• Home  
  • ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ವೃತ್ತಿಪರ ಕೌಶಲ್ಯದ ಕುರಿತು ಕಾರ್ಯಾಗಾರ (Talk on TECH-LEAD 2026: Professional Skills for the Next-Gen Engineers)
- ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ವೃತ್ತಿಪರ ಕೌಶಲ್ಯದ ಕುರಿತು ಕಾರ್ಯಾಗಾರ (Talk on TECH-LEAD 2026: Professional Skills for the Next-Gen Engineers)

Share:  ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ವೃತ್ತಿಪರ ಕೌಶಲ್ಯದ ಕುರಿತು ಕಾರ್ಯಾಗಾರ ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್‌ ಅಧ್ಯಕ್ಷತೆ ವಹಿಸಿದ್ದರು   (Bantakal) ಬಂಟಕಲ್ : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಇಇಇ ವಿದ್ಯಾರ್ಥಿಘಟಕವು IEEE SPAx and IEEE Foundation   ಸಹಯೋಗದೊಂದಿಗೆ ಮುಂದಿನ ಇಂಜಿನಿಯರ್‌ಗಳಿಗೆ ವೃತ್ತಿಪರ ಕೌಶಲ್ಯದ ಕುರಿತು ಕಾರ್ಯಾಗಾರವನ್ನು  ಆಯೋಜಿಸಲಾಗಿತ್ತು.   ಕಾರ್ಯಕ್ರಮದಲ್ಲಿ ಸೈಂಟ್ ಅಲೋಶಿಯಸ್‌ಕಾಲೇಜಿನ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕರಾದ ಡಾ. ಗ್ಲನ್ಸನ್‌ ಟೋನಿಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.    ಅವರು […]

  (Bantakal) ಬಂಟಕಲ್ : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಇಇಇ ವಿದ್ಯಾರ್ಥಿಘಟಕವು IEEE SPAx and IEEE Foundation   ಸಹಯೋಗದೊಂದಿಗೆ ಮುಂದಿನ ಇಂಜಿನಿಯರ್‌ಗಳಿಗೆ ವೃತ್ತಿಪರ ಕೌಶಲ್ಯದ ಕುರಿತು ಕಾರ್ಯಾಗಾರವನ್ನು  ಆಯೋಜಿಸಲಾಗಿತ್ತು.

  ಕಾರ್ಯಕ್ರಮದಲ್ಲಿ ಸೈಂಟ್ ಅಲೋಶಿಯಸ್‌ಕಾಲೇಜಿನ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕರಾದ ಡಾ. ಗ್ಲನ್ಸನ್‌ ಟೋನಿಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

   ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇಂದಿನ ವೃತ್ತಿಪರ ಜಗತ್ತಿನಲ್ಲಿ ತಾಂತ್ರಿಕ ಜ್ಞಾನದ ಜೊತೆಗೆ ಉತ್ತಮ ಸಂವಹನ ಕೌಶಲ್ಯ, ನಾಯಕತ್ವ ಗುಣ ಭಾವನಾತ್ಮಕ ಬುದ್ದಿ ಮತ್ತೆ ಹೊಂದಿಕೊಳ್ಳುವ ಸಾಮರ್ಥ್ಯ ಹಾಗೂ ನೈತಿಕ ಜವಾಬ್ದಾರಿಇರುವ ಇಂಜಿನಿಯರ್‌ಗಳನ್ನು ಹುಡುಕುತ್ತಿದ್ದಾರೆ. ಓದುವ ಅಭ್ಯಾಸ ಬೆಳೆಸಿಕೊಳ್ಳಲು, ನೆಟ್‌ವರ್ಕಿಂಗ್ ಮಾಡಿಕೊಳ್ಳಲು ಹಾಗೂ ಐಇಇಇ ಮುಂತಾದ ವೃತ್ತಿಪರ ವೇದಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

  ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಐಇಇಇ ಘಟಕವು ನೀಡುತ್ತಿರುವ ಕೊಡುಗೆಯನ್ನು ಪ್ರಸ್ತಾಪಿಸಿದರು.

  ಕಾರ್ಯಕ್ರಮವನ್ನು ಐಇಇಇ ಘಟಕದ ಸಂಯೋಜಕರಾದ ಡಾ. ನಾಗರಾಜ್‌ ರಾವ್ ಸಂಯೋಜಿಸಿದರು.

  ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ನೀಡಿದ ಪರಿಣಾಮಕಾರಿ ಕಾರ್ಯಕ್ರಮವಾಗಿದ್ದು, ವೃತ್ತಿಪರ ಸವಾಲುಗಳನ್ನು ಎದುರಿಸಲು ಹಾಗೂ  ಕೈಗಾರಿಕಾ ಕ್ಷೇತ್ರಕ್ಕೆ ಸಿದ್ಧರಾದ ಸಮರ್ಥ ಇಂಜಿನಿಯರ್‌ಗಳನ್ನು  ರೂಪುಗೊಳಿಸಲು ಸಹಕಾರಿಯಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.