• Home  
  • ಉಡುಪಿ: ಐಎಂಎ ವತಿಯಿಂದ ಕೌಟುಂಬಿಕ ಸಭೆ; ಪ್ರತಿಭಾ ಪ್ರದರ್ಶನ, ಬಹುಮಾನ ವಿತರಣೆ (Udupi: Family gathering by IMA; talent show, prize distribution)
- ಸಂಘ, ಸಂಸ್ಥೆಗಳು

ಉಡುಪಿ: ಐಎಂಎ ವತಿಯಿಂದ ಕೌಟುಂಬಿಕ ಸಭೆ; ಪ್ರತಿಭಾ ಪ್ರದರ್ಶನ, ಬಹುಮಾನ ವಿತರಣೆ (Udupi: Family gathering by IMA; talent show, prize distribution)

Share: ​ ಉಡುಪಿ: ಐಎಂಎ ವತಿಯಿಂದ ಕೌಟುಂಬಿಕ ಸಭೆ; ಪ್ರತಿಭಾ ಪ್ರದರ್ಶನ, ಬಹುಮಾನ ವಿತರಣೆ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ರವರಿಂದ ಜಾದೂ ಪ್ರದರ್ಶನ ಕಾರ್ಯಕ್ರಮದ ಹೈಲೈಟ್ (Udupi) ಉಡುಪಿ: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ (ಐಎಂಎ) ​ಉಡುಪಿ -ಕರಾವಳಿ ವತಿಯಿಂದ ವೈದ್ಯರು ಹಾಗೂ ಅವರ ಕುಟುಂಬ ಸದಸ್ಯರಿಗಾಗಿ ವಿಶೇಷ ಕುಟುಂಬ ಸಭೆ ಸಂಭ್ರಮದಿಂದ ನಡೆಯಿತು.  ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಸೇವೆಯಲ್ಲಿ ತೊಡಗಿರುವ ವೈದ್ಯರು ತಮ್ಮ ಕುಟುಂಬ ಸದಸ್ಯರೊಂದಿಗೆ ಒಂದೆಡೆ ಸೇರಿ, ಪರಸ್ಪರ ಸ್ನೇಹ, ಸೌಹಾರ್ದ ಹಾಗೂ ಬಾಂಧವ್ಯವನ್ನು […]

(Udupi) ಉಡುಪಿ: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ (ಐಎಂಎ) ​ಉಡುಪಿ -ಕರಾವಳಿ ವತಿಯಿಂದ ವೈದ್ಯರು ಹಾಗೂ ಅವರ ಕುಟುಂಬ ಸದಸ್ಯರಿಗಾಗಿ ವಿಶೇಷ ಕುಟುಂಬ ಸಭೆ ಸಂಭ್ರಮದಿಂದ ನಡೆಯಿತು.

 ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಸೇವೆಯಲ್ಲಿ ತೊಡಗಿರುವ ವೈದ್ಯರು ತಮ್ಮ ಕುಟುಂಬ ಸದಸ್ಯರೊಂದಿಗೆ ಒಂದೆಡೆ ಸೇರಿ, ಪರಸ್ಪರ ಸ್ನೇಹ, ಸೌಹಾರ್ದ ಹಾಗೂ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಕುಟುಂಬ ಸಭೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವೈದ್ಯರು, ಅವರ ಕುಟುಂಬದ ಸದಸ್ಯರು ಹಾಗೂ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.

  ಸಭೆಯ ಅಂಗವಾಗಿ ಕುಟುಂಬ ಸದಸ್ಯರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಪ್ರತಿಭಾ ಪ್ರದರ್ಶನಗಳು ನಡೆದವು. ಹಾಡು, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಮಕ್ಕಳು ಹಾಗೂ ಕುಟುಂಬ ಸದಸ್ಯರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ಸಭೆಗೆ ವಿಶೇಷ ಮೆರುಗು ನೀಡಿತು.

  ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಣೆ ನಡೆಯಿತು. ವಿಜೇತರಿಗೆ ಅಭಿನಂದನೆ ಸಲ್ಲಿಸಿ, ಇಂತಹ ಕಾರ್ಯಕ್ರಮಗಳು ಮಕ್ಕಳ ಹಾಗೂ ಯುವಜನರ ಪ್ರತಿಭೆಯನ್ನು ಬೆಳೆಸಲು ಪ್ರೇರಣೆಯಾಗುತ್ತವೆ ಎಂದು​ ಐ ಎಂ ಎ ಅಧ್ಯಕ್ಷ ಅಶೋಕ್ ಕುಮಾರ್  ತಿಳಿಸಿದರು.

  ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಅವರ ಜಾದೂ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. ಕಣ್ಮನ ಸೆಳೆಯುವ ಜಾದೂ ಕಲೆ, ಮನರಂಜನೀಯ ಪ್ರದರ್ಶನ ಹಾಗೂ ಕುತೂಹಲ ಮೂಡಿಸುವ ಸಾಹಸಗಳಿಂದ ಅವರು ಸಭಿಕರನ್ನು ರಂಜಿಸಿದರು.  

 ವೈದ್ಯರು ತಮ್ಮ ವೃತ್ತಿಯ ಒತ್ತಡದ ನಡುವೆಯೂ ಕುಟುಂಬದೊಂದಿಗೆ ಸಂತಸದ ಕ್ಷಣಗಳನ್ನು ಕಳೆಯಲು, ಕುಟುಂಬ ಸದಸ್ಯರ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಹಾಗೂ ವೈದ್ಯ ಸಮುದಾಯದೊಳಗಿನ ಸ್ನೇಹ-ಸೌಹಾರ್ದವನ್ನು ವೃದ್ಧಿಸಲು ಇಂತಹ ಕುಟುಂಬ ಸಭೆಗಳು ಸಹಕಾರಿಯಾಗುತ್ತವೆ ​ಎಂದು ಮಾತನಾಡುತ್ತಾ ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಕಾರ್ಯದರ್ಶಿ ಡಾ. ಮಾನಸ್ ಹೇಳಿದರು.

  ಕೋಶಾಧಿಕಾರಿ ಡಾ. ಸನತ್ ರಾವ್ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.