• Home  
  • ಶಾಶ್ವತ ಸತ್ಯವೇ ವಿಜ್ಞಾನ: ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಶ್ರೀಕೃಷ್ಣಾಪುರಮಠ (Eternal truth is science: Srividyasagatheertha Sripadaru, Srikrishnapur Math)
- ಧಾರ್ಮಿಕ

ಶಾಶ್ವತ ಸತ್ಯವೇ ವಿಜ್ಞಾನ: ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಶ್ರೀಕೃಷ್ಣಾಪುರಮಠ (Eternal truth is science: Srividyasagatheertha Sripadaru, Srikrishnapur Math)

Share:  ಶಾಶ್ವತ ಸತ್ಯವೇ ವಿಜ್ಞಾನ: ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಶ್ರೀಕೃಷ್ಣಾಪುರಮಠ ಉಡುಪಿಯ ಶ್ರೀಮನ್ಮಧ್ವ ಸಿದ್ಧಾಂತ ಪ್ರಬೋಧಿನೀ ಸಂಸ್ಕೃತ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ  (Udupi) ಉಡುಪಿ: ಉಡುಪಿಯ ಶ್ರೀಮನ್ಮಧ್ವ ಸಿದ್ಧಾಂತ ಪ್ರಬೋಧಿನೀ ಸಂಸ್ಕೃತ ಕಾಲೇಜಿನಲ್ಲಿ ನಿಟ್ಟೆ ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ ನಡೆದ ಜ್ಯೋತಿರ್ವಿಜ್ಞಾನಮ್ ಎಂಬ ಒಂದು ದಿನದ ಸಮ್ಮೇಳನದ ಸಮಾರೋಪ ಕಾರ್ಯಕ್ರಮ ಉಡುಪಿ ಸಂಸ್ಕೃತ ಕಾಲೇಜಿನ ಭೀಮ ಸಭಾಂಗಣದಲ್ಲಿ ನಡೆಯಿತು.  ಕೃಷ್ಣಾಪುರಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥಶ್ರೀಪಾದರು ಭಾಗವಹಿಸಿ ಅನುಗ್ರಹ ಸಂದೇಶ  ನೀಡಿದರು.   “ಅನುಭವ ಮತ್ತು ಅಧ್ಯಯನಗಳು ಸಾಗಿದಂತೆ ಹಲವು […]

 (Udupi) ಉಡುಪಿ: ಉಡುಪಿಯ ಶ್ರೀಮನ್ಮಧ್ವ ಸಿದ್ಧಾಂತ ಪ್ರಬೋಧಿನೀ ಸಂಸ್ಕೃತ ಕಾಲೇಜಿನಲ್ಲಿ ನಿಟ್ಟೆ ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ ನಡೆದ ಜ್ಯೋತಿರ್ವಿಜ್ಞಾನಮ್ ಎಂಬ ಒಂದು ದಿನದ ಸಮ್ಮೇಳನದ ಸಮಾರೋಪ ಕಾರ್ಯಕ್ರಮ ಉಡುಪಿ ಸಂಸ್ಕೃತ ಕಾಲೇಜಿನ ಭೀಮ ಸಭಾಂಗಣದಲ್ಲಿ ನಡೆಯಿತು.

 ಕೃಷ್ಣಾಪುರಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥಶ್ರೀಪಾದರು ಭಾಗವಹಿಸಿ ಅನುಗ್ರಹ ಸಂದೇಶ  ನೀಡಿದರು.

  “ಅನುಭವ ಮತ್ತು ಅಧ್ಯಯನಗಳು ಸಾಗಿದಂತೆ ಹಲವು ಬಾರಿ ಜ್ಞಾನಕ್ಕೆ ಪರಿಷ್ಕಾರಗಳು ಆಗುತ್ತವೆ. ಆದರೆ ಕೆಲವು ಜ್ಞಾನಗಳಿಗೆ ಪರಿಷ್ಕಾರವೇ ಇರುವುದಿಲ್ಲ, ಅವುಗಳು ಶಾಶ್ವತವಾಗಿ ಸತ್ಯವೇ ಆಗಿರುತ್ತದೆ. ಅವುಗಳಿಗೆ ವಿಜ್ಞಾನ ಎಂದು ಹೇಳುತ್ತಾರೆ.

