• Home  
  • ಉಡುಪಿ ಶಾಸಕ ಯಶ್ಪಾಲ್ ಸುವರ್ಣರಿಂದ ಅಸಂವಿದಾನಿಕ ಶಬ್ದ ಬಳಕೆ ಬಂಧನಕ್ಕೆ ಆಗ್ರಹ (Udupi MLA Yashpal Suvarna demands arrest for using unconscionable words)
- ಅಪರಾಧ

ಉಡುಪಿ ಶಾಸಕ ಯಶ್ಪಾಲ್ ಸುವರ್ಣರಿಂದ ಅಸಂವಿದಾನಿಕ ಶಬ್ದ ಬಳಕೆ ಬಂಧನಕ್ಕೆ ಆಗ್ರಹ (Udupi MLA Yashpal Suvarna demands arrest for using unconscionable words)

Share: ಉಡುಪಿ ಶಾಸಕ ಯಶ್ಪಾಲ್ ಸುವರ್ಣರಿಂದ ಅಸಂವಿದಾನಿಕ ಶಬ್ದ ಬಳಕೆ ಬಂಧನಕ್ಕೆ ಆಗ್ರಹ ಬಂಧನಕ್ಕೆ ಆಗ್ರಹಿಸಿದ ಮುದರಂಗಡಿ ಗ್ರಾಮ ಪಂಚಾತ್‌ ಮಾಜಿ ಅಧ್ಯಕ್ಷ ಡೇವಿಡ್‌ ಡಿಸೋಜಾ   (Mudarangadi) ಮುದರಂಗಡಿ : ಕಾಂಗ್ರೆಸ್‌ ಮುಖಂಡ ಹಾಗೂ ಲೋಕಸಭಾ ಸದಸ್ಯ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ರನ್ನು ಬಂಧಿಸುವಂತೆ  ಮುದರಂಗಡಿ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಡೇವಿಡ್‌ ಡಿಸೋಜಾ ಆಗ್ರಹಿಸಿದ್ದಾರೆ. ಇತ್ತೀಚೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್‌  ಆಯೋಜಿಸಿದ ಸಭೆಯಲ್ಲಿ ಉಡುಪಿ ಶಾಸಕ […]

  (Mudarangadi) ಮುದರಂಗಡಿ : ಕಾಂಗ್ರೆಸ್‌ ಮುಖಂಡ ಹಾಗೂ ಲೋಕಸಭಾ ಸದಸ್ಯ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ರನ್ನು ಬಂಧಿಸುವಂತೆ  ಮುದರಂಗಡಿ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಡೇವಿಡ್‌ ಡಿಸೋಜಾ ಆಗ್ರಹಿಸಿದ್ದಾರೆ.

ಇತ್ತೀಚೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್‌  ಆಯೋಜಿಸಿದ ಸಭೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ರವರು ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ವಿರುದ್ಧ ಕಠೋರ ಮಾತುಗಳನ್ನಾಡಿದ್ದರು.

  ಈ ಘಟನೆಗೆ ಸಂಬಂಧಿಸಿ  ಕಾಂಗ್ರೆಸ್ ವತಿಯಿಂದ ಉಡುಪಿ, ಕಾಪು, ಪಡುಬಿದ್ರಿ ಸಹಿತ ಕೆಲವು ಠಾಣೆಗಳಲ್ಲಿ ದೂರು ಸಲ್ಲಿಸಲಾಗಿದ್ದರೂ, ಪೊಲೀಸರು ಯಶ್ಪಾಲ್‌ ಸುವರ್ಣರವರಿಗೆ ನೋಟಿಸು ನೀಡಿ ಕೈತೊಳೆದುಕೊಂಡಿದ್ದಾರೆ.

 ಯಶ್ಪಾಲ್‌ ಸುವರ್ಣರವರ ಬೆಂಬಲಿಗರು ಸಾಮಾಜಿಕ ಜಾಲ ತಾಣಗಳಲ್ಲಿ ಅವರನ್ನು ಬೆಂಬಲಿಸಿ ಪೋಸ್ಟ್‌ ಹಾಕುತ್ತಿರುವುದನ್ನು ಪೊಲೀಸರು ಕಂಡೂ ಕಾಣದಂತೆ ವರ್ತಿಸುತ್ತಿರುವುದು ಸಂಶಯಕ್ಕೆ ಎಡೆ ಮಾಡಿ ಕೊಟ್ಟಿದೆ

 ಯಶ್ಪಾಲ್‌ ಸುವರ್ಣರವರು ಈಗಾಗಲೇ ಕ್ರಿಮಿನಲ್‌ ಹಿನ್ನೆಲೆಯವರಾಗಿದ್ದು, ಕರಾವಳಿಯ ಜನರು ಉಡುಪಿಯಲ್ಲಿ ನಡೆದ ಹಾಜಬ್ಬ – ಹಸನಬ್ಬ ಪ್ರಕರಣವನ್ನು ಇನ್ನೂ ಮರೆತಿಲ್ಲ.

ಪೊಲೀಸರು ತುರ್ತು ಕ್ರಮ ಕೈಗೊಳ್ಳುವಂತೆ ಡೇವಿಡ್‌ ಡಿಸೋಜಾ ಆಗ್ರಹಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.