• Home  
  • ನಾಗರಿಕ ಸಮಾಜದ  ಸಂಪರ್ಕ ಇಲ್ಲದಒಂದೇ‌ ಮನೆಯ‌ ಮೂವರ ರಕ್ಷಣೆ (Protecting three people from a single household with no connection to civil society
- social service

ನಾಗರಿಕ ಸಮಾಜದ  ಸಂಪರ್ಕ ಇಲ್ಲದಒಂದೇ‌ ಮನೆಯ‌ ಮೂವರ ರಕ್ಷಣೆ (Protecting three people from a single household with no connection to civil society

Share:    ನಾಗರಿಕ ಸಮಾಜದ  ಸಂಪರ್ಕ ಇಲ್ಲದಒಂದೇ‌ ಮನೆಯ‌ ಮೂವರ ರಕ್ಷಣೆ. ಜಿಲ್ಲಾ ನಾಗರೀಕ ಸಮಿತಿಯ ನಿತ್ಯಾನಂದ‌ ಒಳಕಾಡು ನೇತೃತ್ವದಲ್ಲಿ ರಕ್ಷಣೆ (Udupi) ಉಡುಪಿ : ಜಿಲ್ಲಾ ನಾಗರೀಕ ಸಮಿತಿಯ ನೇತ್ರತ್ವದಲ್ಲಿ ನಾಗರಿಕ ಸಮಾಜದ ಸಂಪರ್ಕವಿಲ್ಲದೆ, ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದ ಮೂವರನ್ನು ರಕ್ಷಿಸಿರುವ ಘಟನೆ ಶಿರ್ವ ಪೋಲಿಸ್ ಠಾಣೆಯ ವ್ಯಾಪ್ತಿಯ ಮೂಡುಬೆಳ್ಳೆಯಲ್ಲಿ ನಡೆದಿದೆ.    ರಕ್ಷಿಸಲ್ಪಟ್ಟವರ ನೆರವಿಗೆ ಸಂಘ, ಸಂಸ್ಥೆಗಳು ಕಾರ್ಕಳದ ಹೊಸ ಬೆಳಕು ಆಶ್ರಮವನ್ನು ಸಂಪರ್ಕಿಸಲು ವಿನಂತಿಸಲಾಗಿದೆ.     ರಕ್ಷಿಸಲ್ಪಟ್ಟವರು ವೃದ್ದಾಪ್ಯದಲ್ಲಿರುವ ಪತಿ ಪತ್ನಿ ಹಾಗೂ‌ […]

ಜಿಲ್ಲಾ ನಾಗರೀಕ ಸಮಿತಿಯ ನಿತ್ಯಾನಂದ‌ ಒಳಕಾಡು ನೇತೃತ್ವದಲ್ಲಿ ರಕ್ಷಣೆ

(Udupi) ಉಡುಪಿ : ಜಿಲ್ಲಾ ನಾಗರೀಕ ಸಮಿತಿಯ ನೇತ್ರತ್ವದಲ್ಲಿ ನಾಗರಿಕ ಸಮಾಜದ ಸಂಪರ್ಕವಿಲ್ಲದೆ, ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದ ಮೂವರನ್ನು ರಕ್ಷಿಸಿರುವ ಘಟನೆ ಶಿರ್ವ ಪೋಲಿಸ್ ಠಾಣೆಯ ವ್ಯಾಪ್ತಿಯ ಮೂಡುಬೆಳ್ಳೆಯಲ್ಲಿ ನಡೆದಿದೆ.

   ರಕ್ಷಿಸಲ್ಪಟ್ಟವರ ನೆರವಿಗೆ ಸಂಘ, ಸಂಸ್ಥೆಗಳು ಕಾರ್ಕಳದ ಹೊಸ ಬೆಳಕು ಆಶ್ರಮವನ್ನು ಸಂಪರ್ಕಿಸಲು ವಿನಂತಿಸಲಾಗಿದೆ.

    ರಕ್ಷಿಸಲ್ಪಟ್ಟವರು ವೃದ್ದಾಪ್ಯದಲ್ಲಿರುವ ಪತಿ ಪತ್ನಿ ಹಾಗೂ‌ ಅವರ ಮಗಳಾಗಿದ್ದು, ಅಂದಾಜು ಎಪ್ಪತ್ತು ವರ್ಷ‌ ಆಸುಪಾಸಿನ ಎಡ್ವಿನ್ ಅಮ್ಮನ್ನ, ಜ್ಯೋತಿ ಅಮ್ಮನ್ನ, ಹಾಗೂ‌ ಮಗಳ ಹೆಸರು ತಿಳಿದುಬಂದಿಲ್ಲ. ಮೂವರೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದವರೆಂದು ತಿಳಿದುಬಂದಿದೆ.

    ಕಾರ್ಕಳದ ಹೊಸಬೆಳಕು ಆಶ್ರಮದ ಸಂಚಾಲಕಿ ತನುಲಾ ತರುಣ್ ಮೂವರಿಗೆ ಆಶ್ರಯ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.

  ಆಪ್ತ ಸಮಾಲೋಚನೆ ನಡೆಸಿದಾಗ ವೃದ್ಧರು ಮನೆಯಲ್ಲಿ ಚಿನ್ನಾಭರಣಗಳು ಇರುವುದಾಗಿ ‌ಹೇಳಿಕೊಂಡಿದ್ದರು. ಇಲಾಖೆಯ‌ ಸಮಕ್ಷಮದಲ್ಲಿ ಹುಡುಕಾಟ ನಡೆಸಿ ಚಿನ್ನಾಭರಣಗಳನ್ನು ಅವರ ವಶಕ್ಕೆ ನೀಡಲಾಗಿದೆ.

   ಕಾರ್ಯಚರಣೆಯಲ್ಲಿ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ‌ ಒಳಕಾಡು, ಬೆಳ್ಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ದಿವ್ಯ ವಿ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ಮೂಡುಬೆಳ್ಳೆ, ವಿನ್ಸೆಂಟ್ ಫೆರ್ನಾಂಡಿಸ್, ಎಸ್.ಐ ಮಂಜುನಾಥ್, 112 ಸಹಾಯವಾಣಿ ಕೇಂದ್ರದ ಎ.ಎಸ್.ಐ ಗಂಗಾಧರ, ಹೊಸಬೆಳಕು ಆಶ್ರಮದ ಮೆಲ್ವಿಚಾರಕ ಗೌರೀಶ್, ರವಿರಾಜ್ ಆಚಾರ್ಯ ಮೂಡುಬೆಳ್ಳೆ, ಸುಧಾಕರ್ ಪೂಜಾರಿ, ಧನಲಕ್ಷ್ಮಿ ಪೂಜಾರಿ ಮೂಡುಬೆಳ್ಳೆ, ವಿಜಯಪ್ರಕಾಶ್ ಮೂಡುಬೆಳ್ಳೆ, ಪ್ರಕಾಶ್ ಮೂಡುಬೆಳ್ಳೆ ಭಾಗಿಯಾಗಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.