• Home  
  • ಬಂಟಕಲ್ ತಾಂತ್ರಿಕ ಕಾಲೇಜು :‌ ಆರು ದಿನಗಳ ಎನ್ ಎಸ್ ಎಸ್ ಶಿಬಿರ ಸಮಾರೋಪ ಸಮಾರಂಭ (Bantakal Technical College: Six-day NSS camp concludes)
- ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜು :‌ ಆರು ದಿನಗಳ ಎನ್ ಎಸ್ ಎಸ್ ಶಿಬಿರ ಸಮಾರೋಪ ಸಮಾರಂಭ (Bantakal Technical College: Six-day NSS camp concludes)

Share: ಬಂಟಕಲ್ ತಾಂತ್ರಿಕ ಕಾಲೇಜು :‌ ಆರು ದಿನಗಳ ಎನ್ ಎಸ್ ಎಸ್ ಶಿಬಿರ ಸಮಾರೋಪ ಸಮಾರಂಭ ರಾಮಕೃಷ್ಣ ಮಿಷನ್‌ನ ಅಧ್ಯಕ್ಷರಾದ ಸ್ವಾಮಿ ಜಿತಕಮಾನಂದ ಸ್ವಾಮಿ ಅಧ್ಯಕ್ಷತೆ   (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ಸಮಾರೋಪ ಸಮಾರಂಭವು ಮಂಗಳೂರಿನ ರಾಮಕೃಷ್ಣ ಆಶ್ರಮದಲ್ಲಿ ಮುಕ್ತಾಯಗೊಂಡಿತು.    ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರಿನ ರಾಮಕೃಷ್ಣ ಮಿಷನ್‌ನ ಅಧ್ಯಕ್ಷರಾದ ಸ್ವಾಮಿ ಜಿತಕಮಾನಂದ ವಹಿಸಿದ್ದರು. ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ನಿಸ್ವಾರ್ಥ ಸೇವೆಯ ಮಹತ್ವ, […]

  (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ಸಮಾರೋಪ ಸಮಾರಂಭವು ಮಂಗಳೂರಿನ ರಾಮಕೃಷ್ಣ ಆಶ್ರಮದಲ್ಲಿ ಮುಕ್ತಾಯಗೊಂಡಿತು.

   ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರಿನ ರಾಮಕೃಷ್ಣ ಮಿಷನ್‌ನ ಅಧ್ಯಕ್ಷರಾದ ಸ್ವಾಮಿ ಜಿತಕಮಾನಂದ ವಹಿಸಿದ್ದರು.

ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ನಿಸ್ವಾರ್ಥ ಸೇವೆಯ ಮಹತ್ವ, ನೈತಿಕ ಮೌಲ್ಯಗಳು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರದ ಬಗ್ಗೆ ವಿವರಿಸಿದರು.

  ಶಿಬಿರದಲ್ಲಿ ೩೦೦ರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಸಾಮಾಜಿಕ ಸೇವೆ, ಜಾಗೃತಿ ಚಟುವಟಿಕೆಯಲ್ಲಿ ಭಾಗವಹಿಸಿ, ಶಿಸ್ತು, ತಂಡದ ಕೆಲಸ, ನಾಯಕತ್ವ ಮತ್ತು ಸಾಮಾಜಿಕ ಜವಾಬ್ದಾರಿಯ ಬಗ್ಗೆ ಅಮೂಲ್ಯವಾದ ಪಾಠವನ್ನು ಕಲಿತರು.

   ಸಮಾರೋಪ ಸಮಾರಂಭದಲ್ಲಿ ಎಲ್ಲಾ ರಾಷ್ಟ್ರೀಯ  ಸೇವಾ ಯೋಜನೆಯ ಪದಾಧಿಕಾರಿಗಳು, ಅಧ್ಯಾಪಕರು, ಸಂಯೋಜಕರು ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.