ಮೂಳೂರು : ಚಲಿಸುತ್ತಿದ್ದ ಬಸ್ಸಿನ ಚಾಲಕ ಅಸ್ವಸ್ಥ, ರಾ.ಹೆ. ಬಳಿ ಮರಕ್ಕೆ ಢಿಕ್ಕಿ ಹೊಡೆದು ನಿಂತ ಬಸ್ಸು
ವಿಜಯ ಲಕ್ಷ್ಮೀ ಬಸ್ಸಿನ ಚಾಲಕ ಅಸ್ವಸ್ಥತೆಯ ನಡುವೆಯೂ ಪ್ರಯಾಣಿಕರ ರಕ್ಷಣೆ
(Muluru) ಮೂಳೂರು : ಚಲಿಸುತ್ತಿದ್ದ ಬಸ್ಸಿನ ಚಾಲಕ ತೀವ್ರ ಅಸ್ವಸ್ಥಗೊಂಡು ಬಸ್ಸನ್ನು ಪಕ್ಕಕ್ಕೆ ತಿರುಗಿಸಿ ಮರಕ್ಕೆ ಡಿಕ್ಕಿ ಹೊಡೆದು ನಿಲ್ಲಿಸಿ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿದ ಘಟನೆ ಗುರುವಾರ ಸಂಜೆ ಘಟಿಸಿದೆ.
ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ವೇಗದೂತ ವಿಜಯಲಕ್ಷ್ಮೀ ಬಸ್ಸಿನ ಚಾಲಕ ಮೂಳೂರು ಸೊಸೈಟಿ ಸಮೀಪ ಬರುತ್ತಿದ್ದಂತೆ ವೇಳೆ ತೀವ್ರ ಅಸ್ವಸ್ಥಗೊಂಡಿದ್ದು, ಬಸ್ಸು ಚಾಲಕನ ನಿಯಂತ್ರಣ ಕಳೆದುಕೊಳ್ಳುವಂತಿತ್ತು. ಚಾಲಕ ಅಸ್ವಸ್ಥಗೊಂಡರೂ, ಬಸ್ಸನ್ನು ಎಡಕ್ಕೆ ತಿರುಗಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾನೆ.
ಚಾಲಕನ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ಅವಘಢವೊಂದು ತಪ್ಪಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

