• Home  
  • ನೇಜಾರಿನಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ  ಆರೋಗ್ಯ ತಪಾಸಣಾ ಶಿಬಿರ (Free eye examination and health check-up camp in Nejaru)
- health

ನೇಜಾರಿನಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ  ಆರೋಗ್ಯ ತಪಾಸಣಾ ಶಿಬಿರ (Free eye examination and health check-up camp in Nejaru)

Share: ನೇಜಾರಿನಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ  ಆರೋಗ್ಯ ತಪಾಸಣಾ ಶಿಬಿರ   ನೇಜಾರಿನ ಸಮುದಾಯ ಭವನದಲ್ಲಿ ನಡೆದ ಶಿಬಿರ (Udupi) ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ) ಉಡುಪಿ, ಗ್ರಾಮ ಪಂಚಾಯತ್ ಕಲ್ಯಾಣಪುರ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ಮಣ್ಣು, ರೋಟರಿ ಕ್ಲಬ್ ಕಲ್ಯಾಣಪುರ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನೇಜಾರಿನ ಸಮುದಾಯ ಭವನದಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸಾ […]

(Udupi) ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ) ಉಡುಪಿ, ಗ್ರಾಮ ಪಂಚಾಯತ್ ಕಲ್ಯಾಣಪುರ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ಮಣ್ಣು, ರೋಟರಿ ಕ್ಲಬ್ ಕಲ್ಯಾಣಪುರ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನೇಜಾರಿನ ಸಮುದಾಯ ಭವನದಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ, ಅಸಾಂಕ್ರಾಮಿಕ ರೋಗಗಳ ತಪಾಸಣೆ ಹಾಗೂ ‘ಕ್ಷಯ ಮುಕ್ತ ಭಾರತ್ ಅಭಿಯಾನ-2026’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

​  ಶಿಬಿರವನ್ನು ​ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬ್ ಕಲ್ಯಾಣಪುರದ ಅಧ್ಯಕ್ಷರಾದ ರೋ. ಗಿರೀಶ್ಚಂದ್ರ, ಪ್ರತಿಯೊಬ್ಬರೂ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸಾರ್ವಜನಿಕರು ಇಂತಹ ಉಚಿತ ಆರೋಗ್ಯ ಶಿಬಿರಗಳ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಂಡು ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಶುಭ ಹಾರೈಸಿದರು.

​  ಪ್ರಸಾದ್ ನೇತ್ರಾಲಯದ ಡಾ. ಮೋಹನ್ ಗೌಡ ಅವರು ಕಣ್ಣಿನ ರಕ್ಷಣೆ, ಶಿಬಿರದ ಉದ್ದೇಶ ಹಾಗೂ ನೇತ್ರದಾನದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ವಿವರವಾದ ಮಾಹಿತಿ ನೀಡಿದರು.

   ಕೆಮ್ಮಣ್ಣು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಬ್ರಮಣ್ಯ ಪ್ರಭು ಅವರು ಅಸಾಂಕ್ರಾಮಿಕ ರೋಗಗಳು, ಕ್ಷಯ ಮುಕ್ತ ಭಾರತ್ ಅಭಿಯಾನ-2026 ಹಾಗೂ ಹೆಚ್‌ಪಿವಿ ಲಸಿಕೆ ಕುರಿತು ಜಾಗೃತಿ ಮೂಡಿಸಿದರು.

​  ಗ್ರಾಮ ಪಂಚಾಯತ್ ಕಲ್ಯಾಣಪುರದ ಮಾಜಿ ಅಧ್ಯಕ್ಷ ಸತೀಶ್ ನಾಯ್ಕ್ ಮಾತನಾಡಿ, ಊರಿನ ಎಲ್ಲಾ ನಾಗರಿಕರು ಇಂತಹ ಆರೋಗ್ಯ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

​ ಶಿಬಿರದ ವಿವರ ಮತ್ತು ಫಲಾನುಭವಿಗಳ ಸಂಖ್ಯೆ:

​  ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಉಪಾಧ್ಯಕ್ಷ ಲಿಯೋ ವಿಲಿಯಮ್ ಅಂದ್ರದೆ, ರೋಟರಿ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಭಾಗವಹಿಸಿದ್ದರು.

 ಸಮುದಾಯ ಆರೋಗ್ಯ ಅಧಿಕಾರಿ ಸರಸ್ವತಿ  ಕಾರ್ಯಕ್ರಮವನ್ನು ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.