• Home  
  • ಉಡುಪಿ: ಕಲ್ಮಾಡಿ ಗರಡಿ ಬಳಿಯ ಕೆರೆ ಉದ್ಘಾಟನೆ (Udupi: Inauguration of the lake near Kalmadi Garadi)
- ರಾಜಕೀಯ

ಉಡುಪಿ: ಕಲ್ಮಾಡಿ ಗರಡಿ ಬಳಿಯ ಕೆರೆ ಉದ್ಘಾಟನೆ (Udupi: Inauguration of the lake near Kalmadi Garadi)

Share:  ಉಡುಪಿ: ಕಲ್ಮಾಡಿ ಗರಡಿ ಬಳಿಯ ಕೆರೆ ಉದ್ಘಾಟನೆ 35 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕೆರೆ  ಉದ್ಘಾಟಿಸಿದ ಶಾಸಕ ಯಶ್ ಪಾಲ್ ಸುವರ್ಣ (Udupi) ಉಡುಪಿ: ಉಡುಪಿ ನಗರಸಭೆಯ ಕಲ್ಮಾಡಿ ವಾರ್ಡಿನ ಗರಡಿ ಬಳಿಯಲ್ಲಿ ಸುಮಾರು 35 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕರೆ ಕಾಮಗಾರಿಯ ಉದ್ಘಾಟನೆಯನ್ನು ಹಾಲೆರೆಯುವ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ನೆರವೇರಿಸಿದರು.   ಕೆರೆ ಕಾಮಗಾರಿಯ ಉದ್ಘಾಟನೆ ನೆರವೇರಿಸಿದ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಕಲ್ಮಾಡಿ ಗರಡಿ […]

(Udupi) ಉಡುಪಿ: ಉಡುಪಿ ನಗರಸಭೆಯ ಕಲ್ಮಾಡಿ ವಾರ್ಡಿನ ಗರಡಿ ಬಳಿಯಲ್ಲಿ ಸುಮಾರು 35 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕರೆ ಕಾಮಗಾರಿಯ ಉದ್ಘಾಟನೆಯನ್ನು ಹಾಲೆರೆಯುವ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ನೆರವೇರಿಸಿದರು.

  ಕೆರೆ ಕಾಮಗಾರಿಯ ಉದ್ಘಾಟನೆ ನೆರವೇರಿಸಿದ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಕಲ್ಮಾಡಿ ಗರಡಿ ಬಳಿಯಲ್ಲಿರುವ ಕೆರೆಯನ್ನು ಅಭಿವೃದ್ಧಿ ಮಾಡುವ ಸ್ಥಳೀಯರ ಬೇಡಿಕೆಯಂತೆ ನಗರಸಭೆಯ ಮೂಲಕ 35 ಲಕ್ಷ ಅನುದಾನ ಒದಗಿಸಿ ಕಾಮಗಾರಿ ಪೂರ್ಣಗೊಂಡು ಇದೀಗ ಉದ್ಘಾಟನೆ ಗೊಂಡಿದೆ. ಈಗಾಗಲೇ ಕಲ್ಮಾಡಿ ವಾರ್ಡಿನ ಮೂಲ ಸೌಕರ್ಯ ಅಭಿವೃದ್ಧಿಗೆ ಗರಿಷ್ಠ ಅನುದಾನ ಒದಗಿಸಿದ್ದು, ಶೀಘ್ರದಲ್ಲಿಯೇ 5 ಕೋಟಿ ವೆಚ್ಚದಲ್ಲಿ ಕಲ್ಮಾಡಿ ಬಂಕೇರಕಟ್ಟ ಹೊಸ ಸೇತುವೆಯ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.

 ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ನಗರಸಭಾ ಸದಸ್ಯರಾದ ಸುಂದರ ಜೆ ಕಲ್ಮಾಡಿ, ಬಾಲಕೃಷ್ಣ ಶೆಟ್ಟಿ, ಸ್ಥಳೀಯ ಮುಖಂಡರಾದ ವಿನಯ್ ಕುಮಾರ್, ವಿವೇಕ್, ವಿನೋದ್ ಹೊಸ ಕಟ್ಟ, ಲಕ್ಷ್ಮೀಶ ಬಂಗೇರ, ಮನೋಜ್ ಕುಮಾರ್, ಸಚಿನ್, ನಿತಿನ್,ರಾಘವ ಪೂಜಾರಿ, ರತ್ನಾಕರ ಸಾಲ್ಯಾನ್, ರಮೇಶ್ ಮಾಸ್ಟರ್, ರೋಹಿತ್ ಬೊಟ್ಟಲ, ಗೋವಿಂದ ಗುರಿಕಾರ, ಸಾಧು ಪೂಜಾರಿ, ಗಿರೀಶ್ ಕಲ್ಮಾಡಿ, ಚಂದ್ರಕಾಂತ್ ಕಲ್ಮಾಡಿ, ಯಶೋದ ಕಲ್ಮಾಡಿ, ಜಯಶ್ರೀ, ಸುಶೀಲ ಮೊದಲಾದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.