• Home  
  • ಪಡುಬಿದ್ರಿ: ಉರ್ದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ(Padubidri : Farewell to retired teachers of Urdu Aided Higher Primary School)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ - ಸೌಹಾರ್ಧ

ಪಡುಬಿದ್ರಿ: ಉರ್ದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ(Padubidri : Farewell to retired teachers of Urdu Aided Higher Primary School)

Share: ಪಡುಬಿದ್ರಿ: ಉರ್ದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ   ಸಯ್ಯದ್ ಶಫೀಯುಲ್ಲಾಹ್ ಮತ್ತು ಶಿಕ್ಷಕಿ ಪ್ರಮೀಳಾರವರಿಗೆ ಅಭಿನಂದನೆ    (Padubidri)  ಪಡುಬಿದ್ರಿ: ಪಡುಬಿದ್ರಿಯ ಉರ್ದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ನಿವೃತ್ತರಾದ ಶಿಕ್ಷಕರನ್ನು ಪಡುಬಿದ್ರಿಯ ವ್ಯವಸಾಯಿಕ ಸಹಕಾರಿ ಸಂಘದ ಸಭಾಂಗಣದಲ್ಲಿ ಗೌರವಿಸಲಾಯಿತು.    ಶಾಲೆಯಲ್ಲಿ ಸುಮಾರು 31 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದ ಸಯ್ಯದ್ ಶಫೀಯುಲ್ಲಾಹ್ ಹಾಗೂ ಶಿಕ್ಷಕಿ ಪ್ರಮೀಳಾ ಅವರನ್ನು ಹಿಮಾಯತುಲ್ ಇಸ್ಲಾಂ ಸಂಘ ಹಾಗೂ ಉರ್ದು ಅನುದಾನಿತ […]

   (Padubidri)  ಪಡುಬಿದ್ರಿ: ಪಡುಬಿದ್ರಿಯ ಉರ್ದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ನಿವೃತ್ತರಾದ ಶಿಕ್ಷಕರನ್ನು ಪಡುಬಿದ್ರಿಯ ವ್ಯವಸಾಯಿಕ ಸಹಕಾರಿ ಸಂಘದ ಸಭಾಂಗಣದಲ್ಲಿ ಗೌರವಿಸಲಾಯಿತು.

   ಶಾಲೆಯಲ್ಲಿ ಸುಮಾರು 31 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದ ಸಯ್ಯದ್ ಶಫೀಯುಲ್ಲಾಹ್ ಹಾಗೂ ಶಿಕ್ಷಕಿ ಪ್ರಮೀಳಾ ಅವರನ್ನು ಹಿಮಾಯತುಲ್ ಇಸ್ಲಾಂ ಸಂಘ ಹಾಗೂ ಉರ್ದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
  ಹಿಮಾಯತುಲ್ ಇಸ್ಲಾಂ ಸಂಘದ ಅಧ್ಯಕ್ಷ ಬುಡಾನ್ ಸಾಹೇಬ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಶಿಕ್ಷಕರಾಗಿ ಶಫಿಯುಲ್ಲಾ ಹಾಗೂ ಪ್ರಮೀಳಾ ಅವರು ಸಲ್ಲಿಸಿರುವ ಸೇವೆ ಶ್ಲಾಘನೀಯವಾಗಿದೆ. ತಮ್ಮ ಜ್ಞಾನ, ಅನುಭವ ಹಾಗೂ ಉತ್ತಮ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
   ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್‌ ಮಾತನಾಡಿ, ಕೇವಲ ಪಠ್ಯ ಶಿಕ್ಷಣ ನೀಡುವುದಷ್ಟೇ ಅಲ್ಲದೆ, ಅವರನ್ನು ಜವಾಬ್ದಾರಿಯುತ ಹಾಗೂ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಕಾರ್ಯವನ್ನು ಶಿಕ್ಷಕರು ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
  ಪಡುಬಿದ್ರಿ ಜುಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಕೆ.ಮೊಹಿಯುದ್ದಿನ್ ಅಧ್ಯಕ್ಷತೆ ವಹಿಸಿದ್ದರು.

  ಇಸ್ಮಾಯಿಲ್ ಮಾಸ್ಟರ್, ನೂರಾನಿಯಾ ಮಸ್ಜಿದ್‌ನ ಕಾರ್ಯದರ್ಶಿ ಶುಕೂರ್ ಸಾಹೇಬ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್, ಉಪಾಧ್ಯಕ್ಷ ಹಸನ್ ಬಾವಾ, ಕೋಶಾಧಿಕಾರಿ ಅಕ್ಬರ್ ಪಿ.ಎಂ., ಸದಸ್ಯರು ಶಾಬಾನ್ ಪಡುಬಿದ್ರಿ, ದಾವೂದ್, ಝಹೀರ್, ಮಸೀದಿಯ ಮಾಜಿ ಅಧ್ಯಕ್ಷ ಹಾಜಿ ಪಿ.ಎ.ಅಬ್ದುಲ್ ರಹ್ಮಾನ್, ಶಿಕ್ಷಕಿ ರುಮಾನಾ ಉಪಸ್ಥಿರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.