• Home  
  • ಹೆಜಮಾಡಿ ಹದಗೆಟ್ಟ ಪ್ರಮುಖ ರಸ್ತೆಗಳು : ಹೆಜಮಾಡಿ ಆಟೋ ರಿಕ್ಷಾ ಯೂನಿಯನ್ ನಿಂದ ಪ್ರತಿಭಟನೆ (Hejamady’s major roads in disrepair: Hejamady Auto Rickshaw Union protests) ಹೆಜಮಾಡಿ ಹದಗೆಟ್ಟ ಪ್ರಮುಖ ರಸ್ತೆಗಳು : ಹೆಜಮಾಡಿ ಆಟೋ ರಿಕ್ಷಾ ಯೂನಿಯನ್ ನಿಂದ ಪ್ರತಿಭಟನೆ
- protest

ಹೆಜಮಾಡಿ ಹದಗೆಟ್ಟ ಪ್ರಮುಖ ರಸ್ತೆಗಳು : ಹೆಜಮಾಡಿ ಆಟೋ ರಿಕ್ಷಾ ಯೂನಿಯನ್ ನಿಂದ ಪ್ರತಿಭಟನೆ (Hejamady’s major roads in disrepair: Hejamady Auto Rickshaw Union protests) ಹೆಜಮಾಡಿ ಹದಗೆಟ್ಟ ಪ್ರಮುಖ ರಸ್ತೆಗಳು : ಹೆಜಮಾಡಿ ಆಟೋ ರಿಕ್ಷಾ ಯೂನಿಯನ್ ನಿಂದ ಪ್ರತಿಭಟನೆ

Share: ಹೆಜಮಾಡಿ ಆಟೋ ರಿಕ್ಷಾ ಯೂನಿಯನ್ ಅಧ್ಯಕ್ಷ ಶೇಖರ್ ಹೆಜಮಾಡಿ ನೇತೃತ್ವದಲ್ಲಿ ಪ್ರತಿಭಟನೆ (Hejamadi) ಹೆಜಮಾಡಿ: ಹೆಜಮಾಡಿ ಗ್ರಾಮದ ಪ್ರಮುಖ ಸಂಪರ್ಕ ರಸ್ತೆಗಳು ತೀವ್ರ ಹದಗೆಟ್ಟಿದ್ದು, ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸುವಂತೆ ಒತ್ತಾಯಿಸಿ ಹೆಜಮಾಡಿ ಆಟೋ ರಿಕ್ಷಾ ಯೂನಿಯನ್ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.  ಹೆಜಮಾಡಿ ಆಟೋ ರಿಕ್ಷಾ ನಿಲ್ದಾಣದಿಂದ ಆಟೋ ರಿಕ್ಷಾಗಳೊಂದಿಗೆ ಪ್ರತಿಭಟನಾ ಜಾಥಾ ನಡೆಸಿದ ಅಟೋ ಚಾಲಕರು, ಬ್ರಹ್ಮಶ್ರೀ ನಾರಾಯಣ ಗುರು ರಸ್ತೆಯ ಬಿಲ್ಲವರ ಸಂಘದ ಮುಂಭಾಗದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ, ಸರ್ಕಾರ ಹಾಗೂ […]

(Hejamadi) ಹೆಜಮಾಡಿ: ಹೆಜಮಾಡಿ ಗ್ರಾಮದ ಪ್ರಮುಖ ಸಂಪರ್ಕ ರಸ್ತೆಗಳು ತೀವ್ರ ಹದಗೆಟ್ಟಿದ್ದು, ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸುವಂತೆ ಒತ್ತಾಯಿಸಿ ಹೆಜಮಾಡಿ ಆಟೋ ರಿಕ್ಷಾ ಯೂನಿಯನ್ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
  ಹೆಜಮಾಡಿ ಆಟೋ ರಿಕ್ಷಾ ನಿಲ್ದಾಣದಿಂದ ಆಟೋ ರಿಕ್ಷಾಗಳೊಂದಿಗೆ ಪ್ರತಿಭಟನಾ ಜಾಥಾ ನಡೆಸಿದ ಅಟೋ ಚಾಲಕರು, ಬ್ರಹ್ಮಶ್ರೀ ನಾರಾಯಣ ಗುರು ರಸ್ತೆಯ ಬಿಲ್ಲವರ ಸಂಘದ ಮುಂಭಾಗದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ, ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
  ಹೆಜಮಾಡಿ ಆಟೋ ರಿಕ್ಷಾ ಯೂನಿಯನ್ ಅಧ್ಯಕ್ಷ ಶೇಖರ್ ಹೆಜಮಾಡಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಹೆಜಮಾಡಿಯ ನಾಲ್ಕು ಪ್ರಮುಖ ಸಂಪರ್ಕ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ಹಲವು ಬಾರಿ ಸಂಬಂಧಿತ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಕೂಡಲೇ ರಸ್ತೆ ದುರಸ್ತಿಗೊಳಿಸದಿದ್ದರೆ ಇನ್ನಷ್ಟು ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಜಿಲ್ಲಾಧಿಕಾರಿಗೆ ಮನವಿ

  ಪ್ರತಿಭಟನೆಯ ಬಳಿಕ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಮನವಿಯಲ್ಲಿ ಹಳೆ ಲೋಕೋಪಯೋಗಿ ಇಲಾಖೆ ರಸ್ತೆ, ಪಡುಬಿದ್ರಿ ಹೆಜಮಾಡಿ ಸಂಪರ್ಕ ರಸ್ತೆ, ಹೆಜಮಾಡಿ ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿ-66 ಸಂಪರ್ಕಿಸುವ ಬ್ರಹ್ಮಶ್ರೀ ನಾರಾಯಣ ಗುರು ರಸ್ತೆ, ಹೆಜಮಾಡಿ ಮೂಲಕ ಹಾದುಹೋಗುವ ಗುಂಡಿ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ಪೂರ್ವಕ್ಕೆ ಸುಮಾರು 2 ಕಿ.ಮೀ. ದೂರದ ಅವರಾಲು ಮಟ್ಟು ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಈ ಎಲ್ಲಾ ರಸ್ತೆಗಳನ್ನು ತಕ್ಷಣ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಯೂನಿಯನ್ ಎಚ್ಚರಿಕೆ ನೀಡಿದೆ.
   ಈ ಸಂದರ್ಭ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ದಯಾನಂದ ಹೆಜಮಾಡಿ, ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜಮಾಡಿ, ಕೆಪಿಸಿಸಿ ಸಂಯೋಜಕ ಅಬ್ದುಲ್ ಅಝೀಝ್, ಅಬ್ದುಲ್ ರೆಹಿಮಾನ್ ಹಾಗೂ ಸನಾ ಇಬ್ರಾಹಿಂ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪ್ರಬೋಧ್‌ಚಂದ್ರ, ಸುಭಾಸ್ ಸಾಲ್ಯಾನ್, ಅಬ್ಬಾಸ್ ಹಾಜಿ ಕನ್ನಂಗಾರ್, ಕೇಶವ ಸಾಲ್ಯಾನ್, ಪಾಂಡುರಂಗ ಕರ್ಕೇರ, ಪ್ರಜ್ವಲ್, ಜಿನ್‌ರಾಜ್ ಬಂಗೇರ, ಸುರೇಶ್ ಶೆಟ್ಟಿ, ರಾಜು ಹೆಜಮಾಡಿ ಸೇರಿದಂತೆ ಆಟೋ ಚಾಲಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.