ಕಂಬಳ ಓಟದ ತರಬೇತಿ ಶಿಬಿರಕ್ಕೆ ಶಾಸಕ ಸುನೀಲ್ ಕುಮಾರ್ ಚಾಲನೆ
ಕಾರ್ಕಳ ಮಿಯ್ಯಾರು ಲವ ಕುಶ ಜೋಡುಕೆರೆ ಕಂಬಳ ಕ್ರೀಡಾಂಗಣದಲ್ಲಿ ನಡೆದ ಶಿಬಿರ
(Karkala) ಕಾರ್ಕಳ : ಕಾರ್ಕಳ ಮಿಯ್ಯಾರು ಲವ ಕುಶ ಜೋಡುಕೆರೆ ಕಂಬಳ ಕ್ರೀಡಾಂಗಣದಲ್ಲಿ ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಕಂಬಳ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಥಮ ವರ್ಷದ ಕಂಬಳ ಓಟದ ತರಬೇತಿ ಶಿಬಿರವನ್ನು ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ಉದ್ಘಾಟಿಸಿ, ರಾಜ್ಯ ಕಂಬಳ ಸಮಿತಿ ಧ್ವಜಾರೋಹಣ ಗೈದರು.
ಈ ಸಂದರ್ಭ ಮಾತನಾಡಿದ ಅವರು, ಕಂಬಳ ದಿನದಿಂದ ದಿನಕ್ಕೆ ಕಂಬಳ ಪ್ರಸಿದ್ಧ ಪಡೆಯುತ್ತಿದ್ದು ಕಂಬಳದ ಕೋಣಗಳ ಸಂಖ್ಯೆ, ಕೋಣಗಳ ಯಜಮಾನರ ಸಂಖ್ಯೆ ಕೂಡಾ ಜಾಸ್ತಿಯಾಗಿದೆ. ಅದೇ ಪ್ರಮಾಣದಲ್ಲಿ ಕಂಬಳ ಓಟಗಾರರ ಸಂಖ್ಯೆ ಕೂಡಾ ಜಾಸ್ತಿಯಾಗಬೇಕಿದೆ. ಆ ನಿಟ್ಟಿನಲ್ಲಿ ರಾಜ್ಯ ಕಂಬಳ ಅಸೋಸಿಯೇಷನ್ ಕಂಬಳ ಓಟಗಾರರ ತರಬೇತಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಸುಮಾರು 214 ಕಂಬಳ ಓಟದ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭ ಕಂಬಳ ಓಟದ ತರಬೇತಿ ಶಿಬಿರದ ಸಂರಕ್ಷಕ ಎರ್ಮಾಳ್ ರೋಹಿತ್ ಕುಮಾರ್ ಹೆಗ್ಡೆ, ಪ್ರವೀಣ್ ಚಂದ್ರ ಆಳ್ವ, ಯೋಗೀಶ್ ಶೆಟ್ಟಿ, ಸಂದೀಪ್ ಶೆಟ್ಟಿ, ಸುನೀಲ್ ಕುಮಾರ್ ಬಜಗೋಳಿ, ಅಂಥೋನಿ ಡಿಸೋಜ ನಕ್ರೆ, ರಾಜ್ಯ ಕಂಬಳ ಸಮಿತಿ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಶೈಲೇಶ್ ಅರಿಗ ಹಿನಪ್ಪಾಡಿ, ದಿವಾಕರ್ ಜೈನ್, ಕಿರಣ್ ಬಲಿಪ, ವಿಶ್ವನಾಥ್ ಶೆಟ್ಟಿ, ಚಂದ್ರಹಾಸ ಸಾಧು ಸನಿಲ್, ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನ ಮೊಕ್ತೇಸರ ತಾರಾನಾಥ್ ಕೋಟ್ಯಾನ್, ತರಬೇತುದಾರರಾದ ಶಾಂತರಾಮ್, ವಸಂತ್ ಜೋಗಿ, ಅಶೋಕ್ ಕುಮಾರ್ ಜೈನ್ ಈದು, ದಿನೇಶ್ ಕಕ್ಕೆಪದವು, ವಿದ್ಯಾಧರ್ ಉಪಸ್ಥಿತರಿದ್ದರು.

