• Home  
  •   ಟೀಮ್ ಮಾರುತಿ ಮೂಳೂರು: ಐದನೇ ವರ್ಷದ ಪಿಲಿ ಪೆಜ್ಜೆ ಊದು ಸೇವೆ, ವಿದ್ಯಾರ್ಥಿವೇತನ, ಸನ್ಮಾನ (Team Maruti Mulooru: 5th Annual ‘Pili Pejje Oodu’ Seva, Scholarships, and Felicitations)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ - ಸಹಾಯ ಹಸ್ತ - ಸೌಹಾರ್ಧ

  ಟೀಮ್ ಮಾರುತಿ ಮೂಳೂರು: ಐದನೇ ವರ್ಷದ ಪಿಲಿ ಪೆಜ್ಜೆ ಊದು ಸೇವೆ, ವಿದ್ಯಾರ್ಥಿವೇತನ, ಸನ್ಮಾನ (Team Maruti Mulooru: 5th Annual ‘Pili Pejje Oodu’ Seva, Scholarships, and Felicitations)

Share:     ಟೀಮ್ ಮಾರುತಿ ಮೂಳೂರು: ಐದನೇ ವರ್ಷದ ಪಿಲಿ ಪೆಜ್ಜೆ ಊದು ಸೇವೆ, ವಿದ್ಯಾರ್ಥಿವೇತನ, ಸನ್ಮಾನ ವಿದ್ಯಾರ್ಥಿ ಆಸರೆ ಯೋಜನೆಯ ಮೂಲಕ 2 ಲಕ್ಷ 35 ಸಾವಿರ ರೂ. ವಿದ್ಯಾರ್ಥಿ ವೇತನ ವಿತರೆಣೆ (Mooluru) ಮೂಳೂರು: ನಮ್ಮ ಹಬ್ಬಗಳು ದೇಶದ ಅಸ್ಮಿತೆ, ಅಸ್ತಿತ್ವ. ಪ್ರತಿ ಹಬ್ಬಕ್ಕೂ ಅರ್ಥವಿದೆ. ಹಬ್ಬದ ಸಂಭ್ರಮದಲ್ಲೂ ಸಮಾಜ ಸೇವಾ ಕಾರ್ಯದ ಕೆಲಸದ ಮೂಲಕ ಟೀಂ ಮೂಳೂರು ಸಾರ್ಥಕತೆಯ ಕೆಲಸ ಮಾಡಿದೆ. ಇದರ ಜೊತೆಗೆ ಹುಲಿ ವೇಷ ತರಬೇತಿಯ ಮೂಲಕ ಸಂಸ್ಕೃತಿ ಉಳಿಸುವ ಕೆಲಸ […]

(Mooluru) ಮೂಳೂರು: ನಮ್ಮ ಹಬ್ಬಗಳು ದೇಶದ ಅಸ್ಮಿತೆ, ಅಸ್ತಿತ್ವ. ಪ್ರತಿ ಹಬ್ಬಕ್ಕೂ ಅರ್ಥವಿದೆ. ಹಬ್ಬದ ಸಂಭ್ರಮದಲ್ಲೂ ಸಮಾಜ ಸೇವಾ ಕಾರ್ಯದ ಕೆಲಸದ ಮೂಲಕ ಟೀಂ ಮೂಳೂರು ಸಾರ್ಥಕತೆಯ ಕೆಲಸ ಮಾಡಿದೆ. ಇದರ ಜೊತೆಗೆ ಹುಲಿ ವೇಷ ತರಬೇತಿಯ ಮೂಲಕ ಸಂಸ್ಕೃತಿ ಉಳಿಸುವ ಕೆಲಸ ಮಾಡಿದೆ. ಸಾಮರಸ್ಯ, ಸಮೃದ್ಧಿಯ ಕಾಪು ಮಾಡುವಲ್ಲಿ ಇಂತಹ ಯುವ ಸಂಘಟನೆಗಳ ಪಾತ್ರ ಮುಖ್ಯ. ಮತ್ತಷ್ಟು ಸಮಾಜಿಕ ಕಾರ್ಯಗಳು ಟೀಮ್ ಮಾರುತಿ ಮೂಳೂರು ತಂಡದಿಂದ ಆಗಲಿ ಎಂದು ಕಾಪು  ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

   ಅವರು ಟೀಮ್ ಮಾರುತಿ ಮೂಳೂರು ಸಮಾಜ ಸೇವೆಯ ಉದ್ದೇಶಕ್ಕೆ ಹಮ್ಮಿಕೊಂಡಿರುವ ಪಿಲಿ ಪೆಜ್ಜೆ 5.0 ಅಂಗವಾಗಿ ಆಯೋಜಿಸಲಾಗಿದ್ದ ಊದು ಸೇವೆ, ವಿದ್ಯಾರ್ಥಿ ವೇತನ ವಿತರಣೆ ಮತ್ತು ಸಾಧಕರಿಗೆ ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

