• Home  
  •  ಕಟಪಾಡಿ ಎಸ್ ವಿ ಎಸ್  ವಿದ್ಯಾ ಸಂಸ್ಥೆಯಲ್ಲಿ ಯಕ್ಷಗಾನ ತರಗತಿ ಉದ್ಘಾಟನೆ (Yakshagana class inaugurated at Katapady SVS English Medium Institute)
- ಶಾಲಾ ಕಾಲೇಜು

 ಕಟಪಾಡಿ ಎಸ್ ವಿ ಎಸ್  ವಿದ್ಯಾ ಸಂಸ್ಥೆಯಲ್ಲಿ ಯಕ್ಷಗಾನ ತರಗತಿ ಉದ್ಘಾಟನೆ (Yakshagana class inaugurated at Katapady SVS English Medium Institute)

Share:  ಕಟಪಾಡಿ ಎಸ್ ವಿ ಎಸ್ ವಿದ್ಯಾ  ಸಂಸ್ಥೆಯಲ್ಲಿ ಯಕ್ಷಗಾನ ತರಗತಿ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿದ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ  (Katapadi) ಕಟಪಾಡಿ: ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಇದರ ಕಾಪು ವಿಧಾನಸಭಾ ವ್ಯಾಪ್ತಿಯ ಸಂಸ್ಥೆಯಾದ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಸಂಸ್ಥೆಯಲ್ಲಿ ಶೈಕ್ಷಣಿಕ ವರ್ಷದ ಯಕ್ಷ ಶಿಕ್ಷಣ ತರಗತಿಗಳ  ಉದ್ಘಾಟನೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್  ಶೆಟ್ಟಿಯವರು ಉದ್ಘಾಟಿಸಿದರು.  ಈ ಸಂದರ್ಭ ಅವರು ಮಾತನಾಡಿ, ಯಕ್ಷ ಶಿಕ್ಷಣ ಟ್ರಸ್ಟ್ ಇದು ಯಕ್ಷಗಾನ […]

 (Katapadi) ಕಟಪಾಡಿ: ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಇದರ ಕಾಪು ವಿಧಾನಸಭಾ ವ್ಯಾಪ್ತಿಯ ಸಂಸ್ಥೆಯಾದ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಸಂಸ್ಥೆಯಲ್ಲಿ ಶೈಕ್ಷಣಿಕ ವರ್ಷದ ಯಕ್ಷ ಶಿಕ್ಷಣ ತರಗತಿಗಳ  ಉದ್ಘಾಟನೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್  ಶೆಟ್ಟಿಯವರು ಉದ್ಘಾಟಿಸಿದರು.

 ಈ ಸಂದರ್ಭ ಅವರು ಮಾತನಾಡಿ, ಯಕ್ಷ ಶಿಕ್ಷಣ ಟ್ರಸ್ಟ್ ಇದು ಯಕ್ಷಗಾನ ಕಲೆಯ ಉಳಿವು, ಬೆಳವಣಿಗೆ ಮತ್ತು ಮುಂದಿನ ಪೀಳಿಗೆಗೆ ಈ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಅತ್ಯಂತ ಶ್ಲಾಘನೀಯ ಕೆಲಸ ಮಾಡುತ್ತಿರುವ ಒಂದು ಪ್ರಮುಖ ಸಂಸ್ಥೆ. ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಯಕ್ಷಗಾನವನ್ನು ಒಂದು ಪಠ್ಯಪೂರಕ ಚಟುವಟಿಕೆಯಾಗಿ ಪರಿಚಯಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಹೆಗ್ಗಳಿಕೆ ಈ ಟ್ರಸ್ಟ್‌ಗೆ ಸಲ್ಲುತ್ತದೆ ಎಂದರು.

   ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ  ಕೆ ಸತ್ಯೇಂದ್ರ ಪೈ ಮಾತನಾಡಿ, ಯಕ್ಷಗಾನ ಕಲಾರಂಗ ಸಂಸ್ಥೆಯ ಮೂಲಕ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಮಕ್ಕಳಲ್ಲಿ ನಾಯಕತ್ಟ ಗುಣ ಮೈಗೂಡಿಸಿಕೊಳ್ಳಲು ಯಕ್ಷಗಾನ ಸಹಾಯಕ ಎಂದರು.

  ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಬಿ ಚಂದ್ರಕಾಂತ್ ಪೈ, ವೆಂಕಟರಮಣ ಭಟ್, ನಿತ್ಯಾನಂದ ಶೆಣೈ, ಆಡಳಿತಾಧಿಕಾರಿ ಸುಧಾಕರ್ ಬ್ರಹ್ಮಾವರ, ಶೈಕ್ಷಣಿಕ ಸಲಹೆಗಾರ ದೇವೇಂದ್ರ ನಾಯಕ್ ಉಪಸ್ಥಿತರಿದ್ದರು.

  ಶಾಲಾ ಮುಖ್ಯ ಶಿಕ್ಷಕಿ ಸುಜಾ ಡಿಸೋಜ ಸ್ವಾಗತಿಸಿದರು. ಸರ್ವೋತ್ತಮ ಆಚಾರ್ಯ ಮತ್ತು ಶಾರ್ಲೆಟ್  ಕಾರ್ಯಕ್ರಮ ನಿರೂಪಿಸಿದರು. ಚೈತ್ರಾ ಹೆಗ್ಡೆ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.