• Home  
  •  ರೂ. 2.25 ಕೋಟಿ ವೆಚ್ಚದ  ಪೆರಂಪಳ್ಳಿ ಶೀಂಬ್ರ    ಸಂರಕ್ಷಣಾ ಕಾಮಗಾರಿಗೆ ಶಾಸಕ ಯಶ್ಪಾಲ್‌ ಚಾಲನೆ (MLA Yashpal inaugurates Perampalli Sheembra conservation work costing Rs. 2.25 crore)
- ಧಾರ್ಮಿಕ

 ರೂ. 2.25 ಕೋಟಿ ವೆಚ್ಚದ  ಪೆರಂಪಳ್ಳಿ ಶೀಂಬ್ರ    ಸಂರಕ್ಷಣಾ ಕಾಮಗಾರಿಗೆ ಶಾಸಕ ಯಶ್ಪಾಲ್‌ ಚಾಲನೆ (MLA Yashpal inaugurates Perampalli Sheembra conservation work costing Rs. 2.25 crore)

Share: ರೂ. 2.25 ಕೋಟಿ ವೆಚ್ಚದ  ಪೆರಂಪಳ್ಳಿ ಶೀಂಬ್ರ    ಸಂರಕ್ಷಣಾ ಕಾಮಗಾರಿಗೆ ಶಾಸಕ ಯಶ್ಪಾಲ್‌ ಚಾಲನೆ   ಸಾವಿರಾರು ಭಕ್ತರು ತೀರ್ಥಸ್ನಾನಕ್ಕೆ ಆಗಮಿಸುವ ಶೀಂಬ್ರ ಮಹಾಗಣಪತಿ ದೇವಳದ ಸ್ನಾನಘಟ್ಟ (Udupi) ಉಡುಪಿ: ಮೂಡು ಪೆರಂಪಳ್ಳಿ ವಾರ್ಡಿನ ಶೀಂಬ್ರ ಮಹಾಗಣಪತಿ ದೇವಸ್ಥಾನದ ಬಳಿಯ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ರೂ. 2.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಂರಕ್ಷಣಾ ಕಾಮಗಾರಿಗೆ ಶಾಸಕ ಯಶ್ ಪಾಲ್ ಸುವರ್ಣರವರು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.     ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ಪಾಲ್ […]

(Udupi) ಉಡುಪಿ: ಮೂಡು ಪೆರಂಪಳ್ಳಿ ವಾರ್ಡಿನ ಶೀಂಬ್ರ ಮಹಾಗಣಪತಿ ದೇವಸ್ಥಾನದ ಬಳಿಯ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ರೂ. 2.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಂರಕ್ಷಣಾ ಕಾಮಗಾರಿಗೆ ಶಾಸಕ ಯಶ್ ಪಾಲ್ ಸುವರ್ಣರವರು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ಪಾಲ್ ಸುವರ್ಣ, ಪ್ರತಿವರ್ಷ  ಕೃಷ್ಣ ಅಂಗಾರಕ ಚತುರ್ದಶಿಯಂದು ಸಾವಿರಾರು ಭಕ್ತರು ತೀರ್ಥಸ್ನಾನಕ್ಕೆ ಆಗಮಿಸುವ ಶೀಂಬ್ರ ಮಹಾಗಣಪತಿ ದೇವಸ್ಥಾನದ ಸ್ನಾನಘಟ್ಟ ಕಳೆದ ಎರಡು ವರ್ಷದ ಹಿಂದೆ ತೀವ್ರ ನದಿ ಕೊರೆತದಿಂದ ಕೊಚ್ಚಿ ಹೋಗಿ ಭಕ್ತಾದಿಗಳಿಗೆ ಸಮಸ್ಯೆ ಉಂಟಾಗಿತ್ತು.

  ಈ ಬಗ್ಗೆ ತಕ್ಷಣ ಕಾಮಗಾರಿ ನಡೆಸಿ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಸಂರಕ್ಷಣಾ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಪ್ರಸ್ತಾವನೆ ಸಲ್ಲಿಸಿ ಇದೀಗ ಮಂಜೂರಾದ ರೂ. 2.25 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

    ಶೀಂಬ್ರ ಮಹಾಗಣಪತಿ ದೇವಸ್ಥಾನದ ಪ್ರಮುಖರಾದ  ಇಂಜಿನಿಯರ್ ಕೆ.ರಮೇಶ್ ರಾವ್, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ, ದೇವಳದ ಅರ್ಚಕರಾದ  ನವೀನ್ ಶಿವತ್ತ, ಸ್ಥಳೀಯ ನಗರಸಭಾ ಸದಸ್ಯೆ ಶ್ರೀಮತಿ ಅನಿಟ ಡಿಸೋಜ, ಆರ್ಕಿಟೆಕ್ಟ್ ರಾಜೇಂದ್ರ ಮಯ್ಯ, ಮಾಜಿ ನಗರಸಭಾ ಸದಸ್ಯ ಪ್ರಶಾಂತ್ ಭಟ್, ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಪ್ರಮುಖರಾದ ಡೆನಿಸ್ ಮಸ್ಕರೇನಸ್ , ಶಶಾಂಕ್ ಶಿವತ್ತಾಯ, ವಿಜಯ ಪೂಜಾರಿ, ಸಂತೋಷ್ ಅಮೀನ್, ಸುಮ, ಯಶೋಧರ್ ಅಮೀನ್, ಲೀನಾ, ರಂಜಿತ್, ಸತೀಶ್, ಶೆರ್ಲಿನ್ ಮೊದಲಾದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.