• Home  
  • ಅ. 3: ಕಾಪು ತಾಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನ (Oct .3: Kapu Taluk 8th Kannada Literary Conference)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ - ಸಾಂಸ್ಕೃತಿಕ - ಸೌಹಾರ್ಧ

ಅ. 3: ಕಾಪು ತಾಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನ (Oct .3: Kapu Taluk 8th Kannada Literary Conference)

Share: ಅ. 3: ಕಾಪು ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖ್ಯಾತ  ಜಾನಪದ ಸಂಶೋಧಕ ಡಾ. ವೈ. ಎನ್. ಶೆಟ್ಟಿ  (Kaup) ಕಾಪು: ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ 8ನೇ ಕನ್ನಡ ಸಾಹಿತ್ಯ ಸಮ್ಮೇಳನವು  ಸರಕಾರಿ ಪ್ರಥಮದರ್ಜೆ ಕಾಲೇಜು ಕಾಪು ಇಲ್ಲಿನ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಅಕ್ಟೋಬರ್ 3ರಂದು, ಶನಿವಾರ ಜರಗಲಿದ್ದು, ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ  ಖ್ಯಾತ ಜಾನಪದ ಸಂಶೋಧಕ ಡಾ. ಎರ್ಮಾಳು ನಾರಾಯಣ ಶೆಟ್ಟಿ [ವೈ.ಎನ್. […]

 (Kaup) ಕಾಪು: ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ 8ನೇ ಕನ್ನಡ ಸಾಹಿತ್ಯ ಸಮ್ಮೇಳನವು  ಸರಕಾರಿ ಪ್ರಥಮದರ್ಜೆ ಕಾಲೇಜು ಕಾಪು ಇಲ್ಲಿನ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಅಕ್ಟೋಬರ್ 3ರಂದು, ಶನಿವಾರ ಜರಗಲಿದ್ದು, ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ  ಖ್ಯಾತ ಜಾನಪದ ಸಂಶೋಧಕ ಡಾ. ಎರ್ಮಾಳು ನಾರಾಯಣ ಶೆಟ್ಟಿ [ವೈ.ಎನ್. ಶೆಟ್ಟಿ] ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಕಾಪು ತಾ. ಘಟಕದ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 ತುಳುನಾಡಿನ, ವಿಶೇಷವಾಗಿ ಕಾಪು ತಾಲೂಕಿನ ಜಾನಪದ, ಪರಂಪರೆ ಮತ್ತು ಇತಿಹಾಸಕ್ಕೆ ಸಂಬಂಧಪಟ್ಟಂತೆ ಕರಾರುವಕ್ಕಾಗಿ ದಾಖಲೆ ಸಹಿತ ಮಾಹಿತಿಯನ್ನು ಒದಗಿಸುವ ಕೆಲವೇ ವಿದ್ವಾಂಸರಲ್ಲಿ ಒಬ್ಬರಾಗಿರುವ ಡಾ. ವೈ.ಎನ್. ಶೆಟ್ಟಿ ಅವರು ನಿರಂತರ ಅಧ್ಯಯನ ಶೀಲರು.

   ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಅವರು, 20 ವರ್ಷಗಳ ಅವಧಿಯಲ್ಲಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿ, ವೈದ್ಯಕೀಯ ಅಧೀಕ್ಷಕರಾಗಿ, ರಾಜೀವಗಾಂಧಿ ವೈದ್ಯಕೀಯ ಮಹಾವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, 17 ವರ್ಷಗಳಕಾಲ ಎನ್.ಐ.ಟಿ.ಕೆ ಆರೋಗ್ಯಕೇಂದ್ರದಲ್ಲಿ ಸಂದರ್ಶನ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ.

