• Home  
  • ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಭಕ್ತಿಭಾವದ ಕಾಲಾವಧಿ ಹೂವಿನ ಪೂಜೆ (Flower worship during devotional period at Kaup Sri Hosa Marigudi)
- ಧಾರ್ಮಿಕ

ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಭಕ್ತಿಭಾವದ ಕಾಲಾವಧಿ ಹೂವಿನ ಪೂಜೆ (Flower worship during devotional period at Kaup Sri Hosa Marigudi)

Share: ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಭಕ್ತಿಭಾವದ ಕಾಲಾವಧಿ ಹೂವಿನ ಪೂಜೆ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ನೇತೃತ್ವದಲ್ಲಿ ನಡೆದ ವಿಶೇಷ ಹೂವಿನ ಪೂಜೆ (Kaup) ಕಾಪು: ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ಕ್ಷೇತ್ರವಾದ ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ  ಕಾಲಾವಧಿ ಹೂವಿನ ಪೂಜೆ ಮಂಗಳವಾರ ಅತ್ಯಂತ ಭಕ್ತಿಭಾವ ಹಾಗೂ ಶ್ರದ್ಧೆಯಿಂದ ನೆರವೇರಿತು.  ಹೊಸ ಮಾರಿಗುಡಿಯ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಉಪಸ್ಥಿತಿಯಲ್ಲಿ ನಡೆದ ವಿಶೇಷ ಹೂವಿನ ಪೂಜೆಯಲ್ಲಿ ನೂರಾರು ಭಕ್ತರು […]

(Kaup) ಕಾಪು: ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ಕ್ಷೇತ್ರವಾದ ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ  ಕಾಲಾವಧಿ ಹೂವಿನ ಪೂಜೆ ಮಂಗಳವಾರ ಅತ್ಯಂತ ಭಕ್ತಿಭಾವ ಹಾಗೂ ಶ್ರದ್ಧೆಯಿಂದ ನೆರವೇರಿತು.

 ಹೊಸ ಮಾರಿಗುಡಿಯ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಉಪಸ್ಥಿತಿಯಲ್ಲಿ ನಡೆದ ವಿಶೇಷ ಹೂವಿನ ಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿ, ಶ್ರೀ ಮಾರಿಯಮ್ಮನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.  

  ಶ್ರೀ ಮಾರಿಯಮ್ಮನ ಸನ್ನಿಧಿಯಲ್ಲಿ ನಡೆದ ಈ ವಿಶೇಷ ಪೂಜೆಯಲ್ಲಿ ಭಾಗವಹಿಸಿದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ, ಅಮ್ಮನ ಅನುಗ್ರಹಕ್ಕೆ ಪಾತ್ರರಾದರು.

 ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಸಮಿತಿ ಸದಸ್ಯರಾದ ಮಾಧವ ಆರ್. ಪಾಲನ್, ಶೇಖರ ಸಾಲ್ಯಾನ್, ಮನೋಹರ ರಾವ್, ರವೀಂದ್ರ ಮಲ್ಲಾರು, ಜಯಲಕ್ಷ್ಮಿ ಎಸ್. ಶೆಟ್ಟಿ, ಚರಿತ ದೇವಾಡಿಗ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಜಯರಾಮ್ ಆಚಾರ್ಯ, ಸಾವಿತ್ರಿ ಗಣೇಶ್, ಸುನಿಲ್ ಎಸ್. ಪೂಜಾರಿ, ಪ್ರಬಂಧಕ ಗೋವರ್ಧನ ಶೇರಿಗಾರ ಸೇರಿದಂತೆ ಮಾರಿಗುಡಿಯ ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.