• Home  
  •  ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯ – ಎಸ್ ಡಿ ಎಮ್ ಆಸ್ಪತ್ರೆ – ಸಂಶೋಧನಾ ಕೇಂದ್ರದ ನಡುವೆ ಒಡಂಬಡಿಕೆ (SMVITM, Bantakal signed an MOU with SDM College of Ayurveda, Udyavar)
- ವ್ಯವಹಾರ - ಶಾಲಾ ಕಾಲೇಜು

 ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯ – ಎಸ್ ಡಿ ಎಮ್ ಆಸ್ಪತ್ರೆ – ಸಂಶೋಧನಾ ಕೇಂದ್ರದ ನಡುವೆ ಒಡಂಬಡಿಕೆ (SMVITM, Bantakal signed an MOU with SDM College of Ayurveda, Udyavar)

Share: ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯ – ಎಸ್ ಡಿ ಎಮ್ ಆಸ್ಪತ್ರೆ – ಸಂಶೋಧನಾ ಕೇಂದ್ರದ ನಡುವೆ ಒಡಂಬಡಿಕೆ   ಡಾ. ರಾಧಾಕೃಷ್ಣ ಎಸ್ ಐತಾಳ್, ಡಾ. ನಾಗರಾಜ್ ಭಟ್ ಉಪಸ್ಥಿತಿ (Udup̧I  Bantakal) ಉಡುಪಿ, ಬಂಟಕಲ್: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಉದ್ಯಾವರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದೊಂದಿಗೆ ಒಡಂಬಡಿಕೆಗೆ ಸಹಿ ಮಾಡಲಾಯಿತು.    ಈ ಒಡಂಬಡಿಕೆಯು ಇಂಜಿನಿಯರಿಂಗ್ ಮತ್ತು ಭಾರತೀಯ ಪರಂಪರೆಯ ಆರೋಗ್ಯ ಸೇವಾ ವ್ಯವಸ್ಥೆಗಳ ನಡುವಿನ […]

(Udup̧I  Bantakal) ಉಡುಪಿ, ಬಂಟಕಲ್: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಉದ್ಯಾವರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದೊಂದಿಗೆ ಒಡಂಬಡಿಕೆಗೆ ಸಹಿ ಮಾಡಲಾಯಿತು.

   ಈ ಒಡಂಬಡಿಕೆಯು ಇಂಜಿನಿಯರಿಂಗ್ ಮತ್ತು ಭಾರತೀಯ ಪರಂಪರೆಯ ಆರೋಗ್ಯ ಸೇವಾ ವ್ಯವಸ್ಥೆಗಳ ನಡುವಿನ ಸಹಕಾರವನ್ನು ಉತ್ತೇಜಿಸುವುದು, ತಂತ್ರಜ್ಞಾನ ಆಧಾರಿತ ಆರೋಗ್ಯ ಸೇವೆ, ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಅಭಿವೃದ್ಧಿ, ಸಂಶೋಧನೆ, ಶೈಕ್ಷಣಿಕ ವಿನಿಮಯ, ಇಂಟರ್ನ್ಶಿಪ್‌ಗಳು ಮತ್ತು ಸಮುದಾಯ ಆರೋಗ್ಯ ಚಟುವಟಿಕೆ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವುದು, ಆಧುನಿಕ ಆರೋಗ್ಯ ಸವಾಲುಗಳನ್ನು ಎದುರಿಸಲು ಸಾಫ್ಟ್ವೇರ್ ಅಭಿವೃದ್ಧಿ, ಕೃತಕ ಬುದ್ಧಿ ಮತ್ತೆ ಮತ್ತು ಡೇಟಾ ವಿಶ್ಲೇಷಣೆ ಮುಂತಾದ ಇಂಜಿನಿಯರಿಂಗ್ ಪರಿಣತಿಯನ್ನು ಆಯುರ್ವೇದ ಚಿಕಿತ್ಸಾ ಜ್ಞಾನಗಳೊಂದಿಗೆ ಸಂಯೋಜಿಸುವ ಗುರಿಯನ್ನು  ಹೊಂದಿದೆ. 

   ಈ ಒಡಂಬಡಿಕೆಯಿಂದಾಗಿ ಆಯುರ್ವೇದ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಡಿಜಿಟಲ್ ಉಪಕರಣಗಳು, ಡೇಟಾ ನಿರ್ವಹಣೆ ಮತ್ತು ತಂತ್ರಜ್ಞಾನ ಆಧಾರಿತ  ಆರೋಗ್ಯ ವ್ಯವಸ್ಥೆಗಳ ತರಬೇತಿಯನ್ನು ಪಡೆಯಲಿದ್ದಾರೆ. ಜೊತೆಗೆ ಸಂಯುಕ್ತ ಸಂಶೋಧನಾ ಯೋಜನೆಗಳು, ಕಾರ್ಯಾಗಾರಗಳು ಸೆಮಿನಾರ್‌ಗಳು, ಆರೋಗ್ಯ ತಪಾಸಣಾ ಶಿಬಿರಗಳು ಮತ್ತು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಮಾಜದ ಹಿತಕ್ಕಾಗಿ ಜಾಗೃತಿ ಕಾರ್ಯಕ್ರಮಗಳನ್ನು ಒಳಗೊಂಡಿದೆ.

    ಈ ಒಡಂಬಡಿಕೆಯಲ್ಲಿ ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಡಾ. ರಾಧಾಕೃಷ್ಣ ಎಸ್ ಐತಾಳ್, ಎಸ್ ಎಮ್ ವಿಐಟಿಎಮ್ ನ ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್, ಡಾ. ಸಚಿನ್ ಭಟ್ ಡೀನ್ (ಸಂಶೋಧನೆ ಮತ್ತು ಅಭಿವೃದ್ಧಿ), ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಮಹಾದೇವಿ, ಆಫೀಸ್ ಮ್ಯಾನೇಜರ್  ರಾಮದಾಸ್, ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ  ಸುರೇಶ್ ಕೋಟ್ಯಾನ್ ಮತ್ತು ಎಸ್ ಡಿ ಎಮ್ ಆರ್ಯುವೇದಿಕ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ. ವಿ, ಶರೀರ ಶಾಸ್ಟ್ರ ವಿಭಾಗದ  ಮುಖ್ಯಸ್ಥರಾದ ಡಾ. ಎಸ್ ಆರ್ ಮೊಹರರ್, ಪ್ರಾಧ್ಯಾಪಕರಾದ ಡಾ. ರವಿ ಭಟ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.