ಮಾರ್ಪಳ್ಳಿ ಎಂ.ಲಕ್ಷ್ಮೀನಾರಾಯಣ ರಾವ್ ನಿಧನ
ಪೂಣೆಯಲ್ಲಿ ಹೃದಯಾಘಾತದಿಂದ ನಿಧನ
(Udupi) ಉಡುಪಿ: ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಎಂ.ಲಕ್ಷ್ಮೀನಾರಾಯಣ ರಾವ್ (58) ಶನಿವಾರ ಮೃತಪಟ್ಟಿದ್ದಾರೆ.
ಅವರು ಪೂಣೆಯಲ್ಲಿರುವ ತನ್ನ ಮಗಳ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ತಂದೆ, ತಾಯಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಸಹೋದರನನ್ನು ಅಗಲಿದ್ದಾರೆ.

