• Home  
  • ಪೋಕ್ಸೊ ಪ್ರಕರಣದಲ್ಲಿ ಕಾಂಗ್ರೆಸ್ ನಿಂದ ಅಪಪ್ರಚಾರ, ಬಂಧಿತನ ತಂದೆ ಬಿಜೆಪಿ ಸದಸ್ಯನೇ ಅಲ್ಲ : ಜಿತೇಂದ್ರ ಶೆಟ್ಟಿ
- ಅಪರಾಧ

ಪೋಕ್ಸೊ ಪ್ರಕರಣದಲ್ಲಿ ಕಾಂಗ್ರೆಸ್ ನಿಂದ ಅಪಪ್ರಚಾರ, ಬಂಧಿತನ ತಂದೆ ಬಿಜೆಪಿ ಸದಸ್ಯನೇ ಅಲ್ಲ : ಜಿತೇಂದ್ರ ಶೆಟ್ಟಿ

Share: ಪೋಕ್ಸೊ ಪ್ರಕರಣದಲ್ಲಿ ಕಾಂಗ್ರೆಸ್ ನಿಂದ ಅಪಪ್ರಚಾರ, ಬಂಧಿತನ ತಂದೆ ಬಿಜೆಪಿ ಸದಸ್ಯನೇ ಅಲ್ಲ : ಜಿತೇಂದ್ರ ಶೆಟ್ಟಿ ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಪತ್ರಿಕಾ ಪ್ರಕಟಣೆ   ಕಾಪು : ಮಣಿಪಾಲದ ಲಾಡ್ಜ್ ವೊಂದರಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಸಿಕ್ಕಿ ಬಿದ್ದು ಪೋಕ್ಸೊ ಪ್ರಕರಣದಲ್ಲಿ ಬಂಧಿತನಾಗಿರುವ ಯುವಕನ ತಂದೆ, ಮಣಿಪುರದ ಬಿಜೆಪಿ ಮುಖಂಡ ಎಂದು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಅವರು ಬಿಜೆಪಿ ಸದಸ್ಯರೇ ಅಲ್ಲ ಎಂದು ಕಾಪು […]

  ಕಾಪು : ಮಣಿಪಾಲದ ಲಾಡ್ಜ್ ವೊಂದರಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಸಿಕ್ಕಿ ಬಿದ್ದು ಪೋಕ್ಸೊ ಪ್ರಕರಣದಲ್ಲಿ ಬಂಧಿತನಾಗಿರುವ ಯುವಕನ ತಂದೆ, ಮಣಿಪುರದ ಬಿಜೆಪಿ ಮುಖಂಡ ಎಂದು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಅವರು ಬಿಜೆಪಿ ಸದಸ್ಯರೇ ಅಲ್ಲ ಎಂದು ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   ಆರೋಪಿಯ ತಂದೆ ಬಿಜೆಪಿಯ ಸ್ಥಳೀಯ ಮಟ್ಟದಲ್ಲಿಯೂ ಕಾರ್ಯಕರ್ತ ಅಥವಾ ಸದಸ್ಯನಾಗಿಲ್ಲ. ಅವರಿಗೂ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅಲ್ಲದೇ ಜಿಲ್ಲಾಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸರಕಾರಿ ಬಂಗಲೆಯ ನವೀಕರಣದ ಕಾಮಗಾರಿಯ ಗುತ್ತಿಗೆಯನ್ನು ಪಡೆದಿದ್ದರು. ಅವರು ಬಿಜೆಪಿಯವರಾಗಿದ್ದರೇ, ಉಸ್ತುವಾರಿ ಸಚಿವೆ ಅವರ ಬಂಗಲೆಯ ನವೀಕರಣ ಕಾಮಗಾರಿಯ ಗುತ್ತಿಗೆ ದೊರಕುತ್ತಿತ್ತೇ ಎಂದು ಪ್ರಶ್ನಿಸಿದ್ದಾರೆ.

    ಪೋಕ್ಸೊ ಪ್ರಕರಣವೊಂದರಲ್ಲಿ ಬಿಜೆಪಿ ಮುಖಂಡನ ಪುತ್ರ ಎಂದು ಸುಳ್ಳು ಸುದ್ದಿ ಹರಡಿದ ಸಾಮಾಜಿಕ ಜಾಲತಾಣ ಹಾಗೂ ವೆಬ್‌ಸೈಟ್‌ಗಳಲ್ಲಿ ಕಾಂಗ್ರೆಸ್ ಪಕ್ಷವು ಸುಳ್ಳು ಮಾಹಿತಿಯನ್ನು ಹರಡುವ ಮೂಲಕ ಕೀಳು ಮಟ್ಟದ ರಾಜಕೀಯವನ್ನು ಮಾಡುತ್ತಿದೆ.

 ರಾಷ್ಟ್ರೀಯ ಪಕ್ಷಕ್ಕೆ ಭಾಜಪಕ್ಕೆ ಸ್ಥಳೀಯ ಮಟ್ಟದಲ್ಲಿ ಮಸಿ ಬಳಿಯುವ ಕಾಂಗ್ರೆಸಿನ ಯತ್ನವು ಫಲ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.