• Home  
  • ಉಡುಪಿ – ಉಚ್ಚಿಲ ದಸರಾ : ಶೋಭಾಯಾತ್ರೆಗೆ ಚಾಲನೆ (Udupi – Uchila Dussehra: Shobhayatra starts)
- ಧಾರ್ಮಿಕ

ಉಡುಪಿ – ಉಚ್ಚಿಲ ದಸರಾ : ಶೋಭಾಯಾತ್ರೆಗೆ ಚಾಲನೆ (Udupi – Uchila Dussehra: Shobhayatra starts)

Share: ಉಡುಪಿ – ಉಚ್ಚಿಲ ದಸರಾ : ಶೋಭಾಯಾತ್ರೆಗೆ ಚಾಲನೆ     ಆಕರ್ಷಕ ಟ್ಯಾಬ್ಲೊಗಳು, ಸಾಂಸ್ಕೃತಿಕ ಕಲಾತಂಡಗಳಿಂದ ಹೆಚ್ಚಿದ ಮೆರುಗು PHOTO CREDIT : SACHIN UCHILA    (Uchila) ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಐದನೇ ವರ್ಷದ ಉಡುಪಿ – ಉಚ್ಚಿಲ ದಸರಾ ಮಹೋತ್ಸವದಲ್ಲಿ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಶೋಭಾಯಾತ್ರೆಗೆ ಬುಧವಾರ ಸಂಜೆ ಚಾಲನೆ ದೊರಕಿತು.  ದೇವಸ್ಥಾನದ ಸ್ವಾಗತ ಗೋಪುರದ ಮುಂಭಾಗದಲ್ಲಿ ಗಣ್ಯರು […]

ಉಡುಪಿ – ಉಚ್ಚಿಲ ದಸರಾ : ಶೋಭಾಯಾತ್ರೆಗೆ ಚಾಲನೆ  

  ಆಕರ್ಷಕ ಟ್ಯಾಬ್ಲೊಗಳು, ಸಾಂಸ್ಕೃತಿಕ ಕಲಾತಂಡಗಳಿಂದ ಹೆಚ್ಚಿದ ಮೆರುಗು

   (Uchila) ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಐದನೇ ವರ್ಷದ ಉಡುಪಿ – ಉಚ್ಚಿಲ ದಸರಾ ಮಹೋತ್ಸವದಲ್ಲಿ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಶೋಭಾಯಾತ್ರೆಗೆ ಬುಧವಾರ ಸಂಜೆ ಚಾಲನೆ ದೊರಕಿತು.

 ದೇವಸ್ಥಾನದ ಸ್ವಾಗತ ಗೋಪುರದ ಮುಂಭಾಗದಲ್ಲಿ ಗಣ್ಯರು ಹಾಗೂ ಡ್ರೋನ್ ಮೂಲಕ ಪುಷ್ಪಾರ್ಚನೆ ನೆರವೇರಿಸಿದ ಬಳಿಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.

 ಶೋಭಾಯಾತ್ರೆಯನ್ನು ಗಣ್ಯರ ಜತೆಗೂಡಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಹಾಗೂ ದಸರಾ ಮಹೋತ್ಸವದ ರೂವಾರಿ ನಾಡೋಜ ಡಾ. ಜಿ. ಶಂಕರ್ ಮತ್ತು ಅಧ್ಯಕ್ಷ ಜಯ ಸಿ ಕೋಟ್ಯಾನ್‌ ಉದ್ಘಾಟಿಸಿದರು.

 ಮಧ್ಯಾಹ್ನ 2.30ಕ್ಕೆ ಶಾರದಾ ಮಾತೆ ಹಾಗೂ ನವದುರ್ಗೆಯರ ವಿಸರ್ಜನಾ ಪೂಜೆ ನಡೆಯಿತು.  

