ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದಲ್ಲಿ ಲಕ್ಷತುಳಸಿ ಅರ್ಚನೆ
ಕೆ. ರಾಧಾಕೃಷ್ಣ ಬ್ರಹ್ಮ ದಂಪತಿಗಳ ಹರಕೆಯ ಸೇವೆ
(Saligrama) ಸಾಲಿಗ್ರಾಮ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದಲ್ಲಿ ಕೆ. ರಾಧಾಕೃಷ್ಣ ಬ್ರಹ್ಮ ದಂಪತಿಗಳಿಂದ ಸಾವಾರೂಪದಲ್ಲಿ ಲಕ್ಷತುಳಸಿ ಅರ್ಚನೆ ಶಾಸ್ತ್ರೋಕ್ತವಾಗಿ ನೆರವೇರಿತು.
ಶ್ರೀ ದೇವಳದ ಆಡಳಿತ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯಾಯ, ಸದಸ್ಯರಾದ ಕೆ. ತಾರಾನಾಥ ಹೊಳ್ಳ, ಪ್ರಸನ್ನ ತುಂಗ, ಅರ್ಚಕರಾದ ಜನಾರ್ದನ ಅಡಿಗ, ಪ್ರಭಾರ ಪ್ರಬಂಧಕ ಗಣೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
ದೇವಸ್ಥಾನದ ವತಿಯಿಂದ ಮಂತ್ರಪಠಣ ಮಾಡಿದ ಎಲ್ಲರನ್ನೂ ಪ್ರಸಾದ ನೀಡಿ ಗುರುತಿಸಲಾಯಿತು.

