• Home  
  • ದಾವಣಗೆರೆ: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತು ನಾಲ್ವರು ನಿರ್ದೋಷಿ (Davangere: Shivamurthy of Murugha Mutt of Murugha Sharan and four others acquitted)
- ಪ್ರಚಲಿತ

ದಾವಣಗೆರೆ: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತು ನಾಲ್ವರು ನಿರ್ದೋಷಿ (Davangere: Shivamurthy of Murugha Mutt of Murugha Sharan and four others acquitted)

Share: ದಾವಣಗೆರೆ: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತು ನಾಲ್ವರು ನಿರ್ದೋಷಿ  ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ನ್ಯಾಯಾಲಯವು ನೀಡಿದ ತೀರ್ಪು (Chitradurga) ಚಿತ್ರದುರ್ಗ: ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ 2022ರ ಆಗಸ್ಟ್ 26 ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿದ್ದು, ಮುರುಘಾ ಮಠದ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ದೂರು ನೀಡಿದ್ದರು. ಆಪ್ರಕರಣಕ್ಕೆ ಸಂಬಂಧಿಸಿ ಇಂದು ಒಂದು ಪ್ರಕರಣದಲ್ಲಿ ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ನ್ಯಾಯಾಲಯವು ಸ್ವಾಮೀಜಿಯವರನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ.     ಬುಧವಾರ ಬೆಳಿಗ್ಗಿನಿಂದಲೇಚಿತ್ರದುರ್ಗದ […]

(Chitradurga) ಚಿತ್ರದುರ್ಗ: ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ 2022ರ ಆಗಸ್ಟ್ 26 ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿದ್ದು, ಮುರುಘಾ ಮಠದ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ದೂರು ನೀಡಿದ್ದರು. ಆಪ್ರಕರಣಕ್ಕೆ ಸಂಬಂಧಿಸಿ ಇಂದು ಒಂದು ಪ್ರಕರಣದಲ್ಲಿ ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ನ್ಯಾಯಾಲಯವು ಸ್ವಾಮೀಜಿಯವರನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ.

    ಬುಧವಾರ ಬೆಳಿಗ್ಗಿನಿಂದಲೇಚಿತ್ರದುರ್ಗದ 2ನೇ ಅಪರ ಜಿಲ್ಲಾ ನ್ಯಾಯಾಲಯದ ಮುಂದೆ ಭಕ್ತರು ಜಮಾಯಿಸಿದ್ದು, ತೀರ್ಪು ಏನಾಗುತ್ತೋ ಏನೋ ಎಂಬ ಆತಂಕದಲ್ಲಿದ್ದರು.

    ಫೋಕ್ಸೋ ಮೊದಲ ಪ್ರಕರಣದ ವಾದ ಪ್ರತಿವಾದ ಪೂರ್ಣಗೊಂಡು ಇಂದು ಬೆಳಿಗ್ಗೆ ತೀರ್ಪು ಪ್ರಕಟಿಸುವುದಾಗಿ ತಿಳಿಸಲಾಗಿತ್ತು. ಆದರೆ, ಮಧ್ಯಾಹ್ನಕ್ಕೆ ಮುಂದೂಡಿಕೆಯಾಯಿತು. ತೀರ್ಪು ಘೋಷಣೆಯಾಗುತ್ತಿದ್ದಂತೆ ಸತ್ಯಕ್ಕೆ ಸಂದ ಜಯ, ಮುರುಘಾ ಶ್ರೀಗಳಿಗೆ ಒಳ್ಳೆಯಾದಾಗಲೀ, ಮಠಕ್ಕೂ ಒಳ್ಳೆಯದಾಗಲಿ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ಇನ್ನು ಮುರುಘಾ ಶರಣರ ಪರ ವಾದಿಸಿದ್ದ ವಕೀಲರಂತೂ ಪರಸ್ಪರ ಹಸ್ತಲಾಘವ ಮಾಡುತ್ತಾ ಕುಣಿದು ಸಂಭ್ರಮಿಸಿದರು.

