• Home  
  • ಮೂಳೂರು: ಹಿಂದೂ ರಕ್ಷಾ ವೆಲ್‌ಫೇ‌ರ್ ಟ್ರಸ್ಟ್ ನಿಂದ ಉಚಿತ ಹಾಳೆ ಮರದ ತೊಗಟೆಯ ಕಷಾಯ ವಿತರಣೆ (Mulur: Hindu Raksha Welfare Trust distributes free decoction of safflower bark)
- social work

ಮೂಳೂರು: ಹಿಂದೂ ರಕ್ಷಾ ವೆಲ್‌ಫೇ‌ರ್ ಟ್ರಸ್ಟ್ ನಿಂದ ಉಚಿತ ಹಾಳೆ ಮರದ ತೊಗಟೆಯ ಕಷಾಯ ವಿತರಣೆ (Mulur: Hindu Raksha Welfare Trust distributes free decoction of safflower bark)

Share: ಮೂಳೂರು: ಹಿಂದೂ ರಕ್ಷಾ ವೆಲ್‌ಫೇ‌ರ್ ಟ್ರಸ್ಟ್ ನಿಂದ ಉಚಿತ ಹಾಳೆ ಮರದ ತೊಗಟೆಯ ಕಷಾಯ ವಿತರಣೆ 50 ಲೀಟರ್‌ ಕಷಾಯದ ಪ್ರಯೋಜನ ಪಡೆದ ಸುಮಾರು 950 ಸಾರ್ವಜನಿಕರು  (Kaup) ಕಾಪು: ಮೂಳೂರು ಹಿಂದೂ ರಕ್ಷಾ ವೆಲ್‌ಫೇ‌ರ್ ಟ್ರಸ್ಟ್ ಆಯೋಜನೆಯಲ್ಲಿ ಉಚಿತ ಹಾಳೆ ಮರದ ತೊಗಟೆಯಿಂದ ಮಾಡಿದ ಕಷಾಯ ವಿರತಣಾ ಕಾರ್ಯಕ್ರಮ ಬುಧವಾರ ಸರಕಾರಿ ಸಂಯುಕ್ತ ಶಾಲೆಆವರಣದಲ್ಲಿ ನೆರವೇರಿತು. ಪ್ರಧಾನ ಕಾರ್ಯದರ್ಶಿ ಧೀರೇಶ್ ಡಿ ಪಿ ಮಾತನಾಡಿ, ಸತತ 11 ವರ್ಷದಿಂದ ನಮ್ಮ ಸಂಸ್ಥೆ ಹಿಂದೂ ರಕ್ಷಾ […]

 (Kaup) ಕಾಪು: ಮೂಳೂರು ಹಿಂದೂ ರಕ್ಷಾ ವೆಲ್‌ಫೇ‌ರ್ ಟ್ರಸ್ಟ್ ಆಯೋಜನೆಯಲ್ಲಿ ಉಚಿತ ಹಾಳೆ ಮರದ ತೊಗಟೆಯಿಂದ ಮಾಡಿದ ಕಷಾಯ ವಿರತಣಾ ಕಾರ್ಯಕ್ರಮ ಬುಧವಾರ ಸರಕಾರಿ ಸಂಯುಕ್ತ ಶಾಲೆಆವರಣದಲ್ಲಿ ನೆರವೇರಿತು.

ಪ್ರಧಾನ ಕಾರ್ಯದರ್ಶಿ ಧೀರೇಶ್ ಡಿ ಪಿ ಮಾತನಾಡಿ, ಸತತ 11 ವರ್ಷದಿಂದ ನಮ್ಮ ಸಂಸ್ಥೆ ಹಿಂದೂ ರಕ್ಷಾ ವೆಲ್‌ಫೇ‌ರ್ ಟ್ರಸ್ಟ್, ಆಟಿ ಅಮಾವಾಸ್ಯೆಯ ಪ್ರಯುಕ್ತ ಹಾಳೆ ಮರದ ತೊಗಟೆಯಿಂದ ಮಾಡಿದ ಕಷಾಯವನ್ನು ಮೂಳೂರು ಸರಕಾರಿ ಸಂಯುಕ್ತ ಶಾಲೆಯ ಆವರಣದಲ್ಲಿ ಉಚಿತವಾಗಿ   ವಿತರಿಸುತ್ತಿದ್ದೇವೆ.

ನಾವು ಇಂದು 50 ಲೀಟರ್‌ ಕಷಾಯ ಸಿದ್ಧ ಪಡಿಸಿದ್ದು, ಈ ಪುರಾತನ ಸಂಪ್ರದಾಯದ ಪ್ರಯೋಜನವನ್ನು ಸುಮಾರು 950 ಜನರು  ಪಡೆಯಲು ಅವಕಾಶ ಮಾಡಿಕೊಟ್ಟಿರುತ್ತೇವೆ ಎಂದರು.

  ಈ ಸಂದರ್ಭ ಟ್ರಸ್ಟಿ ಪ್ರತೀಕ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಧೀರೇಶ್ ಡಿ ಪಿ, ಸದಸ್ಯರಾದ ದಿನೇಶ್ ಪಾಣರ, ಸುನೀಲ್ ಕರ್ಕೇರ, ಸುಕೇಶ್ ಡಿ ಮೂಳೂರು, ಗುರುಪ್ರಸಾದ್ ಪೂಜಾರಿ, ಸುಜಯ್ ಕುಕ್ಯಾನ್, ನಿತಿನ್ ಕರ್ಕೇರ, ಗಗನ್ ಮೆಂಡನ್, ಅವೀಶ್ ಅಂಚನ್, ಪ್ರಜೇಶ್, ಸೃಜನ್, ಆಕಾಶ್ ಪೂಜಾರಿ, ವಿಕಾಸ್ ಪೂಜಾರಿ, ತೀರ್ಥಶ್, ಮನ್ವಿತ್ ಕರ್ಕೇರ, ಗುರುರಾಜ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.