ಎಂಜಿಎಂ ಕಾಲೇಜು : ನಡೆದ ‘ನಡಿಗೆ – ಸಾವಿರ ಹೆಜ್ಜೆಗಳಿಗೆ ನಿಮ್ಮ ಕೊಡುಗೆ’ ಕಾರ್ಯಕ್ರಮ
ಗ್ರೀನ್ ಸೋಲ್ ಫೌಂಡೇಶನ್ ಇದರ ಸ್ಥಾಪಕ ಶ್ರೀಯಾಂಶ್ ಭಂಡಾರಿಯವರಿಗೆ ಅಭಿನಂದನೆ
(Udupi) ಉಡುಪಿ: ಎಂ ಜಿ ಎಂ ಕಾಲೇಜಿನಲ್ಲಿ ನಡೆದ ‘ನಡಿಗೆ – ಸಾವಿರ ಹೆಜ್ಜೆಗಳಿಗೆ ನಿಮ್ಮ ಕೊಡುಗೆ’ ಎಂಬ ಪಾದರಕ್ಷೆಗಳ ಸಂಗ್ರಹ ಅಭಿಯಾನ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಗ್ರೀನ್ ಸೋಲ್ ಫೌಂಡೇಶನ್ ಇದರ ಸ್ಥಾಪಕರಾದ ಶ್ರೀಯಾಂಶ್ ಭಂಡಾರಿಯವರನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಭಿಯಾನದ ನೇತೃತ್ವ ವಹಿಸಿದ ನಿರೂಪಕ ಅವಿನಾಶ್ ಕಾಮತ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ವಿಶ್ವನಾಥ್ ಶೆಣೈ, ಸಂಚಾಲಕರಾದ ರವಿರಾಜ್ ಹೆಚ್. ಪಿ, ಅಧ್ಯಕ್ಷರಾದ ಪ್ರೊ. ಶಂಕರ್, ಸಂಧ್ಯಾ ಶೆಣೈ ಮುಂತಾದವರು ಉಪಸ್ಥಿತರಿದ್ದರು.

