ಹಬ್ಬ ಹರಿದಿನಗಳು ನಮ್ಮ ಅಸ್ತಿತ್ವದ ಭಾಗವಾಗಿದೆ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಮೂಳೂರು ಸರ್ವೇಶ್ವರ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ; “ಪಿಲಿ ಏಸ -2026″ ಇದರ ಊದು ಪೂಜೆ
(Mooluru) ಮೂಳೂರು: ನಮ್ಮ ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿಯ ಅಸ್ಮಿತೆಯ ಜೊತೆಗೆ ಅಸ್ತಿತ್ವದ ಭಾಗವಾಗಿದೆ ಎಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ಸರ್ವೇಶ್ವರ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮೂಳೂರು ಇದರ ವತಿಯಿಂದ ಬುಧವಾರ ರಾತ್ರಿ ಗಣೇಶ ಚತುರ್ಥಿ ಪ್ರಯುಕ್ತ ಅಂಬ್ಯುಲೆನ್ಸ್ ಸೇವೆಗಾಗಿ “ಪಿಲಿ ಏಸ -2026” ಇದರ ಊದು ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತುಳುನಾಡು ಸಂಸ್ಕೃತಿಯ ಸ್ವರ್ಗ. ಇಲ್ಲಿ ಹಿರಿಯರ ಮಾರ್ಗದರ್ಶನ ಇಂದಿಗೂ ಹುಲಿ ವೇಷದಂತಹ ನಂಬಿಕೆಗಳು ಜೀವಂತವಾಗಿದೆ. ಸಾಮಾಜಿಕ ಸೇವೆಯ ಆಶಯದೊಂದಿಗೆ ಹೊಸ ಯೋಜನೆಗೆ ಮುನ್ನುಡಿ ಬರೆದ ಸರ್ವೇಶ್ವರ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮವನ್ನು ಬಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಅಡ್ಯಂತಾಯ ಉದ್ಘಾಟಿಸಿ, ಶುಭ ಹಾರೈಸಿದರು.
ಹಿಂದು ಮುಖಂಡ ಸತ್ಯಜಿತ್ ಸುರತ್ಕಲ್ ಮಾತನಾಡಿ, ಈ ನೆಲದ ಸಂಸ್ಕೃತಿಯ ಪ್ರತೀಕ ಹುಲಿ ವೇಷ. ಅಲ್ಲಿ ದೇವಿ ಆರಾಧನೆ ಜೊತೆಗೆ ಭಕ್ತಿ, ಧಾರ್ಮಿಕತೆಯ ಹಿನ್ನೆಲೆಯಿದೆ. ಧರ್ಮ ಎಂದರೆ ಸೇವೆ, ತ್ಯಾಗ. ಆ ಮೂಲಕ ಧರ್ಮದ ಸೇವೆ ಮಾಡಲು ಇಳಿದಿರುವ ಸರ್ವೇಶ್ವರ ಫ್ರೆಂಡ್ಸ್ ನ ಜನಮಾನಸದಲ್ಲಿ ಉಳಿಯುವ ಕಾಯಕ ಮಾಡಲು ಹೊರಟಿರುವುದು ಅಭಿನಂದನಾರ್ಹ ಎಂದರು.
ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಮಿಥುನ್ ಆರ್ ಹೆಗ್ಡೆ, ಅಜಯ ಪಿ ಶೆಟ್ಟಿ, ಶ್ರೀನಿವಾಸ ಪೂಜಾರಿ, ಶಿಕ್ಷಕ ಶ್ಯಾಮ್, ಅಮೃತ್ ಶೆಣೈ, ಉದಯ ಕುಮಾರ್ ಶೆಟ್ಟಿ, ಯೋಗೀಶ್ ಶೆಟ್ಟಿ ಬಾಲಾಜಿ, ಕೆ. ವಾಸುದೇವ ಶೆಟ್ಟಿ, ವೀಣಾ ಶೆಟ್ಟಿ, ಜಿತೇಶ್ ಮಿಜಾರು, ಮನೋಹರ ಶೆಟ್ಟಿ, ವಿಶ್ವನಾಥ ಪೂಜಾರಿ ಮೂಳೂರು ಮಾತನಾಡಿದರು.
ಸರ್ವೇಶ್ವರ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಚಿತ್ತನ್ ಪೂಜಾರಿ ಮೂಳೂರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಬಿಜೆಪಿ ಮುಖಂಡರಾದ ಮಟ್ಟಾರು ರತ್ನಾಕರ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ಮಿಥುನ್ ಹೆಗ್ಡೆ, ಉದ್ಯಮಿಗಳಾದ ಮನೋಹರ ಶೆಟ್ಟಿ, ಅಜಯ ಪಿ ಶೆಟ್ಟಿ, ಅಮೃತ್ ಶೆಣೈ, ಭರತ್ ಬೆಂಗಳೂರು, ಅರುಣ್ ಬೆಂಗಳೂರು, ಬಬ್ಬರ್ಯ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಅಡ್ಯಂತಾಯ, ಮಣಿಪಾಲ ಬಬ್ಬು ಸ್ವಾಮಿ ದೈವಸ್ಥಾನದ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ದಯಾನಂದ ಹೆಜಮಾಡಿ, ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಾಸುದೇವ ಶೆಟ್ಟಿ, ಶಿಕ್ಷಕ ಶ್ಯಾಮ್, ಜಯರಾಮ್, ದಿವಾಕರ ಶೆಟ್ಟಿ ಉಚ್ಚಿಲ, ಪ್ರಮೋದ್, ಪ್ರಭೋದ್ ಚಂದ್ರ ಹೆಜಮಾಡಿ, ವಿಶ್ವನಾಥ ಸನಿಲ್, ನವೀನ್ ಸಾಲ್ಯಾನ್, ಬಾಲಕೃಷ್ಣ ಅಂಚನ್, ಪ್ರಕಾಶ್ ವಿ ಅಂಚನ್, ಪ್ರಶಾಂತ್ ಪಿ ಮಜೂರು, ಪ್ರಭಾಕರ ಬಿಂದಾಸ್, ವಿಜಯ ಕರ್ಕೇರ, ದಿವಾಕರ, ಗೋವರ್ಧನ ಶೇರಿಗಾರ, ವೀಣಾ ಶೆಟ್ಟಿ, ನಿವೃತ್ತ ಯೋಧ ಪ್ರವೀಣ್ ಕುಕ್ಕುಂದೂರ್, ಯೋಗೀಶ್ ಶೆಟ್ಟಿ ಬಾಲಾಜಿ, ಸೋನು ಪಾಂಗಾಳ, ದೀಪಾ ಆರ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಜಿತ್ ಸುವರ್ಣ ಪಾಲಮೆ ನಿರೂಪಿಸಿದರು. ಸರ್ವೇಶ್ವರ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಪ್ರಮುಖರಾದ ಪುರುಷೋತ್ತಮ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಸುಕೇಶ್ ಮೂಳೂರು ವಂದಿಸಿದರು.