 ವಿದ್ಯಾರ್ಥಿ ವೇತನ ವಿತರಣೆ : ವಿದ್ಯಾರ್ಥಿ ಆಸರೆ ಯೋಜನೆಯ ಮೂಲಕ 2 ಲಕ್ಷ 35 ಸಾವಿರ ರೂ. ಯನ್ನು ತಂದೆಯನ್ನು ಕಳೆದುಕೊಂಡು ತಾಯಿ ಅಥವಾ ಪೋಷಕರ ಆಶ್ರಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಹಾಗೂ ದಿವ್ಯಾಂಗ ಒಟ್ಟು 92 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

 ಈ ಬಾರಿ ಸಮಾಜಮುಖಿ ಕಾರ್ಯಗಳಿಗಾಗಿ ಮಕ್ಕಳಿಂದ ಯುವಕರಾದಿಯಾಗಿ 31 ಜನರು  ಹುಲಿ ವೇಷಧಾರಿಗಳಾಗಿದ್ದಾರೆ.

ಸನ್ಮಾನ : ಚೇತನ್ ಆಚಾರ್ಯ, ಜೀವನ್ ಪೂಜಾರಿ, ಆಂತ್ರಾ ಆನಂದ್ ಕೋಟ್ಯಾನ್, ಈಶ್ವರ್ ಮಲ್ಪೆಯವರನ್ನು ಸನ್ಮಾನಿಸಲಾಯಿತು.

  ಟೀಂ ಮಾರುತಿ ಬಳಗದ ಅಧ್ಯಕ್ಷ ಪ್ರಹಾರ್ ಅಧ್ಯಕ್ಷತೆ ವಹಿಸಿದ್ದರು.

   ಈ ಸಂದರ್ಭ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ. ಎ. ಗಫೂರ್, ಮೂಳೂರು ಸರ್ವೇಶ್ವರ ಕೊಡಮಣಿತ್ತಾಯ ಬಬ್ಬರ್ಯ ದೈವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಅಡ್ಯಂತಾಯ, ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ್ ಎಸ್. ಶೆಟ್ಟಿ, ಕಾಪು ಪುರಸಭೆ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಗಣ್ಯರಾದ ಗೀತಾಂಜಲಿ ಸುವರ್ಣ, ಜನಾರ್ದನ ಕೆ. ಪುತ್ರನ್, ಪ್ರಕಾಶ್ ವಿ. ಅಂಚನ್, ಪ್ರಭಾಕರ ಪೂಜಾರಿ, ಶಿವಕುಮಾರ್ ಮೆಂಡನ್, ಚಂದ್ರಕಾಂತ ಮೆಂಡನ್, ಸೋನು ಪಾಂಗಾಳ, ಜಯ ಪೂಜಾರಿ ರಾಜಮನೆ, ಎಂ.ಎಚ್.ಬಿ ಮಹಮ್ಮದ್, ದಿನೇಶ್ ಎರ್ಮಾಳು, ಯಜ್ಞೇಶ್ ಕರ್ಕೇರ, ಸಾಯಿನಾಥ್ ಶೆಟ್ಟಿ, ಸುಗುಣಾ ಕರ್ಕೇರ,  ಪೂರ್ಣಿಮಾ ಡಿ. ಸುವರ್ಣ, ನಿತ್ಯಾನಂದ ಶೆಟ್ಟಿ, ಸಚಿನ್ ಸುವರ್ಣ, ಕಿರಣ್ ಕುಮಾರ್, ಯು.ಸಿ. ಶೇಖಬ್ಬ, ಪುರಸಭೆ ಸದಸ್ಯರಾದ ಸತೀಶ್ಚಂದ್ರ ಮೂಳೂರು, ಮಹಮ್ಮದ್ ಆಸಿಫ್, ಅರುಣ್ ಶೆಟ್ಟಿ ಪಾದೂರು, ದೇವರಾಜ್ ಕೋಟ್ಯಾನ್, ಅಮೀರ್ ಕಾಪು, ಹರಿಣಾಕ್ಷಿ ದೇವಾಡಿಗ, ಶೈಲೇಶ್ ಅಮೀನ್ ಹಾಗೂ ಟೀಂ ಮಾರುತಿ ತಂಡದ ಗಗನ್ ಮೆಂಡನ್, ಧೀರೇಶ್ ಮೂಳೂರು, ವಿಕಾಸ್ ಪೂಜಾರಿ, ಆಕಾಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

  ಟೀಂ ಮಾರುತಿ ಬಳಗದ ಪ್ರಣವ್ ಪ್ರಸ್ತಾವನೆಗೈದರು. ಶ್ರೀನಿತ್ ಶೆಟ್ಟಿ ಮಾರ್ನಾಡ್, ಅನಿಲ್ ಕುಮಾರ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.