Tag: PURUSHOTTAMA SALIAN

ಸಂಘ, ಸಂಸ್ಥೆಗಳು ಸಹಾಯ ಹಸ್ತ

 ಮೂಳೂರು  ಸರ್ವೇಶ್ವರ  ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ “ಪಿಲಿಏಸ–2026” ಕಾರ್ಯಕ್ರಮ (“Pili-Esa-2026” program by Mulur Sarveshwara Friends Charitable Trust)

ಮೂಳೂರು ಸರ್ವೇಶ್ವರ  ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ “ಪಿಲಿಏಸ–2026″ ಕಾರ್ಯಕ್ರಮ ಉಚಿತ ಅಂಬ್ಯುಲೆನ್ಸ್ ಸೇವೆ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಘೋಷಿಸಿದ ಸರ್ವೇಶ್ವರ  ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (Kaup) ಕಾಪು: ಸಮಾಜ ಸೇವೆಯನ್ನು  ಪ್ರಮುಖ ಧ್ಯೇಯವಾಗಿಟ್ಟು ಕೊಂಡು ಕಳೆದ ಹಲವು ವರ್ಷಗಳಿಂದ ಆರೋಗ್ಯ, ಶಿಕ್ಷಣ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮಾನವೀಯ ಸೇವಾ  ಕ್ಷೇತ್ರಗಳಲ್ಲಿ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಮೂಳೂರು  ಸರ್ವೇಶ್ವರ  ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್    ತುಳು ನಾಡಿನ ಹೆಮ್ಮೆಯ ಸಾಂಸ್ಕೃತಿಕ  ಪರಂಪರೆಯನ್ನು  ಪ್ರತಿಬಿಂಬಿಸುವ “ಪಿಲಿಏಸ –2026”  ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ  ಆಯೋಜಿಸಲಾಗಿದೆ. ಇದರಿಂದ ಉಚಿತ  ಅಂಬ್ಯುಲೆನ್ಸ್ ಸೇವೆ ಒದಗಿಸುವ  ಮಹತ್ವಾಕಾಂಕ್ಷಿ  ಯೋಜನೆ ಹಾಕಿಕೊಂಡಿದ್ದಾಗಿ ಸರ್ವೇಶ್ವರ  ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ಸದಸ್ಯ ವಿಶ್ವನಾಥ ಸನಿಲ್‌ ಸೋಮವಾರ ಕಾಪು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.  ಸಮಾಜದ ಪ್ರತಿಯೊಬ್ಬರ ಬದುಕಿನಲ್ಲಿ ಅಗತ್ಯದ ಸಂದರ್ಭದಲ್ಲಿ ನೆರವಾಗಬೇಕು ಎಂಬ ಮಹತ್ತರ ಆಶಯದೊಂದಿಗೆ ಟ್ರಸ್ಟ್ ತನ್ನ ಸೇವಾ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಸಂಕಲ್ಪವನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು, ಹೃದಯಾಘಾತ, ತುರ್ತು ವೈದ್ಯಕೀಯ ಪರಿಸ್ಥಿತಿಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಕಾಲಕ್ಕೆ ಅಂಬ್ಯುಲೆನ್ಸ್ ಸೌಲಭ್ಯ ದೊರೆಯದ ಕಾರಣ ಅಮೂಲ್ಯ ಜೀವಗಳು ಕಳೆದು ಹೋಗುತ್ತಿರುವುದು ನೋವಿನ ಸಂಗತಿಯಾಗಿದೆ. ಈ  ಹಿನ್ನೆಲೆ ಮೂಳೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರಿಗೆ ಯಾವುದೇ ಜಾತಿ, ಧರ್ಮ ಅಥವಾ ವರ್ಗಭೇದವಿಲ್ಲದೆ ಉಚಿತ ಅಂಬ್ಯುಲೆನ್ಸ್ ಸೇವೆ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ನಮ್ಮ ಟ್ರಸ್ಟ್ ಕೈಗೆತ್ತಿಕೊಂಡಿದೆ. ಈ ಕನಸಿನ ಯೋಜನೆಗೆ ಅಗತ್ಯವಿರುವ ನಿಧಿಯನ್ನು ಸಂಗ್ರಹಿಸುವ ಸಲುವಾಗಿ ತುಳುನಾಡಿನ ಹೆಮ್ಮೆಯ  ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ  “ಪಿಲಿಏಸ–2026”  ಕಾರ್ಯಕ್ರಮವನ್ನು  ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದೆ.  ಈ ಕಾರ್ಯಕ್ರಮವು ಕೇವಲ ಸಾಂಸ್ಕೃತಿಕ ಉತ್ಸವವಲ್ಲ.  ಸಮಾಜದ ಒಳಿತಿಗಾಗಿ ಪ್ರತಿಯೊಬ್ಬರನ್ನು ಒಂದೇ  […]

eMedia Kannada  @2025. All Rights Reserved.