ಡಿ. 20 : ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಆಯೋಜನೆಯಲ್ಲಿ ಜಿಲ್ಲಾ ಮಟ್ಟದ ಛದ್ಮವೇಷ ಸ್ಪರ್ಧೆ
(Kaup) ಕಾಪು: ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಆಯೋಜನೆಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಛದ್ಮವೇಷ ಸ್ಪರ್ಧೆ “ವಿದ್ಯಾ ಕಾಸ್ಟ್ಯೂಮ್ ಗಾಳ 2025” ಡಿ. 20 ರ ಶನಿವಾರ ಮಧ್ಯಾಹ್ನ 3 ಗಂಟೆಗೆ ಶಾಲಾ ಆವರಣದಲ್ಲಿ ಜರುಗಲಿದೆ.
ಸ್ಪರ್ಧೆಗೆ 2 ನಿಮಿಷ ಕಾಲಾವಕಾಶವಿರುತ್ತದೆ. ಒಟ್ಟು 3 ವಿಭಾಗದಲ್ಲಿ ಸ್ಪರ್ಧೆ ಜರಗಲಿದೆ. 1 ರಿಂದ 3 ನೇ ತರಗತಿ, 4 ರಿಂದ 6 ನೇ ತರಗತಿ, 7 ರಿಂದ 10 ನೇ ತರಗತಿ.
ಪ್ರತಿ ವಿಭಾಗದಲ್ಲಿ ಪ್ರಥಮ ದ್ವಿತೀಯ ತೃತೀಯ ನಗದು ಬಹುಮಾನ ನೀಡಲಾಗುವುದು. ಒಟ್ಟು ಪ್ರಶಸ್ತಿ 15000.
ಡಿ. 17 ಹೆಸರನ್ನು ನೋಂದಾಯಿಸಲು ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ 87478 47748 ಸಂಪರ್ಕಿಸಿ ಎಂದು ಶಾಲಾ ಪ್ರಾಂಶುಪಾಲ ಸಾಕ್ಷಾತ್ ಯು ಕೆ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

