ಬಂಟಕಲ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಂದ ಇ–ವೋಟಿಂಗ್– ಸುರಕ್ಷಿತ ಬಯೋಮೆಟ್ರಿಕ್ ಮತದಾನ ವ್ಯವಸ್ಥೆಯ ಅಭಿವೃದ್ಧಿ
ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ವ್ಯಕ್ತಪಡಿಸಿದ ಆಡಳಿತ ಮಂಡಳಿ, ಸಿ.ಇ.ಒ, ಪ್ರಾಂಶುಪಾಲರು
(Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕ ಯಂತ್ರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸಾತ್ವಿಕ್‌ಎಸ್ ಭಟ್, ಲೋಲಾಕ್ಷಿ, ಮಾನಸಿ ಹಾಗೂ ಪ್ರತಿಕ್ಷಾ ಪಾಟೀಲ್ ರವರು ವಿಭಾಗದ ಪ್ರಾಧ್ಯಾಪಕಿಯಾದ ಶ್ರೀಮತಿ ಪ್ರೀತಿಎಂ ರವರ ಮಾರ್ಗದರ್ಶನದಲ್ಲಿ“ಇ ವೋಟಿಂಗ್ ಸಿಸ್ಟಮ್”ಎಂಬ ಸುರಕ್ಷಿತ ಬಯೋಮೆಟ್ರಿಕ್ ಮತದಾನ ವ್ಯವಸ್ಥೆಯನ್ನುಅಭಿವೃದ್ಧಿ ಪಡಿಸಿದ್ದಾರೆ.
ಈ ವ್ಯವಸ್ಥೆಯು ಮತದಾರರ ಗುರುತಿನ ದೃಢೀಕರಣಕ್ಕಾಗಿ ಮುಖ ಮತ್ತು ಕಣ್ಣು ಗುರುತಿಸುವಿಕೆ ಮುಂತಾದ ಬಯೋಮೆಟ್ರಿಕ್ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಇದರಿಂದ ಪ್ರತಿಯೊಬ್ಬ ವ್ಯಕ್ತಿ ಕೇವಲ ಒಮ್ಮೆ ಮಾತ್ರ ಮತ ಚಲಾಯಿಸಲು ಸಾಧ್ಯವಾಗುತ್ತದೆ ಹಾಗೂ ನಕಲಿ ಮತದಾನ ಮತ್ತು ವಂಚನೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ ಕಾರ್ಯ ನಿರ್ವಹಿಸುವಂತೆ ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದ್ದು, ದೂರದ ಪ್ರದೇಶಗಳಲ್ಲಿಯೂ ಬಳಸಲು ಅನುಕೂಲಕರವಾಗಿದೆ. ಸುರಕ್ಷಿತ ಮತ ಸಂಗ್ರಹಣೆ, ನೈಜ ಸಮಯದ ಫಲಿತಾಂಶಗಳ ದೃಶ್ಯೀಕರಣ ಹಾಗೂ ಪಾರದರ್ಶಕತೆಯನ್ನುಕಾಪಾಡುವ ಸೌಲಭ್ಯಗಳನ್ನು ಇದು ಒಳಗೊಂಡಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಸಿ.ಇ.ಒ ಮತ್ತು ಪ್ರಾಂಶುಪಾಲರು ಹರ್ಷ ವ್ಯಕ್ತಪಡಿಸಿದ್ದಾರೆ.

