• Home  
  • ರಮೇಶ್ ​ಬಿ.ಕೆ ರಾಜ್ಯ ವಿಪ್ರ ಫೋಟೋ, ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ​ಆಯ್ಕೆ (Ramesh B.K elected as the President of the State Vipra Photo and Videographers Association)
- ಸಂಘ, ಸಂಸ್ಥೆಗಳು

ರಮೇಶ್ ​ಬಿ.ಕೆ ರಾಜ್ಯ ವಿಪ್ರ ಫೋಟೋ, ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ​ಆಯ್ಕೆ (Ramesh B.K elected as the President of the State Vipra Photo and Videographers Association)

Share: ರಮೇಶ್ ​ಬಿ.ಕೆ ರಾಜ್ಯ ವಿಪ್ರ ಫೋಟೋ, ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ​ಆಯ್ಕೆ ಉಪಾಧ್ಯಕ್ಷ ಎಸ್ ರಘು​, ಕಾರ್ಯದರ್ಶಿ ಪ್ರದೀಪ್, ಕೋಶಾಧಿಕಾರಿಯಾಗಿ ಪ್ರಸನ್ನ ಕುಲಕರ್ಣಿ ಆಯ್ಕೆ (Bengaluru) ಬೆಂಗಳೂರು: ರಾಜ್ಯ ವಿಪ್ರ ಫೋಟೋ, ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ​ ರಮೇಶ್ ​ಬಿ.ಕೆ ಸರ್ವ ಸಮ್ಮತಿಯಿಂದ ಆಯ್ಕೆಆಗಿದ್ದಾರೆ.  ವಾರ್ಷಿಕ ಸರ್ವ ಸದಸ್ಯರ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ​ ಎ ಕೆ ಬಿ ಎಂ ಎಸ್ ನಲ್ಲಿ ನಡೆಯಿತು​.    2026-27ನೇ ಸಾಲಿನ ಅಧ್ಯ​ಕ್ಷರು ಮತ್ತು ಪದಾಧಿಕಾರಿಗಳ ಚುನಾವಣೆಯು […]

ಉಪಾಧ್ಯಕ್ಷ ಎಸ್ ರಘು, ಕಾರ್ಯದರ್ಶಿ ಪ್ರದೀಪ್, ಕೋಶಾಧಿಕಾರಿಯಾಗಿ ಪ್ರಸನ್ನ ಕುಲಕರ್ಣಿ ಆಯ್ಕೆ

(Bengaluru) ಬೆಂಗಳೂರು: ರಾಜ್ಯ ವಿಪ್ರ ಫೋಟೋ, ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ​ ರಮೇಶ್ ​ಬಿ.ಕೆ ಸರ್ವ ಸಮ್ಮತಿಯಿಂದ ಆಯ್ಕೆಆಗಿದ್ದಾರೆ.

 ವಾರ್ಷಿಕ ಸರ್ವ ಸದಸ್ಯರ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ​ ಎ ಕೆ ಬಿ ಎಂ ಎಸ್ ನಲ್ಲಿ ನಡೆಯಿತು​.

   2026-27ನೇ ಸಾಲಿನ ಅಧ್ಯ​ಕ್ಷರು ಮತ್ತು ಪದಾಧಿಕಾರಿಗಳ ಚುನಾವಣೆಯು ಬಾಬು ಜಿ ಎಸ್ ಚುನಾವಣಾ ಅಧಿಕಾರಿ  ಸಮ್ಮುಖದಲ್ಲಿ​ಜರಗಿತು.

ಅಧ್ಯಕ್ಷ ಸ್ಥಾನಕ್ಕೆ ರಮೇಶ್ ​ಬಿ.ಕೆ. ಅವರು ಚುನಾವಣೆಯಲ್ಲಿ ಆಯ್ಕೆಯಾದರು. ಉಪಾಧ್ಯಕ್ಷ ​ರಾಗಿ ಎಸ್ ರಘು​, ಕಾರ್ಯದರ್ಶಿಯಾಗಿ​ ಪ್ರದೀಪ್ ಅವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು​. ಜೊತೆ  ಕಾರ್ಯದರ್ಶಿಯಾಗಿ ಸುಧೀರ್ ಹೆಬ್ಬಾರ್​,  ಕೋಶಾಧಿಕಾರಿಯಾಗಿ ಪ್ರಸನ್ನ ಕುಲಕರ್ಣಿ  ​ಆಯ್ಕೆಯಾದರು.

 ನಿರ್ದೇಶಕರು​ಗಳಾಗಿ ಆರ್. ಜಿ.ಭಟ್​, ಪ್ರಸನ್ನ ಎನ್ ಎಸ್​, ಕಾಶಿ ಸುಬ್ರಮಣ್ಯ​, ಚಂದ್ರಶೇಖರ ಎಸ್ ಆರ್​, ಜೂಪಿಟರ್  ಮಂಜುನಾಥ್​, ರಮೇಶ್ ಭಟ್​, ​ಸತ್ಯಪ್ರಕಾಶ್​, ರಾಘವೇಂದ್ರ ರಾವ್​, ಶ್ರೀನಿವಾಸ್ ವೈಕೆ​, ಆರ್ ಕೃಷ್ಣ​, ಲಕ್ಷ್ಮಿಕಾಂತ್ ಆರ್​ ​ಆಯ್ಕೆಯಾದರು

   ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ ವಿಪ್ರ ಛಾಯಾಗ್ರಹಾಕರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್ ರಘುನಾಥ್ ಅವರು ವಿತರಿಸಿದರು.

 ಅಧ್ಯಕ್ಷ ರಮೇಶ್​  ಬಿ.ಕೆ. ಅವರು ಮಾತನಾಡಿ, ರಾಜ್ಯಾದ್ಯಂತ ಇರುವ ಎಲ್ಲಾ​ ವಿಪ್ರ ಛಾಯಾಗ್ರಹಕರುಗಳು ಹಾಗೂ ವೀಡಿಯೋಗ್ರಾಫರ್‌ ಗಳು  ಸದಸ್ಯರಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.