• Home  
  •  ವೆನೆಜುವೆಲಾ : 7.2 ರಿಕ್ಟರ್ ಮಾಪಕದ ಭೂಕಂಪ, ನೂರಾರು ಜನರ ಸಾವು ( Venezuela: 7.2 magnitude earthquake, hundreds dead)
- disaster

 ವೆನೆಜುವೆಲಾ : 7.2 ರಿಕ್ಟರ್ ಮಾಪಕದ ಭೂಕಂಪ, ನೂರಾರು ಜನರ ಸಾವು ( Venezuela: 7.2 magnitude earthquake, hundreds dead)

Share: ವೆನೆಜುವೆಲಾ : 7.2 ರಿಕ್ಟರ್ ಮಾಪಕದ ಭೂಕಂಪ, ನೂರಾರು ಜನರ ಸಾವು ಬುಧವಾರ ಸಂಜೆ ಸಂಭವಿಸಿದ ಎರಡು ಅತ್ಯಂತ ಶಕ್ತಿಶಾಲಿ ಸರಣಿ ಭೂಕಂಪ (Venezuela) ವೆನೆಜುವೆಲಾ : ವೆನೆಜುವೆಲಾದ ರಾಜಧಾನಿ ಕಾರಕಾಸ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಬುಧವಾರ ಸಂಜೆ ಎರಡು ಅತ್ಯಂತ ಶಕ್ತಿಶಾಲಿ ಸರಣಿ ಭೂಕಂಪಗಳು ಸಂಭವಿಸಿದ್ದು, ಭಾರೀ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಹಾಗೂ ಸಾವು-ನೋವುಗಳು ಸಂಭವಿಸಿರುವ ಆತಂಕ ಎದುರಾಗಿದೆ.  ಭೂಕಂಪದ ತೀವ್ರತೆಗೆ ನೂರಾರು ಕಟ್ಟಡಗಳು ನೆಲಸಮಗೊಂಡಿದ್ದು, ಜನರಲ್ಲಿ ತೀವ್ರ ಭೀತಿ ಆವರಿಸಿದೆ.   […]

(Venezuela) ವೆನೆಜುವೆಲಾ : ವೆನೆಜುವೆಲಾದ ರಾಜಧಾನಿ ಕಾರಕಾಸ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಬುಧವಾರ ಸಂಜೆ ಎರಡು ಅತ್ಯಂತ ಶಕ್ತಿಶಾಲಿ ಸರಣಿ ಭೂಕಂಪಗಳು ಸಂಭವಿಸಿದ್ದು, ಭಾರೀ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಹಾಗೂ ಸಾವು-ನೋವುಗಳು ಸಂಭವಿಸಿರುವ ಆತಂಕ ಎದುರಾಗಿದೆ.

 ಭೂಕಂಪದ ತೀವ್ರತೆಗೆ ನೂರಾರು ಕಟ್ಟಡಗಳು ನೆಲಸಮಗೊಂಡಿದ್ದು, ಜನರಲ್ಲಿ ತೀವ್ರ ಭೀತಿ ಆವರಿಸಿದೆ.

  ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಈ ನೈಸರ್ಗಿಕ ವಿಕೋಪದಲ್ಲಿ ಸಾವಿನ ಸಂಖ್ಯೆ 10,000 ದಿಂದ 1,00,000 ಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

  ಯುಎಸ್ ಜಿಯೋಲಾಜಿಕಲ್ ಸರ್ವೆ (USGS) ಮಾಹಿತಿ ನೀಡಿದಂತೆ, ಮೊದಲ ಭೂಕಂಪವು ಕಾರಕಾಸ್‌ ನಿಂದ  ಪಶ್ಚಿಮಕ್ಕೆ ಸುಮಾರು 284 ಕಿಲೋಮೀಟರ್ ದೂರದಲ್ಲಿರುವ ‘ಸ್ಯಾನ್ ಫೆಲಿಪೆʼ ಬಳಿ ಗ್ರೀನ್ವಿಚ್ ಕಾಲಮಾನ (GMT) 22:04 ಕ್ಕೆ ಸಂಭವಿಸಿತು. ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.2 ರಷ್ಟಿತ್ತು.

  ಇದಾದ ಕೆಲವೇ ಕ್ಷಣಗಳಲ್ಲಿ, ರಾಜಧಾನಿಯಿಂದ 293 ಕಿಲೋಮೀಟರ್ ಪಶ್ಚಿಮದಲ್ಲಿರುವ ‘ಯುಮಾರೆ’ ಎಂಬಲ್ಲಿ ಮತ್ತೊಂದು ಭೀಕರ ಭೂಕಂಪ ಸಂಭವಿಸಿತು. ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.5 ರಷ್ಟು ದಾಖಲಾಗಿದೆ. ಭೂಮಿಯ ಆಳದಲ್ಲಿ ಕೇವಲ 15 ಕಿಲೋಮೀಟರ್ ಆಳದಲ್ಲಿ ಈ ಕಂಪನಗಳು ಸೃಷ್ಟಿಯಾಗಿರುವುದರಿಂದ ಹಾನಿಯ ತೀವ್ರತೆ ಹೆಚ್ಚಾಗಿದೆ ಎಂದು ಭಾರತದ ರಾಷ್ಟ್ರೀಯ ಭೂಕಂಪನ ಕೇಂದ್ರ (NCS) ತಿಳಿಸಿದೆ.

  “ದೇಶದಲ್ಲಿ ಭಾರಿ ಸಾವು-ನೋವುಗಳು ಮತ್ತು ವ್ಯಾಪಕ ಹಾನಿಯಾಗುವ ಸಾಧ್ಯತೆಯಿದ್ದು, ವಿಪತ್ತು ಅತ್ಯಂತ ತೀವ್ರ ಸ್ವರೂಪದಲ್ಲಿದೆ”ಎಂದು USGS ತಿಳಿಸಿದೆ.

೦೦೦೦೦೦೦೦೦೦೦೦೦೦೦೦

Leave a comment

Your email address will not be published. Required fields are marked *

eMedia Kannada  @2025. All Rights Reserved.