• Home  
  • ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿ ಕಾರ್ಯಕಾರಿ ಸಂಘದ ಉದ್ಘಾಟನೆ (Inauguration of the Student Executive Association at Vaikunta Baliga Law College)
- ಶಾಲಾ ಕಾಲೇಜು

ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿ ಕಾರ್ಯಕಾರಿ ಸಂಘದ ಉದ್ಘಾಟನೆ (Inauguration of the Student Executive Association at Vaikunta Baliga Law College)

Share: ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿ ಕಾರ್ಯಕಾರಿ ಸಂಘದ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿದ ಕಾರ್ಪೋರೇಟ್ ವ್ಯವಹಾರಗಳ ನಿರ್ದೇಶಕ ಡಾ. ಹರೀಶ್ ಕುಮಾರ್ ಎಸ್ (Udupi) ಉಡುಪಿ : ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವಿದ್ಯಾರ್ಥಿ ಕಾರ್ಯಕಾರಿ ಸಂಘದ ಉದ್ಘಾಟನೆಯನ್ನು ಮಣಿಪಾಲದ ಮಾಹೆಯ ಪ್ರಾಧ್ಯಾಪಕರು ಹಾಗೂ ಕಾರ್ಪೋರೇಟ್ ವ್ಯವಹಾರಗಳ ನಿರ್ದೇಶಕರಾದ ಡಾ. ಹರೀಶ್ ಕುಮಾರ್ ಎಸ್ ಉದ್ಘಾಟಿಸಿದರು.   ಅವರು ಮಾತನಾಡುತ್ತಾ, ಪ್ರಸ್ತುತ ಸಭೆಯ ಎಲ್ಲಾ ಕ್ಷೇತ್ರದಲ್ಲಿಯೂ ಕಾನೂನು ಪದವೀಧರರಿಗೆ ವಿಪುಲ […]

(Udupi) ಉಡುಪಿ : ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವಿದ್ಯಾರ್ಥಿ ಕಾರ್ಯಕಾರಿ ಸಂಘದ ಉದ್ಘಾಟನೆಯನ್ನು ಮಣಿಪಾಲದ ಮಾಹೆಯ ಪ್ರಾಧ್ಯಾಪಕರು ಹಾಗೂ ಕಾರ್ಪೋರೇಟ್ ವ್ಯವಹಾರಗಳ ನಿರ್ದೇಶಕರಾದ ಡಾ. ಹರೀಶ್ ಕುಮಾರ್ ಎಸ್ ಉದ್ಘಾಟಿಸಿದರು.

  ಅವರು ಮಾತನಾಡುತ್ತಾ, ಪ್ರಸ್ತುತ ಸಭೆಯ ಎಲ್ಲಾ ಕ್ಷೇತ್ರದಲ್ಲಿಯೂ ಕಾನೂನು ಪದವೀಧರರಿಗೆ ವಿಪುಲ ಅವಕಾಶಗಳಿವೆ. ಈ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಯಶಸ್ವಿಯಾಗಲು ಸಮರ್ಥ ಸಂವಹನ ಕೌಶಲ್ಯಗಳ ಕಲಿಕೆ ಅವಶ್ಯಕ. ಕಾನೂನು ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆಯ ಹೆಚ್ಚಿನ ಪಾತ್ರ ಮತ್ತು ಭವಿಷ್ಯದ ಕಾನೂನು ವೃತ್ತಿಪರರು ಆಧುನಿಕ ತಂತ್ರಜ್ಞಾನಗಳನ್ನು ಹೊಂದುವ ಅಗತ್ಯತೆ ಇದೆ. ಈ ಬಗ್ಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

 ನಾಯಕತ್ವದ ಕುರಿತು ಮಾತನಾಡಿದ ಅವರು, ನಾಯಕತ್ವದಲ್ಲಿ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯುತ ನಡವಳಿಕೆ ಅತ್ಯಂತ ಮುಖ್ಯ. ಒಬ್ಬ ನಾಯಕನನ್ನು ಅವನ ಮಾತುಗಳಿಂದ ಅಲ್ಲ, ಬದಲಾಗಿ ಆತನ ಕಾರ್ಯಗಳಿಂದ ಆರಿಸಿಕೊಳ್ಳುವುದಿಲ್ಲ. ನಾಯಕನು ತನ್ನ ನಡೆ-ನುಡಿಗಳ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಸುರೇಖ ಕೆ ಯವರು ವಹಿಸಿದ್ದರು.

  ಉಪಪ್ರಾಂಶುಪಾಲೆ ಡಾ. ಪ್ರೀತಿ ಹರೀಶ್ ರಾಜ್ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

 ಮಾನವಿಕ ವಿಭಾಗದ ಮುಖ್ಯಸ್ಥರಾದ ಪ್ರೊ. ರೋಹಿತ್ ಎಸ್ ಅಮೀನ್ ಸಂಯೋಜಕರಾದ ಡಾ. ಜಯಮೋಲ್ ಮತ್ತು ಪಿ.ಎಸ್. ವಿದ್ಯಾರ್ಥಿನಿ ಭಾವನಾ ಸ್ವಾಗತಿಸಿದರು. ರಿಶಾಲಿ ನಿರೂಪಿಸಿದರು. ವಾಸುದೇವ ತಿಲಕ್ ಅತಿಥಿಗಳನ್ನು ಪರಿಚಯಿಸಿದರು ಶ್ರೀಶಾ ಪೈ ವಂದನಾಪಣೆ ಸಲ್ಲಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.