  ನಮ್ಮ ಭಾರತೀಯ ಋಷಿಗಳ ಅಂತರ್ದೃಷ್ಟಿಗೆ ಗೋಚರವಾದ ಜ್ಞಾನವು ಶಾಶ್ವತ ಸತ್ಯವಾಗಿದ್ದು, ಅವುಗಳೂ ವಿಜ್ಞಾನವೇ ಆಗಿದೆ. ಇದಕ್ಕೆ ಜ್ಯೋತಿಷ್ಯ ಶಾಸ್ತ್ರವೇ ನಿದರ್ಶನ. ಏಕೆಂದರೆ ಪ್ರತ್ಯಕ್ಷಂ ಜ್ಯೋತಿಷಂ ಶಾಸ್ತ್ರಂ ಚಂದ್ರಾರ್ಕೌ ಯತ್ರ ಸಾಕ್ಷಿಣೇ ಎಂದು ಜ್ಯೋತಿಷ್ಯವು ಪ್ರತ್ಯಕ್ಷಸಿದ್ದವಾದ ಶಾಸ್ತ್ರವಾದ್ದರಿಂದ ವಿಜ್ಞಾನವೇ ಆಗಿದೆ.

 ಉದಾತ್ತ ವಿಚಾರಗಳನ್ನು ಎಲ್ಲೆಡೆಯಿಂದ ಸ್ವೀಕರಿಸುವುದೇ ನಮ್ಮ ಸಂಸ್ಕೃತಿಯಾಗಿದೆ. ಇದನ್ನು ಉಳಿಸಬೇಕು. ಈ ಜ್ಯೋತಿಷ್ಯ ಶಾಸ್ತ್ರಕ್ಕೂ ತುಳುನಾಡಿನ ವಿಶೇಷ ಕೊಡುಗೆ ಇದೆ. ಈ ತುಳುನಾಡಿನಲ್ಲಿ ಶ್ರೀಮಧ್ವಾಚಾರ್ಯರಿಗಿಂತ ಪೂರ್ವದಿಂದಲೂ ಸಿಂಹ ಮಾಸದಲ್ಲೇ ಕೃಷ್ಣಾಷ್ಟಮೀ ಆಚರಿಸುವ ಕ್ರಮ ರೂಢಿಯಲ್ಲಿತ್ತು. ಕಾರಣವೇನೆಂದರೆ ಅಷ್ಟಮಿ ತಿಥಿಗೆ ರೋಹಿಣೀ ಯೋಗ ಬರುವುದು ಸಿಂಹ ಮಾಸದಲ್ಲಿ ಮಾತ್ರ, ಬೇರೆ ಮಾಸಗಳಲ್ಲಿ ಬರುವುದಿಲ್ಲ. ಇಲ್ಲಿ ಶ್ರಾವಣವೇ ಆಗಬೇಕು ಅಥವಾ ಬಾದ್ರಪದವೇ ಆಗಬೇಕು ಎಂಬ ಆಗ್ರಹವು ಕಾರಣವಲ್ಲ ಎಂದು ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀಶ್ರೀ ವಿದ್ಯಾಸಾಗರ ತೀರ್ಥಶ್ರೀಪಾದರು ಅಭಿಪ್ರಾಯಪಟ್ಟರು.

 ಸಂಸ್ಕೃತ ಕಾಲೇಜಿನಲ್ಲಿ ಇಂತಹಾ ವಿಜ್ಞಾನಗೋಷ್ಠಿಗಳು ನಿರಂತರವಾಗಲಿ ಎಂದು ಆಶೀರ್ವದಿಸಿದರು.

  ಸಮಾರೋಪ ಭಾಷಣ ಮಾಡಿದ ಪ್ರೊ. ಎ. ಪಿ. ಭಟ್,   ಪ್ರಾಚೀನ ಭಾರತೀಯರ ಜ್ಞಾನ ಅಗಾಧವಾಗಿತ್ತು. ಪಶ್ಚಿಮದ ಆಧುನಿಕ ವಿಜ್ಞಾನ ಬೆಳೆಯುವ ಎಷ್ಟೋ ವರ್ಷಗಳಿಗಿಂತ ಪೂರ್ವದಲ್ಲೇ ಭಾರತೀಯರು ಅವೆಲ್ಲವನ್ನೂ ದಾಟಿ ಹೋಗಿದ್ದರು. ಅದರಲ್ಲೂ ವಿಶೇಷವಾಗಿ ಖಗೋಳ ವಿಜ್ಞಾನ ವಿಸ್ತ್ರತವಾಗಿ ಬೆಳೆದಿತ್ತು. ಖಗೋಳ ವಿಜ್ಞಾನದಿಂದಲೇ ಗಣಿತವೂ ಬೆಳೆಯಿತು. ಭಾರತೀಯ ವಿಜ್ಞಾನವೂ ತಾನು ಬೆಳೆದದ್ದಲ್ಲದೆ ಇತರ ವಿಜ್ಞಾನಗಳನ್ನೂ ತಮ್ಮೊಂದಿಗೆ ಒಯ್ದಿತು.