  ಮಾತು (ಸಣ್ಣಕಥೆ), ಒಂದು ಆಧ್ಯಾತ್ಮಚಿಂತನೆ, ನಾಗ ಸನ್ನಿಧಿಗೆ ಸಮಾಧಿ ಕಟ್ಟುವ ಮುನ್ನ, ಹುಲಿಯಪ್ಪ ದೇವರು, ಪ್ರಕೃತಿ ಆರಾಧನೆಯ ಅಪೂರ್ವತಾಣ, ಪವಿತ್ರವನ ಸಂರಕ್ಷಣೆ, ತುಳುವರ ಜೀವನಾವರ್ತನ ೧೬ ಕಟ್ಟುಕಟ್ಟಳೆಗಳು, ಬಂಟರ ಬದುಕು (ಅಜಕತ್ತಿ ಬಂಟ ಬದುಕು -ತುಳು) ಲೇಖನಗಳು, ಎನ್ನಜ್ಜೆರೆಒರಲ್ – ತುಳುಕವನ, ತುಳುವೆರೆ ತುತೈತ ತುಳು ಲೇಖನ ಪ್ರಕಟಗೊಂಡಿವೆ.  ಅಣಿಅರದಲ ಸಿರಿಸಿಂಗಾರ ಹಾಗೂ ಸಿರಿ ನಡೆ ಪೇರೂರು ಆಲಡೆ ಪುಸ್ತಕಗಳ ಸಹ ಸಂಪಾದಕರಾಗಿರುತ್ತಾರೆ. 

 ಪ್ರಾಣಿ ಜನಪದ, ಮಾಯ ಮತ್ತು ಜೋಗ (ಆಂಶಿಕ ಪ್ರಾಯೋಜನೆ), ದಿನಕ್ಕೊಂದು ದೈವದಕಥೆ (ವಾರ ಪೂರ್ತಿ ಕಾರ್ಯಕ್ರಮದ ಪ್ರಾಯೋಜನೆ), ನೆಂಪು (ಕಾಲೇಜು ವಿದ್ಯಾರ್ಥಿಗಳಿಗೆ ಶಾಸನ ಕಲಿಕೆಯ ಉಚಿತ ತರಬೇತಿ), ತುಳುವ ಸಿರಿ ಸಮ್ಮೇಳನ ಉಡುಪಿ, ತುಳು ಐಸಿರದ ಐಸ್ರ- ಮೂಲ್ಕಿ ತುಳು ಸಮ್ಮೇಳನ-2016 ರ ಕಾರ್ಯಾಧ್ಯಕ್ಷತೆ, 2015ರಲ್ಲಿ ದುಬಾಯಿಯಲ್ಲಿ ಜರಗಿದ ತುಳುವ ಸಿರಿ ಸಮ್ಮೇಳನದ ಅಧ್ಯಕ್ಷತೆ, 2018ರಲ್ಲಿ ದುಬಾಯಿಯಲ್ಲಿ ಜರಗಿದ ತುಳು ಸಮ್ಮೇಳನದ ಗೋಷ್ಠಿಯ ಅಧ್ಯಕ್ಷತೆ, ಉಜಿರೆಯಲ್ಲಿ ಜರಗಿದ “ವಿಶ್ವ ತುಳು ಸಮ್ಮೇಳನ”ದ ಪ್ರಾಂತೀಯ ಸಂಚಾಲಕತ್ವ, ಇತ್ಯಾದಿ ಅವರು ನಿರ್ವಹಿಸಿರುವ ಪ್ರಮುಖ ಜಾನಪದ ಪ್ರಕಾರ್ಯಗಳು.

ನಮ್ಮ ಟೀವಿ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ  ಪಟ್ಟಾಂಗ ಕಾರ್ಯಕ್ರಮದ ಮೂಲಕ ಅವರು ಜನಪ್ರಿಯರಾಗಿದ್ದಾರೆ.

 2012 ರಲ್ಲಿ ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ, 2011 ರಲ್ಲಿ ಉಡುಪಿ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಸನ್ಮಾನ , “ಅಲೆವೂರು” ಶೈಕ್ಷಣಿಕ ಸೇವಾ ಪ್ರಶಸ್ತಿ, “ಜನಪದಸಿರಿ” ಜಾನಪದ ಪರಿಷತ್ ಪ್ರಶಸ್ತಿ 2025. ಅವರಿಗೆ ಸಂದ ಪುರಸ್ಕಾರಗಳು.  

Leave a comment

Your email address will not be published. Required fields are marked *

eMedia Kannada  @2025. All Rights Reserved.