• Home  
  • ವಿವಾಹ ಸಂಭ್ರಮದಲ್ಲಿದ್ದ ಹೆತ್ತವರಿಗೆ ಮಗಳಿಂದ ಶಾಕ್! ಚಿನ್ನಾಭರಣ, ಉಡುಗೊರೆಯೊಂದಿಗೆ ಪರಾರಿ ಶಂಕೆ (Parents at wedding get shocked by daughter! Suspected of absconding with jewellery, gifts)
- ಅಪರಾಧ

ವಿವಾಹ ಸಂಭ್ರಮದಲ್ಲಿದ್ದ ಹೆತ್ತವರಿಗೆ ಮಗಳಿಂದ ಶಾಕ್! ಚಿನ್ನಾಭರಣ, ಉಡುಗೊರೆಯೊಂದಿಗೆ ಪರಾರಿ ಶಂಕೆ (Parents at wedding get shocked by daughter! Suspected of absconding with jewellery, gifts)

Share: ವಿವಾಹ ಸಂಭ್ರಮದಲ್ಲಿದ್ದ ಹೆತ್ತವರಿಗೆ ಮಗಳಿಂದ ಶಾಕ್! ಚಿನ್ನಾಭರಣ, ಉಡುಗೊರೆಯೊಂದಿಗೆ ಪರಾರಿ ಶಂಕೆ   ಡಿ.  12 ರಂದು ಈ ಜೋಡಿಗೆ ನಿಕಾಹ್, ಡಿ. 14 ರಂದು ಔತಣ ಕೂಟದಂದು ಪರಾರಿ   (Bantwala) ಬಂಟ್ವಾಳ: ವಿವಾಹದ ಸಂಭ್ರಮದಲ್ಲಿದ್ದ ವಧುವೋರ್ವಳು ಬೆಳ್ಳಂಬೆಳಿಗ್ಗೆ ಹೆತ್ತವರು,ಕುಟುಂಬಸ್ಥರಿಗೆ ಶಾಕ್ ನೀಡಿದ ಘಟನೆ  ಬಿ.ಸಿ. ರೋಡಿಗೆ ಸಮೀಪದ ಪಲ್ಲಮಜಲಿನಲ್ಲಿ ನಡೆದಿದೆ.   ನಿಕಾಹ್ ಮುಗಿಸಿ ಔತಣಕೂಟಕ್ಕೆ ಸಜ್ಜಾಗಿದ್ದ ಮದುಮಗಳು ಅಶ್ಪಿಯ(21) ವರನ ಕಡೆಯವರು ನೀಡಿದ್ದ ಚಿನ್ನಾಭರಣ ಹಾಗೂ ದುಬಾರಿ ಉಡುಗೊರೆಯೊಂದಿಗೆ ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆಂದು […]

  (Bantwala) ಬಂಟ್ವಾಳ: ವಿವಾಹದ ಸಂಭ್ರಮದಲ್ಲಿದ್ದ ವಧುವೋರ್ವಳು ಬೆಳ್ಳಂಬೆಳಿಗ್ಗೆ ಹೆತ್ತವರು,ಕುಟುಂಬಸ್ಥರಿಗೆ ಶಾಕ್ ನೀಡಿದ ಘಟನೆ  ಬಿ.ಸಿ. ರೋಡಿಗೆ ಸಮೀಪದ ಪಲ್ಲಮಜಲಿನಲ್ಲಿ ನಡೆದಿದೆ.

  ನಿಕಾಹ್ ಮುಗಿಸಿ ಔತಣಕೂಟಕ್ಕೆ ಸಜ್ಜಾಗಿದ್ದ ಮದುಮಗಳು ಅಶ್ಪಿಯ(21) ವರನ ಕಡೆಯವರು ನೀಡಿದ್ದ ಚಿನ್ನಾಭರಣ ಹಾಗೂ ದುಬಾರಿ ಉಡುಗೊರೆಯೊಂದಿಗೆ ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆಂದು ಶಂಕಿಸಲಾಗಿದೆ.

 ಮಧುಮಗಳು ನಾಪತ್ತೆಯಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಮತ್ತು ವರನ ಕಡೆಯವರು ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ.

   ಈ ಹಠಾತ್ ಘಟನೆ ವಧು-ವರನ ಮನೆಯವರನ್ನು ಅಘಾತಕ್ಕೆ ತಳ್ಳಿದೆ.
ಘಟನೆಯ ವಿವರ:
    ಡಿ. 12 ರಂದು ಈ ಜೋಡಿಗೆ ನಿಕಾಹ್ ಶಾಸ್ತ್ರೋಕ್ತವಾಗಿ ನೆರವೇರಿತ್ತು. ಡಿ. 14 ರಂದು ಮಂಗಳೂರು ತೊಕ್ಕೊಟ್ಟುವಿನ ಯುನಿಟಿ ಹಾಲ್‌ನಲ್ಲಿ ಮದುವೆ ಸಮಾರಂಭ ಮತ್ತು ಔತಣಕೂಟ ನಡೆಯಬೇಕಿತ್ತು. ಮನೆಯವರೆಲ್ಲರೂ ಸಂಭ್ರಮದ ಸಿದ್ಧತೆಯಲ್ಲಿದ್ದಾಗಲೇ ಮದುಮಗಳು ನಾಪತ್ತೆಯಾಗಿ ಶಾಕ್ ನೀಡಿದ್ದಾಳೆ.

    ಭಾನುವಾರ ಬೆಳಗ್ಗಿನ ಜಾವ 3:30 ರ ಹೊತ್ತಿಗೆ  ಮಲಗಿದ್ದು, ಈಕೆ  ಬೆಳಿಗ್ಗೆ  4:30 ವೇಳೆಗೆ ಆಕೆ ಮಲಗಿದ್ದ ಕೋಣೆ ನೋಡಿದಾಗ ಅಶ್ಪಿಯಾ ಮಲಗಿದ ಜಾಗದಲ್ಲಿ ಇರಲಿಲ್ಲ. ಬಳಿಕ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಲಿಲ್ಲ ಎಂದು ಆಕೆಯ ಸಹೋದರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
   ಅಶ್ಪಿಯಾ  ವರನ ಕಡೆಯವರು ಉಡುಗೊರೆಯಾಗಿ ನೀಡಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ದುಬಾರಿ ಮೊಬೈಲ್, ಹಾಗೂ ಐಷಾರಾಮಿಯಾದ ಗಿಪ್ಟ್ ಐಟಂಗಳನ್ನು ಹೊತ್ತೊಯ್ದಿದ್ದಾಳೆನ್ನಲಾಗಿದೆ.
  ಸದ್ಯ ಮಧು ಮಗಳ ಸುಳಿವು ಲಭ್ಯವಾಗಲಿದ್ದು, ಪ್ರಿಯಕರ ಯಾರೆನ್ನುವುದೂ ಕೂಡ ರಹಸ್ಯವಾಗಿಯೇ ಉಳಿದಿದೆ.

   ಪೊಲೀಸರು ಈಕೆಯ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.