ ಪಂಚಾಯಿತ್ ಅಧ್ಯಕ್ಷ ಬಿ.ಶಾಂತಾರಾಮ ಶೆಟ್ಟಿ, ಹನೆಹಳ್ಳಿ  ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾ ಪೂಜಾರಿ, ಮಂಗಳೂರು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಡಾ.‌ ಪ್ರೊ. ಕೆ.ಆರ್ ಕವಿತಾ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಸತೀಶ್ ಕುಮಾರ್ ಪಾವೂರು, ರಘುರಾಜ್ ಕದ್ರಿ ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಬೋಧಕ, ಬೋಧಕೇತರ ಸಿಬ್ಬಂದಿಗಳು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಪ್ರಾಂಶುಪಾಲ ಭಾಸ್ಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರೋಶನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.