ಶ್ರೀ ಕ್ಷೇತ್ರ ಧರ್ಮಸ್ಥಳ: ಶ್ರೀ ಬಬ್ಬುಸ್ವಾಮಿ, ಧೂಮಾವತಿ ದೈವಸ್ಥಾನ ಜೀರ್ಣೋದ್ದಾರಕ್ಕೆ ಸಹಾಯ ಹಸ್ತ
ಡಿಡಿ ಹಸ್ತಾಂತರಿಸಿದ ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ
(Kaup) ಕಾಪು: ಕಾಪು ತಾಲೂಕಿನಕಲ್ಯಾ ಶ್ರೀ ಬಬ್ಬುಸ್ವಾಮಿ ಮತ್ತು ಧೂಮಾವತಿ ಪರಿವಾರ ದೈವಸ್ಥಾನ ಜೀರ್ಣೋದ್ದಾರ ಕಾರ್ಯಕ್ಕೆಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ. ವೀರೇಂದ್ರ ಹೆಗ್ಗಡೆಯವರು ನೀಡಿರುವ 1ಲಕ್ಷ ರೂಪಾಯಿಯ ಡಿ ಡಿ ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿಯವರು ಸಮಿತಿಯ ಪದಾಧಿಕಾರಿಗಳಾದ ಶ್ರೀಕರ ಶೆಟ್ಟಿ ಕಲ್ಯಾ, ಅರುಣ್ ಶೆಟ್ಟಿ ಪಾದೂರು, ರವಿ ಕಲ್ಯಾ, ಅನಿಲ್ ಕುಮಾರ್ ಕಾಪು ಹಾಗೂ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಮೇಲ್ವಿಚಾರಕಿ ಶ್ರೀಮತಿ ಸವಿತಾ, ಸೇವಾ ಪ್ರತಿನಿಧಿ ಜ್ಯೋತಿ, ಪುಷ್ಪ, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