 ಶೋಭಾಯಾತ್ರೆ ಆರಂಭಗೊಂಡಿದ್ದು, ರಾತ್ರಿ ಕಾಪು ದೀಪಸ್ತಂಭದ ಬಳಿ ಜಲಸ್ತಂಭನಗೊಳ್ಳಲಿದೆ. ಈ ಸಂದರ್ಭದಲ್ಲಿ ಕಾಶಿಯಿಂದ ಆಗಮಿಸಿರುವ  ಅರ್ಚಕರಿಂದ ಗಂಗಾರತಿ ನೆರವೇರಲಿದೆ.

  ಶೋಭಾಯಾತ್ರೆಯಲ್ಲಿ ಬಿರುದಾವಳಿ, ಬಣ್ಣದ ಕೊಡೆಗಳು, ಕೊಂಬು-ಕಹಳೆ, ಡೋಲು, ವಿವಿಧ ಬ್ಯಾಂಡ್‌ಗಳು, ನಾಗಸ್ವರ, ಸ್ಯಾಕ್ಸೋಫೋನ್, ನಾಸಿಕ್ ಬ್ಯಾಂಡ್, ಚೆಂಡೆ, ದೇವರ ಗೊಂಬೆಗಳು, ಕುಣಿತ ಭಜನೆ, ಭಜನಾ ತಂಡಗಳು, ಹುಲಿಕುಣಿತ, ಬೇಡರ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿದೆ.

 

  ಇದರೊಂದಿಗೆ ಮಹಿಷಮರ್ದಿನಿ, ಶಿವಾಜಿ, ಜಟಾಯು, ರಾವಣ, ಸೀತೆ, ಧನಲಕ್ಷ್ಮೀ ದೇವಿ, ಮಹಿಷಾಸುರ ವಧೆ, ಹನುಮಂತ, ರಾಮ-ಲಕ್ಷ್ಮಣ, ನವದುರ್ಗೆಯರು, ಮಕ್ಕಳ ಶಾರದೆ, ಪರಿಸರ ಜಾಗೃತಿ ಹಾಗೂ ವಿವಿಧ ಪೌರಾಣಿಕ ಮತ್ತು ಧಾರ್ಮಿಕ ವಿಷಯಗಳನ್ನು ಬಿಂಬಿಸುವ ಟ್ಯಾಬ್ಲೊಗಳು ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಲಿವೆ. ಮಹಾಲಕ್ಷ್ಮೀ ದೇವಸ್ಥಾನ, ಬೆಣ್ಣೆಕುದ್ರು, ಬಗ್ವಾಡಿ, ಉಚ್ಚಿಲ ಮಹಾಲಕ್ಷ್ಮೀ, ಶ್ರೀ ಮಾಧವ ಮಂಗಲ ಪೂಜಾರ್ಯರ ಪ್ರತಿಕೃತಿ, ದೋಣಿ ಹಾಗೂ ಮೀನುಗಾರಿಗೆ ಸಂಬಂದಿಸಿದ ವಸ್ತುಗಳು, ತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರತಿರೂಪಗಳೂ ಮೆರವಣಿಗೆಯಲ್ಲಿ ಗಮನ ಸೆಳೆಯಿತು.

  ಈ ಸಂದರ್ಭ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ, ಮಾಜಿ ಸಚಿವ ವಿನಯಕುಮಾರ್‌ ಸೊರಕೆ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಸುವರ್ಣ, ಉಡುಪಿ ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಕವಿತಾ ಶರತ್,  ದ.ಕ. ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಜತೆ ಕಾರ್ಯದರ್ಶಿ ಸುಜಿತ್ ಸಾಲ್ಯಾನ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್, ನಾಲ್ಕುಪಟ್ಣ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಂಘ ಅಧ್ಯಕ್ಷೆ ಸುಗುಣ ಕರ್ಕೇರ, ರಾಘವೇಂದ್ರ ಬೈಕಾಡಿ, ರವೀಶ್‌, ಪ್ರಬಂಧಕ ಸತೀಶ್ ಅಮೀನ್ ಪಡುಕರೆ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.