   ಜಾಮೀನಿನ ಮೇಲೆ ಹೊರಗಡೆ ಇದ್ದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಅವರ ಬಿಡುಗಡೆಗೂ ಕೋರ್ಟ್ ಆದೇಶಿಸಿದೆ. ಇಬ್ಬರು ಸಂತ್ರಸ್ಥೆಯರ ದೂರು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿತ್ತು. ಮೊದಲ ಕೇಸ್ ನಲ್ಲಿ ಪೊಲೀಸರು ಎರಡು ಚಾರ್ಜ್ ಶೀಟ್ ಸಲ್ಲಿಸಿದ್ದರು. ಮೊದಲ ಕೇಸ್ ನಲ್ಲಿ ಈಗ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ನಿರ್ದೋಷಿ ಎಂದು ಚಿತ್ರದುರ್ಗದ ಕೋರ್ಟ್ ತೀರ್ಪು ನೀಡಿದೆ. ಇದು ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಗೆ ನಿರಾಳತೆ ತಂದಿದೆ. ಈ ಮೂಲಕ ಶ್ರೀಗಳು ಮೊದಲ ಹಂತದ ಗೆಲುವು ಕಂಡಿದ್ದಾರೆ.

   ನ್ಯಾಯಾಧೀಶರಾದ ಗಂಗಾಧರ್ ಚನ್ನಬಸಪ್ಪ ಹಡಪದ ಅವರು ಈ ತೀರ್ಪು ಪ್ರಕಟಿಸಿ, ಶಿವಮೂರ್ತಿ ಮರುಘಾ ಶರಣರು ನಿರ್ದೋಷಿ ಎಂದು ತೀರ್ಪು ನೀಡಿದರು.

   ಮೊದಲ ಪೋಕ್ಸೋ ಕೇಸ್​ ಸಂಬಂಧ ಎ ಮತ್ತು ಬಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಅಂದರೆ ಎರಡು ಪ್ರತ್ಯೇಕ ಚಾರ್ಜ್​​ಶೀಟ್ ಸಲ್ಲಿಕೆ ಆಗಿದ್ದವು. ಡಿವೈಎಸ್ಪಿ ಅನಿಲ್‌ ನೇತೃತ್ವದ ತಂಡವು ವಿಚಾರಣೆ ನಡೆಸಿ ಕೋರ್ಟ್​ಗೆ ಚಾರ್ಚ್ ಶೀಟ್ ಸಲ್ಲಿಕೆ ಮಾಡಿತ್ತು. ಪೊಲೀಸ್ ಮೂಲದಿಂದ ಸಲ್ಲಿಕೆಯಾದ ಚಾರ್ಜ್​ಶೀಟ್​ನ ಅಂಶಗಳನ್ನ ನೋಡೋದಾದರೆ, ಒಟ್ಟು 694 ಪುಟಗಳ ಚಾರ್ಜ್​​​ಶೀಟ್. ಪೋಕ್ಸೋ, ಅಟ್ರಾಸಿಟಿ, ಧಾರ್ಮಿಕ ಕೇಂದ್ರ ದುರುಪಯೋಗ ಕಾಯ್ದೆಯಡಿ ಶ್ರೀಗಳ ವಿರುದ್ಧ ಕೇಸ್ ದಾಖಲಾಗಿತ್ತು. ಆದರೆ ಈಗ ಎಲ್ಲಾ ಆರೋಪಗಳಿಂದ ಶ್ರೀಗಳು ಮುಕ್ತರಾಗಿದ್ದಾರೆ.

    ಮೊದಲ ಆರೋಪಿ ಮುರುಘಾ ಶ್ರೀ, ಎರಡನೇ ಆರೋಪಿ ವಾರ್ಡನ್ ಆಗಿದ್ದ ರಶ್ಮಿ, ನಾಲ್ಕನೇ ಆರೋಪಿ ಪರಮಶಿವಯ್ಯ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಮಾಡಲಾಗಿತ್ತು. ಲೇಡಿ ವಾರ್ಡನ್ ಮೂಲಕ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಮುರುಘಾ ಶರಣರ ಮೇಲಿತ್ತು.

   ಈ ಪ್ರಕರಣವು ಚಿತ್ರದುರ್ಗಕ್ಕೆ ವರ್ಗಾಯಿಸಲಾಗಿತ್ತು. 2022ರ ಸೆಪ್ಟಂಬರ್ 1ರಂದು ಮುರುಘಾ ಶ್ರೀ ಮತ್ತು ರಶ್ಮಿಯನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದರು. ನಂತರ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಮುರುಘಾಶ್ರೀ ವಿರುದ್ಧ 2022ರ ಅಕ್ಟೋಬರ್ 13 ರಂದು ಮಠದ ಅಡುಗೆ ಸಹಾಯಕಿಯಿಂದ ಮತ್ತೊಂದು ದೂರು ದಾಖಲಿಸಿದ್ದರು. ಆ ಕೇಸಲ್ಲಿ ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆಯೂ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪ ಮಾಡಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.