• Home  
  • ಉಚ್ಚಿಲ ಎಸ್‌ ಸಿ ಡಿಸಿಸಿ ಬ್ಯಾಂಕ್ ನಲ್ಲಿ ಗ್ರಾಹಕರ ಆರ್ಥಿಕ ಅರಿವು, ಜಾಗೃತಿ, ಜನ ಸಂಪರ್ಕ ಸಭೆ (Customer financial awareness and public outreach meeting at Uchila SCDCC Bank.)
- ವ್ಯವಹಾರ

ಉಚ್ಚಿಲ ಎಸ್‌ ಸಿ ಡಿಸಿಸಿ ಬ್ಯಾಂಕ್ ನಲ್ಲಿ ಗ್ರಾಹಕರ ಆರ್ಥಿಕ ಅರಿವು, ಜಾಗೃತಿ, ಜನ ಸಂಪರ್ಕ ಸಭೆ (Customer financial awareness and public outreach meeting at Uchila SCDCC Bank.)

Share: ಉಚ್ಚಿಲ ಎಸ್‌ ಸಿ ಡಿಸಿಸಿ ಬ್ಯಾಂಕ್ ನಲ್ಲಿ ಗ್ರಾಹಕರ ಆರ್ಥಿಕ ಅರಿವು, ಜಾಗೃತಿ, ಜನ ಸಂಪರ್ಕ ಸಭೆ ಕಾರ್ಯಕ್ರಮ ಉದ್ಘಾಟಿಸಿದ ಬ್ಯಾಂಕಿನ ನಿರ್ದೇಶಕ ರಾಜೇಶ್ ರಾವ್ ಪಾಂಗಾಳ    (uchila) ಉಚ್ಚಿಲ : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಚ್ಚಿಲ ಶಾಖೆಯಲ್ಲಿ ನಬಾರ್ಡ್ ಸಹಾಯೋಗದಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು, ಜಾಗೃತಿ ಕಾರ್ಯಗಾರ ಹಾಗೂ ಜನ ಸಂಪರ್ಕ ಸಭೆ ನೆರವೇರಿತು.   ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ರಾಜೇಶ್ ರಾವ್ ಪಾಂಗಾಳರವರು […]

 (uchila) ಉಚ್ಚಿಲ : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಚ್ಚಿಲ ಶಾಖೆಯಲ್ಲಿ ನಬಾರ್ಡ್ ಸಹಾಯೋಗದಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು, ಜಾಗೃತಿ ಕಾರ್ಯಗಾರ ಹಾಗೂ ಜನ ಸಂಪರ್ಕ ಸಭೆ ನೆರವೇರಿತು.

  ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ರಾಜೇಶ್ ರಾವ್ ಪಾಂಗಾಳರವರು ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು.

  ಲೀಡ್‌ ಬ್ಯಾಂಕ್‌ ಎಫ್‌ ಎಲ್‌ ಸಿ ಮೀರಾರವರು ಮತ್ತು  ಬ್ರಹ್ಮಾವರ ರುಡ್‌ ಸೆಟ್‌ ಸಿಬ್ಬಂದಿ ಚೈತ್ರಾ ರವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.

ಕೇಂದ್ರ ಕಛೇರಿಯ ಏಜಿಎಂ ವಿಶ್ವನಾಥ ಶೆಟ್ಟಿ, ಬ್ಯಾಂಕಿನ ಸುಪರ್‌ ವೈಸರ್‌ ಬಾಲಗೋಪಾಲ್‌ ಬಳ್ಳಾಲ್‌ ಮುಖ್ಯ ಅತಿಥಿಯಾಗಿದ್ದರು.

ಈ ಸಂದರ್ಭ ಶ್ರೀಮತಿ ಕಾಂತಿ ಆಚಾರ್ಯ, ಮಮತಾ ಶೆಟ್ಟಿ, ಸಿಬ್ಬಂದಿಗಳಾದ ಅಕ್ಷತಾ, ನಿತ್ಯಶ್ರೀ, ಗಿರೀಶ್,  ಪಿಗ್ಮಿ ಸಂಗ್ರಹಕರಾದ ಗುಣವತಿ ಮತ್ತು ಬ್ಯಾಂಕಿನ ಗ್ರಾಹಕರು ಉಪಸ್ಥಿತರಿದ್ದರು.

ಉಚ್ಚಿಲ ಶಾಖೆಯ ವ್ಯವಸ್ಥಾಪಕ ವಾಸುರವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.