ಪಡುಬಿದ್ರಿಯಲ್ಲಿ ಸೌರಭ ಆಸ್ಪತ್ರೆ ಉದ್ಘಾಟನೆ, ಕೆಎಂಸಿ ಆಸ್ಪತ್ರೆಯ 24×7 ತುರ್ತು ಸೇವೆ ವಿಸ್ತರಣೆ
ಸೆ.19: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು. ಟಿ. ಖಾದರ್ ಅವರಿಂದ ಉದ್ಘಾಟನೆ
(Kaup) ಕಾಪು: ಗ್ರಾಮೀಣ ಪ್ರದೇಶಗಳ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ಒದಗಿಸುವ ನಿಟ್ಟಿನಲ್ಲಿ ಇದರೊಂದಿಗೆ ಪಡುಬಿದ್ರಿಯಲ್ಲಿ ಸೌರಭ ಆಸ್ಪತ್ರೆಯು ಉದ್ಘಾಟನೆಗೊಳ್ಳಲಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ತಜ್ಞರ ತಂಡವು ಸೌರಭ ಆಸ್ಪತ್ರೆಯಲ್ಲಿ 24×7 ತುರ್ತು ಚಿಕಿತ್ಸೆ ಹಾಗೂ ಅಪಘಾತ ಮತ್ತು ಗಾಯಗಳ ಚಿಕಿತ್ಸಾ ಸೇವೆಗಳನ್ನು ಒದಗಿಸಲಿದೆ ಎಂದು ಸೌರಭ ಆಸ್ಪತ್ರೆಯ ಸಂಸ್ಥಾಪಕ ಡಾ. ಭವಾನಿ ಶಂಕರ್ ಹೇಳಿದ್ದಾರೆ.
ಅವರು ಗುರುವಾರ ಕಾಪು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಅವರು ಇತರ ಗಣ್ಯರೊಂದಿಗೆ ಸೆಪ್ಟೆಂಬರ್ 19ರಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ಸೌರಭ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಾಂಕೇತಿಕವಾಗಿ ಲಭ್ಯವಾಗಲಿರುವ ವಿವಿಧ ಆರೋಗ್ಯ ಸೇವೆಗಳನ್ನು ಘೋಷಿಸಲಾಗುವುದು ಎಂದರು.
ಸೌರಭ ಆಸ್ಪತ್ರೆಯಲ್ಲಿ ನೇತ್ರ, ಪ್ರಸೂತಿ ಮತ್ತು ಸ್ತ್ರೀರೋಗ, ಮಕ್ಕಳ ಹಾಗೂ ಸಾಮಾನ್ಯ ವೈದ್ಯಕೀಯ ವಿಭಾಗಗಳ ಹೊರರೋಗಿ ಸೇವೆಗಳ ಜೊತೆಗೆ 24×7 ತುರ್ತು ಮತ್ತು ಕ್ರಿಟಿಕಲ್ ಕೇರ್ ಘಟಕ ತೀವು ನಿಗಾ ಘಟಕ (ICU), ಶಸ್ತ್ರ ಚಿಕಿತ್ಸಾ ಕೊಠಡಿ, ಹೆರಿಗೆ ಕೊಠಡಿ, ಎಕ್ಸ್-ರೇ, ರೋಗ ನಿರ್ಣಯ ಪ್ರಯೋಗಾಲಯ, ಔಷಧಾಲಯ ಹಾಗೂ ಸ್ಕ್ಯಾನಿಂಗ್ ಮತ್ತು ಇಮೇಜಿಂಗ್ ಸೇವೆಗಳು ಲಭ್ಯವಿವೆ. ಡೇ ಕೇರ್ ಘಟಕ, ಪುರುಷ ಮತ್ತು ಮಹಿಳೆಯರ ಸಾಮಾನ್ಯ ವಾರ್ಡ್‌ಗಳು, ವಿಶೇಷ ವಾರ್ಡ್ ಹಾಗೂ ಡಿಲಕ್ಸ್ ಕೊಠಡಿಗಳ ಸೌಲಭ್ಯವೂ ಆಸ್ಪತ್ರೆಯಲ್ಲಿ ಇರಲಿದೆ, ಎಂದರು.
ಸೌರಭ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ಸೌಮ್ಯ ಮಾತನಾಡಿ, ಪಡುಬಿದ್ರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಪಾರ್ಶ್ವವಾಯು, ಹೃದಯ ಸ್ತಂಭನ, ವಿಷ ಸೇವನೆ, ಮಕ್ಕಳ ತುರ್ತು ಪರಿಸ್ಥಿತಿ ಹಾಗೂ ರಸ್ತೆ ಅಪಘಾತಗಳ ಪ್ರಕರಣಗಳು ಬರುತ್ತವೆ. ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ತಂಡದ ಸಹಯೋಗವು ಇಂತಹ ರೋಗಿಗಳಿಗೆ ತ್ವರಿತ ಹಾಗೂ ಪರಿಣಾಮಕಾರಿ 2983 ನೀಡಲು ಸಹಕಾರಿಯಾಗಲಿದೆ ಎಂದರು.
ಕೆಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ಪಡುಬಿದ್ರಿಯ ಸೌರಭ ಆಸ್ಪತ್ರೆಯಲ್ಲಿ 24×7 ತುರ್ತು ಚಿಕಿತ್ಸಾ ಸೇವೆ ಲಭ್ಯವಾಗಲಿದೆ. ತರಬೇತಿ ಪಡೆದ ತುರ್ತು ಚಿಕಿತಾ ತಜ್ಞರು ಅಪಘಾತ, ಹೃದಯ ಸಂಬಂಧಿ, ನರರೋಗ, ಬಹು ಗಾಯಗಳು ಸೇರಿದಂತೆ ಗಂಭೀರ ತುರ್ತು ಪರಿಸ್ಥಿತಿಗಳಿಗೆ ತ್ವರಿತ ಚಿಕಿತ್ಸೆ ನೀಡಲಿದ್ದಾರೆ. ಪಡುಬಿದ್ರಿ ಹಾಗೂ ಸುತ್ತಮುತ್ತಲಿನ ಜನರಿಗೆ ‘ಗೋಲ್ಡನ್ ಅವರ್‌ನಲ್ಲಿ ಜೀವ ರಕ್ಷಕ 2983 ದೊರೆಯಲಿದೆ. ಆಧುನಿಕ ಜೀವ ರಕ್ಷಕ ಉಪಕರಣಗಳು ಹಾಗೂ ಅಡ್ವಾಕಾರ್ಡಿಯಾಕ್ SH (ACLS) ಲೈಫ್ ಸಪೋರ್ಟ್ ಅಂಬ್ಯುಲೆನ್ಸ್ ಸೌಲಭ್ಯವೂ ದಿನದ 24 ಘಂಟೆಯೂ ದೊರೆಯಲಿದೆ. ಸಹಯೋಗವು ಗ್ರಾಮೀಣ ಪ್ರದೇಶಗಳಿಗೆ ತುರ್ತು ಚಿಕಿತ್ಸೆಯನ್ನು ವೇಗವಾಗಿ ತಲುಪಿಸುವಲ್ಲಿ ನೆರವಾಗಲಿದೆ ಎಂದು ಕೆಎಂಸಿ ಆಸ್ಪತ್ರೆ, ಡಾ. ಬಿ. ಆರ್.ಅಂಬೇಡ್ಕರ್ ಸರ್ಕಲ್, ಮಂಗಳೂರಿನ ಮಾರ್ಕೆಟಿಂಗ್ ವಿಭಾಗದ ಹಿರಿಯ ವ್ಯವಸ್ಥಾಪಕ ರಾಕೇಶ್ ದರ್ಶನ್ ತಿಳಿಸಿದರು.
ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಕ್ರಸ್ಟರ್ ಮುಖ್ಯಸ್ಥ ಜೀಧು ರಾಧಾಕೃಷ್ಣ ಮಾತನಾಡಿ, “ಕುಂದಾಪುರ, ಪುತ್ತೂರು, ಕಕ್ಕಿಂಜಿ, ಬೆಳ್ತಂಗಡಿ ಹಾಗೂ ಕೇರಳದಲ್ಲಿರುವ ನಮ್ಮ ತುರ್ತು ಚಿಕಿತ್ಸಾ ಕೇಂದ್ರಗಳ ಮೂಲಕ ಹೃದಯ ಸಂಬಂಧಿ ಸಮಸ್ಯೆಗಳು. ಪಾರ್ಶ್ವವಾಯು, ಅಪಘಾತ, ಬಹು ಗಾಯಗಳು, ಹಾವು ಕಡಿತ, ವಿಷ ಸೇವನೆ ಹಾಗೂ ಮಕ್ಕಳ ತುರ್ತು ಪ್ರಕರಣಗಳಿಗೆ ತಕ್ಷಣದ 2983 ನೀಡಲಾಗುತ್ತಿದೆ. ಹೆಚ್ಚಿನ ವಿಶೇಷ ಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಕೆಎಂಸಿ ಆಸ್ಪತ್ರೆ ಮಂಗಳೂರಿಗೆ ಸ್ಥಳಾಂತರಿಸಿ, ವಿವಿಧ ವಿಭಾಗಗಳ ತಜ್ಞರ ತಂಡದ ಮೂಲಕ ಮುಂದಿನ ಚಿಕಿತ್ಸೆಯನ್ನು ನೀಡಲಾಗುತ್ತದೆ, ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸೌರಭ ಆಸ್ಪತ್ರೆಯ ಸಂಸ್ಥಾಪಕ ಡಾ. ಭವಾನಿ ಶಂಕರ್, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ಸೌಮ್ಯ, ಮಂಗಳೂರು ಕೆಎಂಸಿ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಹಿರಿಯ ವ್ಯವಸ್ಥಾಪಕ ರಾಕೇಶ್ ದರ್ಶನ್, ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಕ್ರಸ್ಟರ್ ಮುಖ್ಯಸ್ಥ ಜೀಧು ರಾಧಾಕೃಷ್ಣನ್ ಉಪಸ್ಥಿತರಿದ್ದರು.