   ಖಗೋಳವಿಜ್ಞಾನದೊಂದಿಗೆ ವಾಸ್ತು ಶಾಸ್ತ್ರ ಧರ್ಮಶಾಸ್ತ್ರ ಶಿಲ್ಪಶಾಸ್ತ್ರಗಳೂ ಪರಸ್ಪರ ಕೊಡುಕೊಳ್ಳುವಿಕೆಯನ್ನು ಇಟ್ಟುಕೊಂಡಿತ್ತು. ಇದಕ್ಕೆ ಕಾಶಿಯ ವಿಶ್ವನಾಥನ ಮಂದಿರದ ಸುತ್ತ ಕಟ್ಟಿರುವ ದ್ವಾದಶ ಸೂರ್ಯ ಮಂದಿರಗಳೇ ಸಾಕ್ಷಿ. ಪಾಶ್ಚಿಮಾತ್ಯ ವಿಜ್ಞಾನಿಗಳೂ ಭಾರತೀಯರ ಕೊಡುಗೆಗಳನ್ನು ಸ್ಮರಿಸಿಕೊಂಡಿದ್ದಾರೆ.  

  ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ವಿದ್ವಾನ್ ಗೋಪಾಲಕೃಷ್ಣ ಜೋಯೀಸರು, ಉಡುಪಿ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅಮೃತೇಶ ಆಚಾರ್ಯರು, ಅಜಯ ಪುರುಷೋತ್ತಮ ಶೆಟ್ಟಿಯವರು ಸಮಯೋಚಿತವಾಗಿ ಮಾತನಾಡಿದರು.

 ನಿಟ್ಟೆಯ CIKS ವಿಭಾಗದ ನಿರ್ದೇಶಕರಾದ ಪ್ರೊ. ಸುಧೀರ ರಾಜ್ ಶೆಟ್ಟಿಯವರು ಪ್ರಾಸಂಗಿಕವಾಗಿ ಮಾತನಾಡಿದರು.

  ಶ್ರೀಗಳವರು ಅಥಿತಿಗಳಿಗೆ ಮತ್ತು ಸಮ್ಮೇಳನಕ್ಕೆ ಸಹಕರಿಸಿದವರಿಗೆ ಫಲಮಂತ್ರಾಕ್ಷತೆಗಳನ್ನು ನೀಡಿ ಹರಸಿದರು.

 ಈ ಸಂದರ್ಭದಲ್ಲಿ ಸಮ್ಮೇಳನದ ಸಂಚಾಲಕರಾದ ಪ್ರೊ. ಡಿ ಶಿವಪ್ರಸಾದ ತಂತ್ರಿ, ನಿಟ್ಟೆಯ ನುಕ್ಸರ್ ನ ಮುಖ್ಯಸ್ಥರಾದ ಪ್ರೊ. ಅನಿರ್ಬಾನ್ ಚಕ್ರವರ್ತಿ ಮತ್ತು ಡಾ. ನಾಗೇಶ ಭಟ್ ಕೆ.ಸಿ. ಅವರು ಉಪಸ್ಥಿತರಿದ್ದರು.

 ವಿದ್ಯಾರ್ಥಿನಿ ಕುಮಾರಿ ಅನಘಾ ಪ್ರಾರ್ಥಿಸಿದರು. ಜ್ಯೋತಿಷ್ಯ ಶಾಸ್ತ್ರ ಉಪನ್ಯಾಸಕರಾದ ಡಾ. ರಾಧಾಕೃಷ್ಣ ಬಿ ಸ್ವಾಗತಿಸಿದರು. ಪ್ರೊ. ಸತ್ಯನಾರಾಯಣ ಆಚಾರ್ಯ ಧನ್ಯವಾದ ಸಮರ್ಪಿಸಿದರು. ದಾ. ಬಿ. ಗೋಪಾಲ ಆಚಾರ್ಯರು ಕಾರ್ಯಕ್ರಮ ನಿರ್ವಹಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.