• Home  
  • ಕಿನಾರ ಗ್ಲೋಬಲ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆ (Congratulations to SSLC students and teachers at Kinara Global School)
- ಶಾಲಾ ಕಾಲೇಜು

ಕಿನಾರ ಗ್ಲೋಬಲ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆ (Congratulations to SSLC students and teachers at Kinara Global School)

Share:   ಕಿನಾರ ಗ್ಲೋಬಲ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆ   ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ ಸಂಚಾಲಿತ ಶಾಲೆ (Thenka Yermal) ತೆಂಕ ಎರ್ಮಾಳು : ತೆಂಕ ಎರ್ಮಾಳು ಕಿನಾರ ಗ್ಲೋಬಲ್ ಶಾಲೆಯಲ್ಲಿ 2025-26ನೇ ಸಾಲಿನ S S L C ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಬುಧವಾರ ಶಾಲಾ ಸಭಾಭವನದಲ್ಲಿ ನೆರವೇರಿತು.   ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ (ರಿ ) ಮುಂಬೈ ಇದರ ಅಧ್ಯಕ್ಷ  ಸುರೇಶ್ ಎಸ್ […]

(Thenka Yermal) ತೆಂಕ ಎರ್ಮಾಳು : ತೆಂಕ ಎರ್ಮಾಳು ಕಿನಾರ ಗ್ಲೋಬಲ್ ಶಾಲೆಯಲ್ಲಿ 2025-26ನೇ ಸಾಲಿನ S S L C ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಬುಧವಾರ ಶಾಲಾ ಸಭಾಭವನದಲ್ಲಿ ನೆರವೇರಿತು.

  ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ (ರಿ ) ಮುಂಬೈ ಇದರ ಅಧ್ಯಕ್ಷ  ಸುರೇಶ್ ಎಸ್ ಕುಂದರ್ ಮತ್ತು ಗಿರೀಶ್ ಎಸ್ ಕುಂದರ್ ಕುಟುಂಬ ಇವರ ವತಿಯಿಂದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಹಾಗೂ ಶ್ರಮವಹಿಸಿದ ಶಿಕ್ಷಕರಿಗೆ ರೂ 3 ಲಕ್ಷ ಪ್ರೋತ್ಸಾಹ ಧನ ನೀಡಿ ಅಭಿನಂದಿಸಲಾಯಿತು.

  ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ ಅಧ್ಯಕ್ಷ ಕಿಶೋರ್ ಕುಮಾರ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಈ ಸಂದರ್ಭ  ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ ಮುಂಬೈ ಇದರ ಅಧ್ಯಕ್ಷ ಸುರೇಶ್ ಎಸ್ ಕುಂದರ್,  ಎರ್ಮಾಳು ತೆಂಕ ಮೊಗವೀರ ಸಭಾದ ಅಧ್ಯಕ್ಷ  ಲಿಂಗಪ್ಪ ಪುತ್ರನ್, ಕಿನಾರ ಶಾಲಾ ಕಟ್ಟಡ ನಿಧಿ ಸಂಗ್ರಹಣಾ ಸಮಿತಿಯ ಅಧ್ಯಕ್ಷ ದಾಮೋದರ್ ಸುವರ್ಣ, ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಪ್ರಭಾಕರ್ ಪುತ್ರನ್, ಧರ್ಮರಾಜ್ ಎರ್ಮಾಳು, ಆಡಳಿತ ಮಂಡಳಿಯ ಸಮಿತಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.   ಮುಖ್ಯ ಶಿಕ್ಷಕಿ ಶ್ರೀಮತಿ ಪ್ರೀತಿ ಸುವರ್ಣ ಪ್ರಸ್ತಾವಿಕ ವಾಗಿ ಮಾತನಾಡಿದರು. ಶ್ರೀಮತಿ ಅಶ್ವಿನಿ ಆರ್ ಸ್ವಾಗತಿಸಿದರು. ಶ್ರೀಮತಿ ಕವಿತಾ ಜಿ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ದೀಕ್ಷಾ ರೋಷನ್ ವಂದಿಸಿದರು.  

Leave a comment

Your email address will not be published. Required fields are marked *

eMedia Kannada  @2025. All Rights Reserved.