ಬಂಟಕಲ್ ತಾಂತ್ರಿಕ ಮಾದಕ ವ್ಯಸನದ ಕುರಿತು ಜಾಗೃತಿ ಕಾರ್ಯಗಾರ
ಸಂಪನ್ಮೂಲ ವ್ಯಕ್ತಿಯಾಗಿ ಶಿರ್ವ ಠಾಣಾ ಉಪನಿರೀಕ್ಷಕ ಮಂಜುನಾಥ ಮರಬಾಡ್ ರವರಿಂದ ಮಾಹಿತಿ
(Bantakal) ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮಾದಕ ವಸ್ತು ವಿರೋಧಿ ಸಮಿತಿ ವಸ್ತು ಸಮಿತಿಯು ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕೌನ್ಸೆಲಿಂಗ್ ಘಟಕದ ಸಹಯೋಗದೊಂದಿಗೆ ವಿಶ್ವ ತಂಬಾಕು ದಿನ ಅಂಗವಾಗಿ ವಿಶ್ವ ಮಾದಕ ವಸ್ತುಗಳ ದುರುಪಯೋಗದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಶಿರ್ವ ಪೋಲಿಸ್ ಠಾಣೆಯ ಪೋಲಿಸ್ ಉಪನಿರೀಕ್ಷಕ ಮಂಜುನಾಥ ಮರಬಾಡ್ ಅವರು ಭಾಗವಹಿಸಿ ಮಾತನಾಡಿ, ಮಾದಕ ವ್ಯಸನದ ಅಪಾಯಗಳು ಹಾಗೂ ಇದರಿಂದ ಆರೋಗ್ಯ, ಶಿಕ್ಷಣ, ಕುಟುಂಬ ಮತ್ತು ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮದ ಕುರಿತು ಮಾಹಿತಿಯನ್ನು ನೀಡಿದರು. ಇದರಜೊತೆಗೆಆನ್‌ಲೈನ್ ವಂಚನೆ, ಸೈಬರ್ ಬೆದರಿಕೆ ಹಾಗೂ ಸಾಮಾಜಿಕ ಜಾಲತಾಣಗಳ ಸುರಕ್ಷಿತ ಬಳಕೆ ಕುರಿತಂತೆ ಸೈಬರ್ ಭದ್ರತಾಅರಿವನ್ನೂ ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಮತ್ತು ನಿರಾಮಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ಸಂದೇಹಗಳನ್ನು ನಿವಾರಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಗಳಾದ ಡಾ. ದೀಪಿಕಾ ಬಿ ವಿ, ಕೌನ್ಸೆಲಿಂಗ್‌ಘಟಕದ ಸಂಯೋಜಕಿ ಶ್ರೀಮತಿ ಲಹರಿ ವೈದ್ಯ ಮತ್ತು ರಾಷ್ಟ್ರೀಯ ಸೇವಾಯೋಜನೆಯ ಸಂಯೋಜಕ ಸಚಿನ್ ಪ್ರಭುರವರು ನಡೆಸಿಕೊಟ್ಟರು.

