ಪಡುಬಿದ್ರಿ ಬಾಲ ಗಣಪತಿ ಕ್ಷೇತ್ರದ ಬಾಲಗಣಪತಿಯ ಮೃಣ್ಮಯ ಮೂರ್ತಿ ವಿಸರ್ಜನೆ
ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೊಂಡು ವಿಜಯದಶಮಿಯಂದು ಜಲಸ್ತಂಭನ
photo credit : ravi digitals, padubidri.
(Padubidri) ಪಡುಬಿದ್ರಿ : ಮಕ್ಕಳಿಂದಲೇ ನಿರ್ಮಿತವಾದ ಕ್ಷೇತ್ರವೆಂಬ ಪ್ರತೀತಿಯಿರುವ ಪಡುಬಿದ್ರಿ ಬಾಲ ಗಣಪತಿ ಕ್ಷೇತ್ರದ ಬಾಲಗಣಪತಿಯ ಮೂರ್ತಿ ವಿಸರ್ಜನಾ ಶೋಭಾಯಾತ್ರೆಯು ಬುಧವಾರ ಸಂಪನ್ನಗೊಂಡಿದ್ದು, ಪಡುಬಿದ್ರಿ ಸಮುದ್ರದಲ್ಲಿ ಜಲಸ್ಥಂಭನಗೊಂಡಿತು.
ಪಡುಬಿದ್ರಿ ಬಾಲಗಣಪತಿ ದೇಗುಲದಲ್ಲಿ ಮೃಣ್ಮಯ ಮೂರ್ತಿಯು ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲ್ಪಟ್ಟು ವಿಜಯದಶಮಿಯಂದು ಜಲಸ್ತಂಭನವಾಗುತ್ತದೆ.
ಬಾಲಗಣಪತಿ ಕ್ಷೇತ್ರವು ಈ ಸಂದರ್ಭದಲ್ಲಿ ಮಾತ್ರ ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರತಿದಿನ ಸುಮಾರು 3 ಗಂಟೆಯ ಬಳಿಕ ಪೂಜಾ ವಿಧಿವಿಧಾನಗಳು ಜರಗಿ ಮಹಾ ಮಂಗಳಾರತಿಯೊಂದಿಗೆ ಸಂಪನ್ನಗೊಳ್ಳುತ್ತದೆ. ಭಕ್ತರ ಹರಕೆಯಾಗಿ ರಂಗಪೂಜೆಯು ಇಲ್ಲಿನ ವಿಶೇಷತೆಯಾಗಿದೆ.
ಶೋಭಾಯಾತ್ರೆಯಲ್ಲಿ ಭಜನಾ ತಂಡ, ವಿವಿಧ ವೇಷಗಳು, ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ಹುಲಿ ವೇಷ ತಂಡವು ಪಲ್ಲಕ್ಕಿಯಲ್ಲಿ ಹೊತ್ತ ಬಾಲಗಣಪತಿಯ ಮೂರ್ತಿಯೊಂದಿಗೆ ಸಾಗಿತು.
ಈ ಸಂದರ್ಭ ಅರ್ಚಕ ಗಣಪತಿ ಭಟ್ ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು.

